ಗೃಹಸಚಿವ ಪರಮೇಶ್ವರ್ ಪ್ರವಾಸ
Update: 2016-03-11 23:41 IST
ಮಂಗಳೂರು, ಮಾ.11: ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಾ.13 ಮತ್ತು 14 ರಂದು ದ.ಕ. ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
ಮಾ.13ರಂದು ಸಂಜೆ 6 ಗಂಟೆಗೆ ಧರ್ಮಸ್ಥಳಕ್ಕೆ ಆಗಮಿಸುವ ಸಚಿವರು ವಾಸ್ತವ್ಯ ಹೂಡಲಿದ್ದಾರೆ. ಮಾ.14ರಂದು ಬೆಳಗ್ಗೆ 10ಕ್ಕೆ ಧರ್ಮಸ್ಥಳ ಪೊಲೀಸ್ ಠಾಣೆ ಉದ್ಘಾಟನೆ, ಮಧ್ಯಾಹ್ನ 12ಕ್ಕೆ ಕುಕ್ಕೆ ಸುಬ್ರಮಣ್ಯಕ್ಕೆ ತೆರಳಿ, ಅಪರಾಹ್ನ 2ಕ್ಕೆ ಬೆಂಗಳೂರಿಗೆ ಹಿಂದಿರುಗುವರು ಎಂದು ಪ್ರಕಟನೆ ತಿಳಿಸಿದೆ.