ಕಾರ್ಕಳ : ಪುರಸಭೆ ಅಧ್ಯಕ್ಷೆ-ಉಪಾಧ್ಯಕ್ಷೆಗೆ ಸನ್ಮಾನ
Update: 2016-03-12 16:59 IST
ಕಾರ್ಕಳ : ಪುರಸಭೆ ಅಧ್ಯಕ್ಷೆ ರೆಹಮತ್ ಎನ್.ಶೇಖ್ ಮತ್ತು ಉಪಾಧ್ಯಕ್ಷೆ ಶಶಿಕಲ ರಾಣೆ ಅವರನ್ನು ಅಭಿನಂದಿಸುವ ಕಾರ್ಯಕ್ರಮ ಪುರಸಭೆಯಿಂದ ಗುರುವಾರ ನಡೆಯಿತು. ಪುರಸಭೆಯ ಪ್ರಥಮ ಅವಧಿ ಪೂರ್ಣಗೊಂಡಿದ್ದು, ಸೇವೆ ಸಲ್ಲಿಸಿದ್ದ ಇವರಿಬ್ಬರನ್ನು ಸರ್ವ ಸದಸ್ಯರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.