ಬೆಳ್ತಂಗಡಿ : ಗ್ರಾಮಕರಣಿಕನ ಮೇಲೆ ಹಲ್ಲೆ: ಪ್ರಕರಣ ದಾಖಲು
Update: 2016-03-11 20:37 IST
ಬೆಳ್ತಂಗಡಿ : ಪಡಂಗಡಿ ಗ್ರಾಮದ ಗ್ರಾಮಕರಣಿಕ ಆತ್ಮಾನಂದ ಎಂಬವರ ಮೇಲೆ ಕರ್ತವ್ಯನಿರತರಾಗಿದ್ದಾಗ ಪಡಂಗಡಿ ಗ್ರಾಪಂ ಉಪಾಧ್ಯಕ್ಷ ಸಂತೋಷ್ ಕುಮಾರ್ ಎಂಬವರು ಹಲ್ಲೆ ನಡೆಸಿರುವುದಾಗಿ ಬೆಳ್ತಂಗಡಿ ಪೋಲೀಸರಿಗೆ ದೂರು ನೀಡಲಾಗಿದ್ದು ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗ್ರಾಮಕರಣಿಕ ಆತ್ಮಾನಂದ ಅವರು, ಬುಧವಾರ ಕಚೇರಿಯಲ್ಲಿದ್ದಾಗ ಸ್ಥಳೀಯರಾದ ಅಬ್ದುಲ್ ರಹಿಮಾನ್ ಎಂಬವರುಕಚೇರಿಗೆ ಬಂದುಪ್ರಕೃತಿ ವಿಕೋಪದಡಿಯಲ್ಲಿ ಪರಿಹಾರ ಸಿಗಲಿದೆಯೇ ಎಂದು ಕೇಳಿದ್ದಾರೆ,ಅದಕ್ಕೆ ಮಳೆಗಾಲದಲ್ಲಿ ಮಾತ್ರ ಪರಿಹಾರ ನೀಡಲಾಗುವುದು ಎಂದು ಉತ್ತರಿಸಿದಾಗಅಲ್ಲಿಗೆ ಬಂದಿದ್ದ ಸಂತೋಷ್ ಕುಮಾರ ಅವರುವಿನಾಕಾರಣಅವ್ಯಾಚ ಶಬ್ದಗಳಿಂದ ನಿಂದಿಸಿ, ಹಲ್ಲೆ ವಾಡಿರುವುದಾಗಿ ಬೆಳ್ತಂಗಡಿ ಪೋಲಿಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ.ಬೆಳ್ತಂಗಡಿ ಠಾಣೆಯಲ್ಲಿಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.