ಕಾರ್ಕಳ : ನಾಪತ್ತೆಯಾದವ ಶವವಾಗಿ ಪತ್ತೆ
Update: 2016-03-12 16:56 IST
ಕಾರ್ಕಳ : ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾದ ಘಟನೆ ಕಾರ್ಕಳ ತಾಲೂಕಿನ ಸೂಡಾ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ.
ಕಳೆದ ಮಾ. 9ರಂದು ಸೂಡ ಪೇಟೆಗೆಂದು ಹೊರಟ ಹೇರಿಸ್ವಾಮಿ(70) ಎಂಬವರು ಮನೆಗೆ ವಾಪಾಸ್ಸಾಗಿಲ್ಲ. ಹುಡುಕಾಟ ನಡೆಸಿದ ವೇಳೆ ಅವರ ಶವ ಸೂಡ ಕೊಂಬಲ್ಕೆ ಎಂಬಲ್ಲಿರುವ ಹೊಳೆಯಲ್ಲಿ ಪತ್ತೆಯಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.