ಸಾಯಿ ಬಾಬಾ ಮಂದಿರದಲ್ಲಿ ಕಳ್ಳತನ
Update: 2016-03-11 23:04 IST
ಮಲ್ಪೆ, ಮಾ.11: ಇಲ್ಲಿಗೆ ಸಮೀಪದ ಕೊಡವೂರು ತೋಟದ ಮನೆಯ ಶ್ರೀಸಾಯಿಬಾಬಾ ಮಂದಿರಕ್ಕೆ ನಿನ್ನೆ ರಾತ್ರಿ ವೇಳೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ವೌಲ್ಯದ ಚಿನ್ನ ಹಾಗೂ ಬೆಳ್ಳಿಯ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಮುಂಭಾಗದ ಬಾಗಿಲಿನ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಶ್ರೀಸಾಯಿಬಾಬಾ ಮೂರ್ತಿಯ 2ಲಕ್ಷ ರೂ. ವೌಲ್ಯದ ಚಿನ್ನ ಲೇಪಿತ ಒಂದು ಪಾದುಕೆ, 60ಸಾವಿರ ರೂ. ವೌಲ್ಯದ ಒಂದು ಬೆಳ್ಳಿಯ ಕೊಡೆ, ಮೂರು ಲಕ್ಷ ರೂ. ವೌಲ್ಯದ ಎರಡು ಬೆಳ್ಳಿಯ ಪೀಠ ಮತ್ತು ಮಂದಿರದೊಳಗೆ ಇದ್ದ ಎರಡು ಕಾಣಿಕೆ ಡಬ್ಬಿಯಲ್ಲಿನ ಎರಡು ಲಕ್ಷ ರೂ.ವನ್ನು ಕಳವು ಮಾಡಿದ್ದಾರೆ. ಇವುಗಳ ಒಟ್ಟು ಮೊತ್ತ 7.60ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.