ಇಂದಿನ ಕಾರ್ಯಕ್ರಮ
ಸ್ಥಾಪನಾ ದಿನಾಚರಣೆ: ಕಾರ್ಪೊರೇಶನ್ ಬ್ಯಾಂಕ್‌ನ 111ನೆ ಸ್ಥಾಪನಾ ದಿನಾಚರಣೆ ಹಾಗೂ ಗ್ರಾಹಕರ ಸಮಾವೇಶ. ಪೂರ್ವಾಹ್ನ 11ಕ್ಕೆ. ಸ್ಥಳ: ಕಾರ್ಪ್ ಬ್ಯಾಂಕಿನ ವಲಯ ಕಚೇರಿ, ಉಡುಪಿ.
ನಮ್ಮ ಅಂಗಡಿ: ಮಣಿಪಾಲ ಸ್ಕೂಲ್ ಆಫ್ ಕಮ್ಯುನಿಕೇಷನ್‌ನ ವತಿಯಿಂದ ಕನ್ಯಾನದ ನಮ್ಮ ಭೂಮಿ ಸಹಯೋಗದೊಂದಿಗೆ ಮಕ್ಕಳು ತಯಾರಿಸಿದ ಕೈಮಗ್ಗದ, ಕರಕುಶಲ ಹಾಗೂ ಸಾವಯವ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ‘ನಮ್ಮ ಅಂಗಡಿ’. ಸಮಯ: ಬೆಳಗ್ಗೆ 10ರಿಂದ ಸಂಜೆ 7ರವರೆಗೆ. ಸ್ಥಳ: ಸ್ಕೂಲ್ ಆಫ್ ಕಮ್ಯುನಿಕೇಷನ್ ಆವರಣ, ಪ್ರೆಸ್ ಕಾರ್ನರ್ ಮಣಿಪಾಲ.
ತರಬೇತಿ ಕಾರ್ಯಕ್ರಮ: ಬೆಂಗಳೂರಿನ ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಲಾ ಅಕಾಡಮಿಯ ಸಹಯೋಗದಲ್ಲಿ ಉಡುಪಿ, ಕುಂದಾಪುರ ಹಾಗೂ ಕಾರ್ಕಳ ವಕೀಲರ ಸಂಘ ಮತ್ತು ವೈಕುಂಠ ಬಾಳಿಗಾ ಕಾನೂನು ಕಾಲೇಜುಗಳ ವತಿಯಿಂದ ಯುವ ವಕೀಲರಿಗೆ ತರಬೇತಿ. ಸ್ಥಳ: ವೈಕುಂಠ ಬಾಳಿಗಾ ಕಾನೂನು ಕಾಲೇಜು ಸಭಾಂಗಣ, ಕುಂಜಿಬೆಟ್ಟು ಉಡುಪಿ.
ಪೇಜಾವರಶ್ರೀ ಪಂಚಮ ಪರ್ಯಾಯ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಸಂಜೆ 5ಕ್ಕೆ ಚಂದ್ರಶಾಲೆ ಪುರಾಣ ವಿದ್ವಾನ್ ಆನಂದತೀರ್ಥ ಉಪಾಧ್ಯಾಯ ಸಗ್ರಿಯವರಿಂದ ಪ್ರವಚನ, ಸಂಜೆ 5:45ಕ್ಕೆ ರಾಜಾಂಗಣದಲ್ಲಿ ವಿದ್ವಾನ್ ಆಯನೂರು ಮಧುಸೂದನಾಚಾರ್‌ರಿಂದ ಉಪನ್ಯಾಸ. ಸಂಜೆ 6:30ಕ್ಕೆ ಶ್ರೀವಿಶ್ವೇಶತೀರ್ಥರಿಂದ ಅನುಗ್ರಹ ಸಂದೇಶ. 7ಕ್ಕೆ ಬ್ರಹ್ಮರಥೋತ್ಸವ, ರಜತ ರಥೋತ್ಸವ. 7:30ರಿಂದ ರಾಜಾಂಗಣದಲ್ಲಿ ಕೆ.ಎನ್.ಸೀತಾಲಕ್ಷ್ಮಿ ಮತ್ತು ಬಳಗದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ. ಅಂಬೇಡ್ಕರ್ ವಿಚಾರಧಾರೆ-ಸಮ್ಮೇಳನ: ಸ್ಥಳ-ಸೈಂಟ್ ಆ್ಯಗ್ನೆಸ್ ಕಾಲೇಜು, ಮಂಗಳೂರು, ಸಮಯ-ಬೆಳಗ್ಗೆ 9:15.
ಅಂಗದಾನದ ಬಗ್ಗೆ ಜಾಗೃತಿ ಕಾರ್ಯಕ್ರಮ: ಸ್ಥಳ: ರೊಸಾರಿಯೊ ಹಾಲ್, ಮಂಗಳೂರು; ಸಮಯ-ಬೆಳಗ್ಗೆ 10:30.
ಕನಕದಾಸರ ಕೀರ್ತನೆ ಗಾಯನ: ಸ್ಥಳ- ಹಳೆಯ ಸೆನೆಟ್ ಸಭಾಂಗಣ, ಮಂಗಳೂರು. ಸಮಯ-ಬೆಳಗ್ಗೆ 11 ಗಂಟೆ.
ವಿಶ್ವ ಮಹಿಳಾ ದಿನಾಚರಣೆ: ಉರ್ವಸ್ಟೋರ್ ಮಹಿಳಾ ಮಂಡಲದಿಂದ ವಿಶ್ವ ಮಹಿಳಾ ದಿನಾಚರಣೆ, ಸ್ಥಳ-ಉರ್ವಸ್ಟೋರ್, ಮಂಗಳೂರು. ಸಮಯ-12 ಗಂಟೆ.
ಜೇನುಮೇಳ: ಸಾವಯವ ಜೇನುಮೇಳ ಉದ್ಘಾಟನೆ. ಸ್ಥಳ-ಕದ್ರಿ ಪಾರ್ಕ್, ಮಂಗಳೂರು. ಸಮಯ-12 ಗಂಟೆ.
ಸುವರ್ಣ ಮಹೋತ್ಸವದ ಸಮಾರೋಪ: ಮಂಗಳೂರಿನ ಸಂತ ಅಲೋಶಿಯಸ್ ಸಂಧ್ಯಾ ಕಾಲೇಜಿನ ಸುವರ್ಣ ಮಹೋತ್ಸವದ ಸಮಾರೋಪ. ಸ್ಥಳ: ಕಾಲೇಜು ಸಭಾಂಗಣ. ಸಮಯ: ಸಂಜೆ 6 ಗಂಟೆ.