ಭಟ್ಕಳ: ಗೋಲ್ಡ್ ಅಸೋಸಿಯೇಶನ್ ನಿಂದ ಪ್ರತಿಭಟನೆ
ಭಟ್ಕಳ : ಕೇಂದ್ರ ಸರ್ಕಾರ ಭಂಗಾರದ ಆಭರಣಗಳ ವಹಿವಾಟಿನ ಮೇಲೆ 1% ಕೇಂದ್ರ ಸೇವಾ ಶುಲ್ಕ ಹೊರಿಸಿ ಕಾನೂನಿನಲ್ಲಿ ಮಾರ್ಪಾಡು ಮಾಡಿರುವ ಕ್ರಮವನ್ನು ಹಿಂತೆಗೆದುಕೊಳ್ಳಭೇಕಾಗಿ ಆಗ್ರಹಿಸಿ ಭಟ್ಕಳ ಗೋಲ್ಡ್ ಅಸೋಸಿಯೇಷನ್ ವತಿಯಿಂದ ಶುಕ್ರವಾರ ಪ್ರತಿಭಟನೆ ಮೆರವಣಿಗೆ ನಡೆಸಿ ಮಾನ್ಯ ಸಹಾಯಕ ಕಮೀಷನರ್ ಮುಖಾಂತರ ಪ್ರಧಾನ ಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.
ಕೇಂದ್ರ ಸರ್ಕಾರ ಈ ವರ್ಷದ ಬಜೇಟ್‌ನಲ್ಲಿ ಬಂಗಾರದ ಆಭರಣಗಳ ಮೇಲೆ ಸೇವಾ ಶುಲ್ಕ ಹಾಕುವುದರ ಜೊತೆಗೆ, 25ಲಕ್ಷದ ಮೆಲೆ ತೆರಿಗೆ ಬಾಕಿ ಪಾವತಿಸದಿದ್ದಲ್ಲಿ 7 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. ತೆರಿಗೆ ಪಾವತಿಸದಿದ್ದರೆ ಎಲ್ಲಾ ವಸ್ತುಗಳನ್ನು ಮತ್ತು ಅಂಗಡಿ ಹಾಗೂ ತಯಾರಿಸುವ ಘಟಕ ಮನೆಯನ್ನು ಜಪ್ತಿ ಮಾಡಬಹುದು. 6 ತಿಂಗ ವರೆಗೆ ಸರ್ಕಾರ ಜಪ್ತಿಯಲ್ಲಿ ಇಟ್ಟಿಕೊಳ್ಳಬಹುದು. ತೆರಿಗೆ ಅಧಿಕಾರಿಗಳ ಜೊತೆ ಅನುಚಿತವಾಗಿ ವರ್ತಿಸಿದಲ್ಲಿ 3 ತಿಂಗಳ ಜೈಲು ಶಿಕ್ಷೆ ವಿಧಿಸಲಾಗುವುದು. ಬಂಗಾರ ಕರಗಿಸುವವರು ಕಡ್ಡಾಯವಾಗಿ ಸರ್ಕಾರ ಅಧಿಕೃತವಾಗಿ ಪರವಾನಿಗೆ ಪಡೆದ ಸರ್ಕಾರಿ ಸಂಸ್ಥೆಯಿಂದ ಮಾತ್ರ ಕರಗಿಸಬೇಕು. ಸ್ಟಾಕ್ ಇಟ್ಟ ಅಂಗಡಿಯನ್ನು ಮತ್ತು ಸರಕನ್ನು ಜಪ್ತಿ ಮಾಡಬಹುದು. ಬಂಗಾರದ ಆಭರಣ ತಯಾರಿಕೆ ಮತ್ತು ಹೊಸದಾಗಿ ಮಾಡಿದ ಸರಕನ್ನು ಪುಸ್ತಕವನ್ನು ಇಡಬೇಕು. ಬಂಗಾರ ಖರೀದಿ ಮಾಡಲು ಆರ್‌ಟಿಜಿಎಸ್ ಅಥವಾ ಚೆಕ್ ಮೂಲಕವೇ ಮಾಡಬೇಕು. 2 ಲಕ್ಷದ ಮೇಲ್ಪಟ್ಟು ವ್ಯವಹರಿಸಲು ಮಾನ್ ಕಾರ್ಡ್ ಕಡ್ಡಾಯ ಎನ್ನುವ ನಿಯಮವನ್ನು ಸರ್ಕಾರ ವಿಧಿಸಿದೆ.
