ಕಾರ್ಕಳ: ವಾಶ್ ಇನ್ ಸ್ಕೂಲ್ ಕಾರ್ಯಕ್ರಮ
Update: 2016-03-12 16:51 IST
ಕಾರ್ಕಳ: ಮಾಳ ಗುರುಕುಲ ಹಿ.ಪ್ರಾ.ಶಾಲೆಯಲ್ಲಿ ಮೆಡಿಮಿಕ್ಸ್ ಸಾಬೂನು ಸಂಸ್ಥೆಯ ಪ್ರಾಯೋಜಕತ್ವದಲ್ಲಿ ರೋಟರಿ ಕ್ಲಬ್ ನೇತೃತ್ವದಲ್ಲಿ ಮಾಳ ರೋಟರಿ ಸಮುದಾಯದಳದ ಸಹಯೋಗದಲ್ಲಿ ರೋಟರಿಯ ವಾಶ್ ಇನ್ ಸ್ಕೂಲ್ ಕಾರ್ಯಕ್ರಮ ಗುರುವಾರ ನಡೆಯಿತು. ಮೆಡಿಮಿಕ್ಸ್ ಸಾಬೂನು ಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್ ಆನಂದ್ ಶಾಲೆಗಳಲ್ಲಿ ಸ್ವಚ್ಛತೆ ಕಾಪಾಡುವ ಬಗ್ಗೆ ತಿಳಿಸಿ, ಮಕ್ಕಳಿಗೆ ಸ್ವಚ್ಛತಾ ಪ್ರತಿಜ್ಞೆ ಬೋಧಿಸಿದರು. ಮುಖ್ಯ ಶಿಕ್ಷಕಿ ವಸಂತಿ ಜೋಷಿ, ಜಗದೀಶ್ ಆಚಾರ್ಯ, ಹರೀಶ್ಚಂದ್ರ ಹೆಗ್ಡೆ, ರೋಟರಿ ಅಧ್ಯಕ್ಷರು ಮತ್ತಿತರರು ಉಪಸ್ಥಿತರಿದ್ದರು. ಅನಂತಕೃಷ್ಣ ಆಚಾರ್ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಸಂಚಾಲಕ ಸುಧಾಕರ ಡೋಂಗ್ರೆ ವಂದಿಸಿದರು.