ಬೆಳ್ತಂಗಡಿ: ಉದ್ಘಾಟನೆಯಾಗದೆ ಉಳಿದಿದ್ದ ಪೋಲೀಸ್‌ಠಾಣೆಗೆ ಕೊನೆಗೂ ಉದ್ಘಾಟನೆಯ ಭಾಗ್ಯ
ಬೆಳ್ತಂಗಡಿ: ಮಂಜೂರಾಗಿ ತಿಂಗಳುಗಳೇ ಕಳೆದರೂ ಉದ್ಘಾಟನೆಯಾಗದೆ ಉಳಿದಿದ್ದ ಧರ್ಮಸ್ಥಳ ಪೋಲೀಸ್‌ಠಾಣೆಗೆ ಕೊನೆಗೂ ಉದ್ಘಾಟನೆಯ ಭಾಗ್ಯ ದೊರೆತಿದ್ದು ಮಾ 14 ರಂದು ಗೃಹ ಸಚಿವ ಪರಮೇಶ್ವರ್ ಉದ್ಘಾಟನೆ ನೆರವೇರಿಸಲಿದ್ದಾರೆ. ಹೊಸ ಠಾಣೆಯ ವ್ಯಾಪ್ತಿಯಲ್ಲಿ ಬೆಳ್ತಂಗಡಿ ಪೋಲೀಸ್ ಠಾಣಾ ್ಯಾಪ್ತಿಯ 9 ಗ್ರಾಮಗಳು ಹಾಗು ಉಪ್ಪಿನಂಗಡಿ ಪೋಲೀಸ್ ಠಾಣಾ ವ್ಯಾಪ್ತಿಯ 9 ಗ್ರಾಮಗಳು ವ್ಯಾಪ್ತಿಗೆ ಬರಲಿದೆ. ಉಧ್ಘಾಟನಾ ಸಮಾರಂಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು, ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ರಮಾನಾಧ ರೈ, ಸಚಿವರುಗಳಾದ ಯು.ಟಿ ಖಾದರ್, ಅಬಯಚಂದ್ರ ಜೈನ್, ಸಂಸದರಾದ ನಳಿನ್ ಕುಮಾರ್ ಕಟೀಲು, ಶಾಸಕರಾದ ಕೆ. ವಸಂತ ಬಂಗೇರ ಹಾಗೂ ಇತರ ಗಣ್ಯರು ಆಗಮಿಸಲಿದ್ದಾರೆ. ಪಶ್ಚಿಮ ವಲಯದಲ್ಲಿಯೆ ಅತಿ ಹೆಚ್ಚು ಪ್ರಕರಣಗಳು ದಾಖಲಾಗುವ ಠಾಣೆ ಎಂಬ ಕೀರ್ತಿ ಪಡೆದಿದ್ದ ಬೆಳಂಗಡಿ ಪೋಲೀಸ್ ಠಾಣೆಯನ್ನು ಇದೀಗ ವಿಭಜಿಸಲಾಗಿದ್ದು ಧರ್ಮಸ್ಧಳ ಕೇಂದ್ರವಾಗಿಸಿ ಹೊಸ ಠಾಣೆ ಆರಂಭಗೂಳ್ಳಲಿದೆ. ನೂತನ ಪೋಲೀಸ್ ಠಾಣೆಯ ವ್ಯಾಪ್ತಿಗೆ ಬೆಳ್ತಂಗಡಿ ಠಾಣಾ ವ್ಯಾಪ್ತಿಯ ಧರ್ಮಸ್ಧಳ, ಪುದುವೆಟ್ಟು , ಬೆಳಾಲು, ನೆರಿಯ, ಚಿಬಿದ್ರೆ, ಚಾರ್ಮಾಡಿ, ತೋಡತ್ತಾಡಿ, ಮುಂಡಾಜೆ, ಹಾಗು ಕಲ್ಮಂಜ ಗ್ರಾಮಗಳನ್ನು ಹಾಗು ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ನಿಡ್ಲೆ, ಕಳೆಂಜ, ಪಟ್ರಮೆ, ಕೊಕ್ಕಡ, ಶಿಶಿಲ, ಶಿಬಾಜೆ, ಹತ್ಯಡ್ಕ, ರೆಖ್ಯ ಬಂದಾರು. ಗ್ರಾಮಗಳನ್ನು ಸೇರಿಸಲಾಗಿದೆ. ಚಾರ್ಮಾಡಿ ಘಾಟ್ ರಸ್ತೆ ಹಾಗು ಶಿರಾಡಿ ಘಾಟ್ ರಸ್‌ತ್ೆಯ ನಡುವಿನ ವಿಶಾಲವಾದ ಭೂಪ್ರದೇಶಗಳು ಇದರ ವ್ಯಾಪ್ತಿಗೆ ಬರಲಿದ್ದು ಚಿಕ್ಕಮಂಗಳೂರು ಹಾಗೂ ಹಾಸನ ಜಿಲ್ಲೆಯ ಗಡಿಯ ವರೆಗೆ ವಿಸ್ತರಿಸಿಕೊಂಡಿದೆ. ಹೊಸ ಠಾಣಾಯ ಭೌಗೋಳಿಕ ವ್ಯಾಪ್ತಿ ತುಂಬ ವಿಸ್ತಾರವಾಗಿದ್ದು ಹಲವಾರು ಕುಗ್ರಾಮಗಳನ್ನು ತನ್ನವ್ಯಾಪ್ತಿಯಲ್ಲಿ ಹೊಂದಿದೆ.
ನೂತನ ಧರ್ಮಸ್ಥಳ ಠಾಣೆಗೆ ಒರ್ವ ಎಸ್ ಐ ಇಬ್ಬರು ಎ ಎಸ್‌ಐ
7 ಮಂದಿ ಹೆಚ್ ಸಿ, 21 ಮಂದಿ ಪಿಸಿ ಗಳು 2ಮಂದಿ ಮಹಿಳಾ ಪಿ ಸಿ ಗಳು ಸೇರಿದಂತೆ 33 ಹುದ್ದೆಗಳನ್ನು ಮಂಜೂರುಗೊಳಿಸಲಾಗಿದೆ. ಈಗಾಗಲೆ ಹೊಸ ಠಾಣೆಗೆ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆ ಈಗಾಗಲೆ ಪೂರ್ಣಗೊಂಡಿದೆ. ಹೊಸ ಠಾಣೆಯನ್ನು ತಾತ್ಕಾಲಿಕವಾಗಿ ಧರ್ಮಸ್ಥಳ ಗ್ರಾಮ ಪಂಚಾಯತಿನ ಕಟ್ಟಡದಲ್ಲಿ ಆರಂಭಿಸಲಾಗಿದ್ದು ಕಟ್ಟಡವನ್ನು ಅದಕ್ಕೆ ಸಿದ್ದಗೊಳಿಸಲಾಗಿದೆ. ಹೊಸ ಠಾಣೆಗೆ ಜಾಗ ಗುರುತಿಸುವ ಕಾರ್ಯವನ್ನೂ ಮಾಡಲಾಗಿದೆ. ಚಾರ್ಮಾಡಿಯಲ್ಲಿ ಹೊರಠಾಣೆ : ಧರ್ಮಸ್ಧಳದಲ್ಲಿ ಹೊಸ ಪೋಲೀಸ್ ಠಾಣೆ ಆರಂಭ ಆಗುವುದರೊಂದಿಗೆ ಚಾರ್ಮಾಡಿಯಲ್ಲಿ ಹೊಸದಾಗಿ ಹೊರ ಠಾಣೆಂ ೊಂದು ಮಂಜೂರಾಗುವ ಸಾಧ್ಯತೆಯಿದೆ. ಈಗಾಗಲೆ ಇರುವ ಪೋಲೀಸ್ ಚೆಕ್ ಪೋಸ್ಟ್ ಅನ್ನು ಹೊರ ಠಾಣೆಯಾಗಿ ಮೇಲ್ದರ್ಜೆಗೆ ಏರಿಸುವ ಸಾಧ್ಯತೆಯಿದೆ.