ಕಡಬ: ರಬ್ಬರ್ ತೋಟಕ್ಕೆ ಬೆಂಕಿ, ಸುಮಾರು 300 ಕ್ಕಿಂತಲೂ ಹೆಚ್ಚು ರಬ್ಬರ್ ಗಿಡಗಳು ಭಸ್ಮ
Update: 2016-03-12 18:13 IST
ಕಡಬ: ಇಲ್ಲಿಗೆ ಸಮೀಪದ ಕುಟ್ರುಪ್ಪಾಡಿ ಗ್ರಾಮದ ಎಲ್ಯ ನಿವಾಸಿ ವಿ.ಜೆ.ವರ್ಗೀಸ್ ಎಂಬವರ ರಬ್ಬರ್ ತೋಟಕ್ಕೆ ಬೆಂಕಿ ಬಿದ್ದು ಸುಮಾರು 300 ಕ್ಕಿಂತಲೂ ಹೆಚ್ಚು ರಬ್ಬರ್ ಗಿಡಗಳು ಸುಟ್ಟು ಭಸ್ಮವಾದ ಘಟನೆ ಶನಿವಾರ ಸಂಜೆ ನಡೆದಿದೆ.
ರಬ್ಬರ್ ತೋಟಕ್ಕೆ ಬೆಂಕಿ ಬಿದ್ದು ಸುಟ್ಟು ಭಸ್ಮವಾಗುವುದನ್ನು ನೋಡಿದ ಸ್ಥಳೀಯರು ಬೆಂಕಿ ನಂದಿಸುವ ಕಾರ್ಯ ಮಾಡಿದರು.