ಸರ್ಕಾರದ ಈ ನೀತಿಯಿಂದಾಗಿ ಸಣ್ಣ ಬಂಗಾರದ ಅಂಗಡಿಗಳು ಕಂಪನಿ ಬಂಗಾರ ಮಾರಾಗಾರರ ಮುಂದೆ ಪೈಪೋಟಿ ಮಾಡಲು ಸಾಧ್ಯವಾಗುತ್ತಿಲ್ಲ. ಕೋಟ್ಯಾಂತರ ಹಣ ತೊಡಗಿಸುವರ ಮುಂದೆ ಸಣ್ಣ ಬಂಗಾರದ ಅಂಗಡಿಗಳು ಮುಚ್ಚಿಕೊಂಡು ಹೋಗುವ ಹಂತದಲ್ಲಿ ಇವೆ. ಸಣ್ಣ ಬಂಗಾರದ ಅಂಗಡಿಗಳು ಗ್ರಾಹಕರಿಂದ ಬಂದ ಬಂಗಾರದಿಂದ ಆಭರಣ ತಯಾರಿಸಿ, ಹಾಗೂ ರಿಪೇರಿ ಕೆಲಸ ಮಾಡಿಕೊಡುವಂತದ್ದಾಗಿರುತ್ತದೆ. ಇಂತಹ ಸಂಧರ್ಭದಲ್ಲಿ ಲೆಕ್ಕ ಪತ್ರ ಇಡುವುದು, ಕಷ್ಟ ಸಾಧ್ಯದ ಕೆಲಸವಾಗಿರುತ್ತದೆ. ಬಂಗಾರವನ್ನು ಸರ್ಕಾರದಿಂದ ನೊಂದಾಯಿತವಾದ ಸಂಸ್ಥೆಯಿಂದ ಮಾತ್ರ ಬಂಗಾರ ಕರಗಿಸುವುದು, ಮತ್ತು ಮಾರಾಟ ಮಾಡುವುದು, ಅಸಾಧ್ಯದ ಮಾತಾಗಿರುತ್ತದೆ. ಆದ್ದರಿಂದ ಸರ್ಕಾರ ಕೂಡಲೇ ಬಂಗಾರದ ಮೇಲೆ ಹೊರಿಸಿದ ಕೇಂದ್ರ ಸೇವಾಶುಲ್ಕವನ್ನು ವಾಪಾಸ ಪಡೆಯಬೇಕು ಮತ್ತು ನಮಗೆ ಆಗುವ ಎಲ್ಲಾ ತೊಂದರೆಯನ್ನು ಅರಿತು ನಮ್ಮ ಬೇಡಿಕೆಯನ್ನು ಬಗೆಹರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.
ಪವಿಭಾಗಾಧಿಕಾರಿಗಳ ಅನುಪಸ್ಥಿತಿಯಲ್ಲಿ ಕಛೇರಿ ವ್ಯವಸ್ಥಾಪಕ ಬಿ.ಕೆ. ಮೇಸ್ತ ಮನವಿ ಸ್ವೀಕರಿಸಿದರು. ಭಟ್ಕಳ ಗೋಲ್ಡ್ ಅಸೋಸಿಯೇಸನ್ ಸದಸ್ಯರಾದ ಎಸ್.ವಿ.ಶೇಟ್, ನಾಗರಜ ಶೇಟ್, ಸಂದೀಪ ಶೇಟ್, ಸಾಯಿಕ್ ಕೋಲಾ, ಅಬುಜರ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.