ಕಾರ್ಕಳ : ಬೆಂಕಿ ತಗುಲಿ ವೃದ್ದ ಮೃತ್ಯು
Update: 2016-03-12 16:57 IST
ಕಾರ್ಕಳ : ಕಾಂತಾವರ ಗ್ರಾಮದ ಕೋಡುಗುತ್ತು ನಿವಾಸಿ ನಾಗರಾಜ ಭಂಗ (93) ಎಂಬವರು ಬೆಂಕಿ ತಗುಲಿ ಗುರುವಾರ ಮೃತಪಟ್ಟಿದ್ದಾರೆ. ಅವರು ಮಾ.5ರಂದು ಗದ್ದೆಯಲ್ಲಿ ಆಕಸ್ಮಿಕವಾಗಿ ತಗುಲಿದ ಬೆಂಕಿಯನ್ನು ನಂದಿಸುವ ವೇಳೆ ಮೈಕೈಗೆ ಬೆಂಕಿ ತಾಗಿದ್ದು, ಗಂಭೀರ ಗಾಯಗೊಂಡ ಅವರು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.