ಮಂಗಳೂರು: ವಿವಾಹ ಪೂರ್ವ ಆಪ್ತ ಸಮಾಲೋಚನೆ
Update: 2016-03-11 20:23 IST
ಮಂಗಳೂರು: ಫಾವರ್ಡ್ ಟ್ರಸ್ಟ್, ಮಂಗಳೂರು ಇದರ ವತಿಯಿಂದ ವಿವಾಹ ಪೂರ್ವ ಆಪ್ತ ಸಮಾಲೋಚನೆ ಎಂಬ ಜಿಲ್ಲಾ ಮಟ್ಟದ ಕಾರ್ಯ ಕ್ರಮವು ಇತ್ತೀಚೆಗೆ ನಗರ ಹಿದಾಯತ್ ಸೆಂಟರ್‌ನಲ್ಲಿ ನಡೆಯಿತು.
ಕಾರ್ಯಕ್ರಮದ ಸಮಾರೋಪ ನೆರೆವೇರಿಸಿದ ಫಾವರ್ಡ್ ಟ್ರಸ್ಟ್, ಮಂಗಳೂರು ಇದರ ಪದಾಧಿಕಾರಿಯಾದ ಸಾಜಿದಾ ಮೂಮಿನ್‌ರವರು ವಿವಾಹವು ಎರಡು ಕುಟುಂಬಗಳ ನಡುವೆ ನಡೆಯುವ ಒಪ್ಪಂದವಾಗಿದೆ. ಪತಿಪತ್ನಿಯರ ಸಂಬಂಧವು ಅತ್ಯಮೂಲ್ಯ ಹಾಗೂ ಪವಿತ್ರವಾದುದು. ಪತಿ-ಪತ್ನಿಯರು ಧನಾ ತ್ಮಕವಾಗಿ ಚಿಂತಿಸುವುದು, ಪರಸ್ಪರ ಗೌರವಿಸುವುದು ಅತೀ ಅಗತ್ಯವಾಗಿದೆ. ಜೀವನದ ಪ್ರತಿ ಹಂತದಲ್ಲಿ ಅಲ್ಲಾಹನ ಹಾಗೂ ಆತನ ಪ್ರವಾದಿಯ ಆಜ್ಞಾನು ಸರಣೆ ಅತೀ ಮುಖ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮರ್ಯಮ್ ಶಹೀರಾ, ಶಹನಾಝ್ ಎಂ., ರಹ್ಮತ್ ಸಭಿಕರೊಂದಿಗೆ ಸಮಾಲೋಚನೆ ನಡೆಸಿದರು. ಕಾರ್ಯಕ್ರಮದ ಆರಂಭವು ರುಕ್ಸಾನ ಉಮರ್‌ರವರ ದರ್ಸೆ ಕುರ್‌ಆನ್‌ನಿಂದ ಆರಂಭವಾಯಿತು. ಶಹನಾಝ್ ಎಂ. ಪ್ರಸ್ತಾವನೆಗೈದರು. ಗುಲ್ಶನ್ ಕಾರ್ಯಕ್ರಮ ನಿರೂಪಿಸಿದರು.