×
Ad

ಜಿಲ್ಲಾ ಯುವ ಪ್ರಶಸ್ತಿಗೆ ಅರ್ಜಿ ಆಹ್ವಾನ

Update: 2016-03-11 23:42 IST

ಮಂಗಳೂರು, ಮಾ.11: ಕ್ರೀಡೆ, ಸಂಸ್ಕೃತಿ ಹಾಗೂ ಸಮುದಾಯ ಅಭಿವೃದ್ಧಿ ಕ್ಷೇತ್ರಗಳಲ್ಲಿ 2014-15ನೆ ಸಾಲಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿರುವ ಯುವಕ -ಯುವತಿ ಸಂಘಗಳ ಸದಸ್ಯರಿಗೆ ಹಾಗೂ ನೋಂದಾಯಿತ ಯುವಕ-ಯುವತಿ ಸಂಘಗಳಿಗೆ ಜಿಲ್ಲಾ ಯುವ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

15ರಿಂದ 35 ವಯೋಮಿತಿಯೊಳಗಿನ ಆಸಕ್ತರು ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ವೈಯಕ್ತಿಕ ಮತ್ತು ಸಾಂಘಿಕ ಪ್ರಸ್ತಾವನೆಯನ್ನು ತಯಾರಿಸುವಾಗ 2014ರ ಎಪ್ರಿಲ್ 1ರಿಂದ 2015ರ ಮಾರ್ಚ್ 31ರವರೆಗಿನ ಕಾರ್ಯಕ್ರಮಗಳ ದಿನಾಂಕ ಹಾಗೂ ಸದ್ರಿ ಕಾರ್ಯಕ್ರಮಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳ ಮೂಲಪ್ರತಿಗಳನ್ನು ಎ-4 ಅಳತೆಯಲ್ಲಿ ಸಿದ್ಧಪಡಿಸಿ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಸಲ್ಲಿಸಬೇಕು. ಅರ್ಜಿಗಾಗಿ ತಾಲೂಕಿನ ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿ ಕಾರಿಗಳು ಅಥವಾ ಉಪನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳ ಕ್ರೀಡಾಂಗಣ, ಮಂಗಳೂರು ಇವರಿಂದ ಅರ್ಜಿ ನಮೂನೆಯನ್ನು ಪಡೆಯಬೇಕು. ಭರ್ತಿ ಮಾಡಿದ ಅರ್ಜಿ ನಮೂನೆ ಹಾಗೂ ದಾಖಲೆಗಳನ್ನು ಮಾ.16ರೊಳಗೆ ಸಲ್ಲಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News