ಱಎರ್ಟಿಗಾ ಆಟೋಮಾ್ಯ ಟಿಕ್‌ೞಮಾರುಕಟೆ್ಟಗೆ
ಮಂಗಳೂರು, ಮಾ.11: ನಗರದ ರಾ.ಹೆ. 66 ಕುಂಟಿಕಾನ ಜಂಕ್ಷನ್‌ನಲ್ಲಿ ರುವ ಮಾರುತಿ ಸುಝುಕಿಯ ಅಧಿಕೃತ ಡೀಲರ್ ಮತ್ತು ಸರ್ವಿಸ್ ಸೆಂಟರ್ ಭಾರತ್ ಆಟೋಕಾರ್ಸ್ ನಲ್ಲಿ ಮಾರುತಿ ಸುಝುಕಿಯ ನೂತನ ಕಾರು ಎರ್ಟಿಗಾ ಆಟೋಮ್ಯಾಟಿಕ್ ಮಾರುಕಟ್ಟೆಗೆ ಬಿಡುಗಡೆಗೊಂಡಿತು. ಪ್ರಥಮ ಗ್ರಾಹಕರಾದ ನಗರದ ಮೆರಿಲ್ ಮಸ್ಕರೇನ್ಹಸ್‌ರಿಗೆ ಭಾರತ್ ಅಟೋ ಕಾರ್ಸ್‌ನ ಸಹಾಯಕ ಮಹಾಪ್ರಬಂಧಕ (ಮಾರಾಟ) ಚಾರ್ಲ್ಸ್ ಶಿರಿಯ ಕೀಲಿಕೈ ಹಸ್ತಾಂತರಿಸುವ ಮೂಲಕ ನೂತನ ಕಾರನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಈ ವೇಳೆ ಭಾರತ್ ಆಟೋ ಕಾರ್ಸ್‌ನ ಹಿರಿಯ ಮಾರಾಟ ಪ್ರಬಂಧಕ ಡೆನ್ನಿಸ್ ಗೊನ್ಸಾಲ್ವಿಸ್ ಮತ್ತು ಸೇಲ್ಸ್ ಎಕ್ಸಿಕ್ಯೂಟಿವ್ ಮಹೇಂದ್ರ ಜೈನ್ ಉಪಸ್ಥಿತರಿದ್ದರು.
ಎರ್ಟಿಗಾ ಆಟೋಮಾ್ಯಟಿಕ್ ವಿಶೇಷತೆಗಳು
1.4 ಲೀ. ಎಂಜಿನ್‌ನೊಂದಿಗೆ 4 ಸ್ಪೀಡ್ ಅಟೋ ಟ್ರಾನ್ಸ್‌ಮಿಷನ್ ಸಹಿತ ಅತ್ಯುತ್ತಮ ಇಂಧನ ಕ್ಷಮತೆ ಹೊಂದಿದೆ. ಪ್ರತಿ ಲೀಟರ್ ಪೆಟ್ರೋಲಿಗೆ 17.03 ಕಿ.ಮೀ. ಮೈಲೇಜು ಸಿಗಲಿದೆ. ಕಾಂತಿಯುಕ್ತ ಉಣ್ಣೆ ಬಣ್ಣ, ಪ್ರಶಾಂತ ನೀಲಿ, ರೇಷ್ಮೆಕಾಂತಿಯ ಸಿಲ್ವರ್, ಪರೇಲ್ ಬ್ಲೂ ಬ್ಲೇಝ್, ಗ್ರಾನೈಟ್ ಗ್ರೇ, ಅತ್ಯುನ್ನತ ಬಿಳಿ ಬಣ್ಣಗಳಲ್ಲಿ ಲಭ್ಯ. ಆಕರ್ಷಕ ಕ್ರೋಮ್ ಗ್ರಿಲ್ ಹಿಂಬಾಗಿಲು, ಬಲಿಷ್ಠ ಬಂಪರ್‌ಗಳು. ಅತ್ಯುತ್ತಮ ಗುಣಮಟ್ಟದ ಆಸನಗಳು, ಸೀಟುಗಳ ಮೂರನೆ ಸಾಲಿನಲ್ಲಿ 50:50 ವಿಭಜನೆಯಿಂದಾಗಿ ಸಾಕಷ್ಟು ಸ್ಥಳಾವಕಾಶ ಇರುವ ಕ್ಯಾಬಿನ್‌ನ್ನು ಹೊಂದಿದೆ. ಇಲೆಕ್ಟ್ರಿಕಲ್ ಮಡಚುವ ಒಆರ್‌ವಿಎಂ. ಬ್ಲೂಟೂಥ್ ಆಡಿಯೊ ಹಾಗೂ 2ನೆ ಸಾಲಿಗೆ ಹೆಚ್ಚುವರಿ ಸಾಕೆಟ್ ಹೊಂದಿದೆ. ಚಾಲಕನ ಏರ್‌ಬ್ಯಾಗ್ ಹಾಗೂ ಚಾಲಕನ ಬದಿಯ ಆಸನದ ಸೀಟ್‌ಬೆಲ್ಟ್ ರಿಮೈಂಡರ್‌ಗೆ ಬಝರ್ ಅಳವಡಿಕೆ ಹೆಚ್ಚುವರಿ ಸುರಕ್ಷತೆಯನ್ನು ಒದಗಿಸಲಿದೆ. ಏರ್‌ಬ್ಯಾಗ್, ಇಬಿಡಿ ಒಳಗೊಂಡ ಎಬಿಎಸ್ ಸೌಲಭ್ಯವೂ ಇದೆ.