ಬೆಳ್ತಂಗಡಿ : ಮಾ. 14 ರಂದು ಪಂಚಾಯತ್ ಮುಂದೆ ಪ್ರತಿಭಟನೆ
ಬೆಳ್ತಂಗಡಿ : ಲಾಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ನಡೆದಿಲ್ಲ.ಕುಡಿಯುವ ನೀರಿನ ವ್ಯವಸ್ಥೆ ಸರಿಪಡಿಸಬೇಕು,ಶೌಚಾಲಯ, ಹದಗೆಟ್ಟ ರಸ್ತೆಗಳು, ದಾರಿದೀಪ ಮೊದಲಾದ ಸಮಸ್ಯೆಗಳನ್ನು ಇಲ್ಲಿನ ಜನರು ಎದುರಿಸುತ್ತಿದ್ದಾರೆ. ಲಾಲ ಗ್ರಾ. ಪಂ.ಗೆ ಮನವಿಗಳನ್ನು ನೀಡಿದ್ದರೂ ಯಾವುದೇ ಸ್ಪಂದನೆ ಇಲ್ಲವಾಗಿದ್ದು, ಇದನ್ನು ವಿರೋಧಿಸಿ ಮಾ. 14 ರಂದು ಪಂಚಾಯತ್ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ದಲಿ ಮುಖಂಡನಾಗರಾಜ್ ಎಸ್.
ಲಾಲ ತಿಳಿಸಿದ್ದಾರೆ. ಅವರು ಶುಕ್ರವಾರ ಬೆಳ್ತಂಗಡಿ ವಾರ್ತಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದರು. ಲಾಯಿಲದಲ್ಲಿ ಕುಡಿಯುವ ನೀರಿನ ಸಂಪರ್ಕ ಇದ್ದರೂ ನೀರು ಸರಿಯಾಗಿ ಸಿಗುತ್ತಿಲ್ಲ ಕೆಲವೆಡೆ ಕುಡಿಯುವ ನೀರಿಗಾಗಿ ನದಿಗಳ ಕೊಳಚೆ ನಿರನ್ನೇ ಅವಲಮಬಿಸುತ್ತಿದ್ದಾರೆ. ವಿವಿದ ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಬೇಡಿಕೆಗಳು ಈಡೇರಿಕೆಯಾಗದಿರುವ ಹಿನ್ನಲೆಯಲ್ಲಿ ಹಾಗೂಅಭಿವೃದ್ಧಿ ಕಾರ್ಯಗಳುಸರಿಯಾಗಿ
ನಡೆಯದೆ ಜನ ಪರದಾಡುತ್ತಿದ್ದು ಇದಕ್ಕಾಗಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು. ಪಂಚಾಯತ್‌ಗೆ ಬರುವ ಎಸ್‌ಸಿ, ಎಸ್‌ಟಿ ಅನುದಾನಸರಿಯಾಗಿಬಳಕೆಯಾಗುತ್ತಿಲ್ಲ, ಪಂಚಾಂುತ್ ಅಭಿವೃದ್ಧಿ ಅಧಿಕಾರಿಂಯವರುಕಳೆದ 5 ವರ್ಷಗಳಿಂದ ಇಲ್ಲೇ ಠಿಕಾಣಿ ಹೂಡಿದ್ದು ಸಾರ್ವಜನಿಕರು ಇವರ ವರ್ಗಾವಣೆಯನ್ನು ಬಯಸಿದರೆ ಇವರು ಗ್ರಾಮಸ್ಥರಿಂದ ಸಹಿ ಸಂಗ್ರಹಣಾ ಅಭಿಯಾನದಲ್ಲಿ ತೊಡಗಿದ್ದಾರೆ. ಕೂಡಲೇ ಇವರನ್ನು ವರ್ಗಾವಣೆಗೊಳಿಸಬೇಕು ಹಾಗೂ ಅಬಿವೃದ್ದಿ ಚಟುವಟಿಕೆಗಳು ಸರಿಯಾಗಿ ನಡೆಯುವ ವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ತಿಳಿಸಿದರು. ಗೋಷ್ಠಿಯಲ್ಲಿ ಬೈರ ಸಂಘದ ಸೇವಾ ಸಮಿತಿ ಉಪಾಧ್ಯಕ್ಷ ಸುರೇಶ್ ಬಿ. ಎಸ್., ಮಹಮ್ಮಾಯಿ ಬೈರ ಯುವ ವೇದಿಕೆಯ ಅಧ್ಯಕ್ಷ ರಿತೇಶ್, ಕಕ್ಕೇನ ಮದರಸ ಶಾಲೆಯ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮಹಮ್ಮದ್ ಆಲಿ, ಸದಸ್ಯ ಅಶ್ರಫ್,ಅಬೂಬಕ್ಕರ್ ಉಪಸ್ಥಿತರಿದ್ದರು.