ಕಾರ್ಕಳ: ನಿವೃತ್ತ ಶಿಕ್ಷಕರಿಗೆ ಸನ್ಮಾನ
Update: 2016-03-12 16:53 IST
ಕಾರ್ಕಳ: ಚಿಕ್ಕಲ್‌ಬೆಟ್ಟು ಸ.ಹಿ.ಪ್ರಾ.ಶಾಲೆಯಲ್ಲಿ ಸೇವೆ ಸಲ್ಲಿಸಿ ವಯೋನಿವೃತ್ತರಾದ ರಾಜಗೋಪಾಲ್ ಹೆಬ್ಬಾರ್ ಅವರನ್ನು ದಂಪತಿ ಸಹಿತ ಸೋಮವಾರ ಸನ್ಮಾನಿಸಲಾಯಿತು. ನಿವೃತ್ತ ಹಿರಿಯ ಶಿಕ್ಷಕ ಜನಾರ್ಧನ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಸುಂದರ ಹೆಗ್ಡೆ ಹೆಪ್ಪಳ, ಹಿರ್ಗಾನ ಗ್ರಾ.ಪಂ. ಸದಸ್ಯ ತಾರನಾಥ ಶೆಟ್ಟಿ, ಎರ್ಲಪಾಡಿ ಗ್ರಾ.ಪ್ರಂ. ಸದಸ್ಯೆ ಕುಸುಮಾ, ಎಸ್‌ಡಿಎಂಸಿ ಅಧ್ಯಕ್ಷ ಪ್ರವೀಣ್ ಜತನ್ನ, ಎಸ್‌ಡಿಎಂಸಿ ಸದಸ್ಯರು, ಊರಿನ ಗಣ್ಯರು, ಮಕ್ಕಳ ಪೋಷಕರು, ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು. ಈ ಸಂದರ್ಭ ನಿವೃತ್ತರು 15 ರಾಷ್ಟ್ರ ನಾಯಕರ ಭಾವಚಿತ್ರಗಳನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು. ಮುಖ್ಯ ಶಿಕ್ಷಕ ಉಮಾಶಂಕರ್ ಸ್ವಾಗತಿಸಿ, ವಂದಿಸಿದರು. ಸಹಶಿಕ್ಷಕ ಉದಯ ಶೆಟ್ಟಿ ಬಿ. ಕಾರ್ಯಕ್ರಮ ನಿರೂಪಿಸಿದರು.