ಕಡಬ: ಗ್ರಾಮೀಣ ಶೈಕ್ಷಣಿಕ ಅಧ್ಯಯನ ಶಿಬಿರ ಉದ್ಘಾಟನೆ
ಕಡಬ, ಮಾ 12. ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇದರ ಎಂಎಸ್‌ಡಬ್ಲ್ಯೂ ವಿಭಾಗದ ವತಿಯಿಂದ ಗ್ರಾಮೀಣ ಶೈಕ್ಷಣಿಕ ಅಧ್ಯಯನ ಶಿಬಿರವನ್ನು ಸುಳ್ಯ ಶಾಸಕರಾದ ಎಸ್.ಅಂಗಾರರವರು ಬಂಟ್ರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟಿಸಿದರು. ಒಂದು ವಾರಗಳ ಕಾಲ ನಡೆಯುತ್ತಿರುವ ಈ ಶಿಬಿರದಲ್ಲಿ ನಾಯಕತ್ವ ತರಬೇತಿ, ಸ್ವಚ್ಛತೆ ಬಗ್ಗೆ ಅರಿವು ಸೇರಿದಂತೆ ಜೀವನೋಪಾಯ ಕಾರ್ಯಗಳ ಬಗ್ಗೆ ವಿದ್ಯಾರ್ಥಿಗಳು ಹೆಚ್ಚಿನ ತರಬೇತಿ ಪಡೆದು ಜೀವನದಲ್ಲಿ ಉನ್ನತ ಮಟ್ಟಕ್ಕೆ ತಲುಪುವಂತಾಗಲಿ ಎಂದು ಶಾಸಕರು ಶುಭಹಾರೈಸಿದರು. ಮರ್ಧಾಳ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಲತಾ ಕೆ.ಎಸ್., ಕುಟ್ರುಪ್ಪಾಡಿ ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಕೈಕುರೆ, ಕಡಬ ಸಿ.ಎ.ಬ್ಯಾಂಕಿನ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ಜಿ.ಪಂ. ಸಮಾಲೋಚನಾಧಿಕಾರಿ ರೋಹಿತ್, ಗ್ರಾ.ಪಂ.ಸದಸ್ಯ ದಾಮೋದರ ಗೌಡ, ಪ್ರಮುಖರಾದ ಶಾರದಾ ಜಯಕುಮಾರ್, ಸೀತಾರಾಮ ಗೌಡ ಪುತ್ತಿಲ, ಭುವನೇಂದ್ರ ಕುಮಾರ್, ಬಂಟ್ರ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ದೇವಕಿ, ಅಂತರ್ರಾಷ್ಟ್ರೀಯ ಕ್ರೀಡಾಪಟು ರೆಬೆಕಾ ಮೊದಲಾದವರು ಉಪಸ್ಥಿತರಿದ್ದರು.
ಶಿಬಿರದ ಅಂಗವಾಗಿ ಶನಿವಾರದಂದು ಮರ್ಧಾಳ ಪೇಟೆಯ ಸ್ವಚ್ಛತಾ ಕಾರ್ಯವು ನಡೆಯಿತು. ಶಿಬಿರಾರ್ಥಿಗಳೊಂದಿಗೆ ಮರ್ಧಾಳ ಸೈಂಟ್ ಮೇರೀಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು, ವಿವೇಕಾನಂದ ಯುವಕ ಮಂಡಲ ಸೇರಿದಂತೆ ಸ್ಥಳೀಯನ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದರು.