ಆಧಾರ್, ರೇಶನ್‌ಕಾರ್ಡ್ ಪ್ರತಿ ಸಲ್ಲಿಸಲು ಸೂಚನೆ
Update: 2016-03-11 23:45 IST
ಮಂಗಳೂರು, ಮಾ.11: ರಾಜ್ಯದಲ್ಲಿ ಎನ್‌ಪಿಆರ್ ಮೂಲ ಮಾಹಿತಿ ಕೋಶದ ಪರಿಷ್ಕರಣೆ ಮತ್ತು ಆಧಾರ್‌ನೊಡನೆ ಜೋಡಣೆ ಈ ಹಿಂದೆ ನಡೆದಿದೆ. ಗಣತಿದಾರರು ಮನೆಗೆ ಭೇಟಿ ನೀಡಿದಾಗ ಲಭ್ಯವಿರದ ಕುಟುಂಬಗಳ ಸದಸ್ಯರು ತಮ್ಮ ಆಧಾರ್ ಮತ್ತು ರೇಶನ್ ಕಾರ್ಡ್ ಪ್ರತಿಗಳನ್ನು ನಗರ ಪಾಲಿಕೆ ಕಚೇರಿಯಲ್ಲಿ ಹಾಜರುಪಡಿಸಿ ಸಹಕರಿಸುವಂತೆ ಮನಪಾ ಆಯುಕ್ತರ ಪ್ರಕಟನೆ ತಿಳಿಸಿದೆ.