×
Ad

ಕೊಣಾಜೆ: ಕನಕದಾಸರ ಕೀರ್ತನ ಗಾಯನ ಕಾರ್ಯಕ್ರಮ ಮಾ.17ಕ್ಕೆ

Update: 2016-03-11 18:43 IST

ಕೊಣಾಜೆ: ಕನಕದಾಸರು ಪ್ರತಿಪಾದಿಸಿದ ಮೌಲ್ಯಗಳನ್ನು ಪ್ರಸ್ತುತ ಸಮಾಜಕ್ಕೆ ಪಸರಿಸಬೇಕಾದ ಸಾಂಸ್ಕೃತಿಕ ಜವಾಬ್ದಾರಿಯಿಂದ ಕನಕದಾಸ ಸಂಶೋನ ಕೇಂದ್ರವು ವಿವಿಧ ಮಾದರಿಯ ಸಾಹಿತ್ಯಿಕ, ಸಾಂಸ್ಕೃತಿಕ ಕಾಯರ್ಕ್ರಮಗಳನ್ನು ಪ್ರತಿವರ್ಷವೂ ನಡೆಸಿಕೊಂಡು ಬ  ರುತ್ತಿದ್ದು, ಕನಕ ಗಂಗೋತ್ರಿಕನಕದಾಸರ ಕೀರ್ತನ ಗಾಯನ ಕಾಯರ್ಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಗಂಗೋತ್ರಿ ಆವರಣದಲ್ಲಿ 2016ರ ಮಾರ್ಚ್ 17ರಂದು ಹಮ್ಮಿಕೊಂಡಿದೆ. 
   ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಜಾವಾಣಿ ದಿನಪತ್ರಿಕೆಯ ಸಹಾಯಕ ಸಂಪಾದಕರಾದ ಡಾ. ಆರ್. ಪೂರ್ಣಿಮಾ ಇವರು ನೆರವೇರಿಸಲಿರುವರು.
  ಸಾಮುದಾಯಿಕ ಪಾಲ್ಗೊಳ್ಳುವಿಕೆಯ ಆಶಯದ ಈ ಕಾಯರ್ಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ, ಕಣ್ಣೂರು ವಿಶ್ವವಿದ್ಯಾನಿಲಯ, ರಾಜೀವ್ ಗಾಂಧಿ ವೈದ್ಯಕೀಯ ಶಿಕ್ಷಣ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ಶಿಕ್ಷಣ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರಗಳ ವಿದ್ಯಾರ್ಥಿಗಳು, ಅಧ್ಯಾಪಕರು, ಆಡಳಿತವರ್ಗದವರು ಪಾಲ್ಗೊಳ್ಳಬಹುದಾಗಿದೆ.
 ಅಲ್ಲದೆ ಕಾಯರ್ಕ್ರಮದಲ್ಲಿ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳಿಗೆ ವಿಶ್ವವಿದ್ಯಾನಿಲ0ುದ ವತಿಯಿಂದ ಪ್ರಮಾಣ ಪತ್ರವನ್ನು ನೀಡಲಾಗುವುದು. ಈ ಕಾಯ  ರ್ಕ್ರಮದಲ್ಲಿ ವಿದ್ಯಾರ್ಥಿ ವರ್ಗ ಮತ್ತು ಅಧ್ಯಾಪಕ, ಆಡಳಿತ ಸಿಬ್ಬಂದಿ ಈ ಎರಡು ವರ್ಗಗಳಲ್ಲಿ ಆಯ್ಕೆಯಾದ ಮೂವರು ಅಭ್ಯರ್ಥಿಗಳಿಗೆ ತಲಾ ರೂ. 3,000.00 ನಗದು ಪುರಸ್ಕಾರವನ್ನು ಪ್ರಸ್ತುತ ಶೈಕ್ಷಣಿಕ ವರ್ಷದ ಕೊೆಯಲ್ಲಿ ಮಂಗಳಗಂಗೋತ್ರಿಯಲ್ಲಿ ನಡೆ0ುುವ ‘ಕನಕ ಸ್ಮೃತಿ’ ಕಾಯರ್ಕ್ರಮದಲ್ಲಿ ಕನಕ ಸ್ಮರಣಿಕೆಯೊಂದಿಗೆ ನೀಡಿ ಗೌರವಿಸಲಾಗುವುದು. ಅಂದು ಈ ಅಭ್ಯರ್ಥಿಗಳಿಂದ ಕನಕ ಕೀರ್ತನ ಗಾಯನ ಕಾರ್ಯಕ್ರಮವನ್ನು ನಡೆಸಲಾಗುವುದು.
    ಈ ಕಾಯರ್ಕ್ರಮದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ತಮ್ಮ ವಿಭಾಗದ ುುಖ್ಯಸ್ಥರ ದೃಢೀಕರಣ ಪತ್ರದೊಂದಿಗೆ ಮುಂಚಿತವಾಗಿ ಕನಕದಾಸ ಸಂಶೋಧನ ಕೇಂದ್ರದಲ್ಲಿ ತವ್ಮು ಹೆಸರನ್ನು ನೋಂದಾಯಿಸಬೇಕು ಹಾಗೂ ತಾವು ಹಾಡಲಿರುವ ಕೀರ್ತನೆಯ ಸಾಲನ್ನು ಮುಂಚಿತವಾಗಿಯೇ ತಿಳಿಸಬೇಕಾಗಿದ್ದು  ಕನಕದಾಸ ಸಂಶೋಧನ ಕೇಂದ್ರದಲ್ಲಿ ಕನಕದಾಸರ ಕೀರ್ತನೆಗಳುಕೃತಿಯು ಲಭ್ಯವಿರುವುದರಿಂದ ಅಭ್ಯರ್ಥಿಗಳು ಸದುಪಯೋಗಿಸಿಕೊಳ್ಳಬಹುದು.  ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಯನ್ನು  (0824) 2284360 ಸಂಪರ್ಕಿಸಬಹುದಾಗಿದೆ ಕನಕದಾಸ ಸಂಶೋಧನಾ ಕೇಂದ್ರದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News