ಉನ್ನತ ಶಿಕ್ಷಣ ಸಚಿವರ ಪ್ರವಾಸ
Update: 2016-03-11 23:41 IST
ಮಂಗಳೂರು, ಮಾ.11: ಕಾನೂನು ಹಾಗೂ ಉನ್ನತ ಶಿಕ್ಷಣ ಸಚಿವ ಟಿ.ಬಿ.ಜಯಚಂದ್ರ ಮಾ.12ರಂದು ದ.ಕ. ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
ಅಂದು ಬೆಳಗ್ಗೆ 9:30ಕ್ಕೆ ಪಿಲಿಕುಳಕ್ಕೆ ಆಗಮಿಸಿ ನಿಸರ್ಗಧಾಮ ವೀಕ್ಷಣೆ, 11:45ಕ್ಕೆ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಅಮುಕ್ತ ಆಯೋಜಿಸಿರುವ ಕಾರ್ಯಕ್ರಮ, ಅಪರಾಹ್ನ 3ಕ್ಕೆ ಕೆಪಿಟಿ ಹಾಸ್ಟೆಲ್ ಉದ್ಘಾಟನೆ, 4:30ಕ್ಕೆ ಡಿಸಿಸಿ ಕಚೇರಿಯಲ್ಲಿ ಪಕ್ಷದ ಸಭೆ, ಸಂಜೆ 6ಕ್ಕೆ ಸಂತ ಅಲೋಶಿಯಸ್ ಸಂಜೆ ಕಾಲೇಜಿನ ಸುವರ್ಣ ಮಹೋತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ರಾತ್ರಿ ಬೆಂಗಳೂರಿಗೆ ವಾಪಸಾಗುವರು ಎಂದು ಪ್ರಕಟನೆ ತಿಳಿಸಿದೆ.