ಮಂಜೇಶ್ವರ: ಏಕ ದಿನ ಮತಪ್ರಭಾಷಣೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ
ಮಂಜೇಶ್ವರ: ವಿದ್ಯಾರ್ಥಿಗಳನ್ನು ವಿದ್ಯೆಯಲ್ಲಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪವಿತ್ರ ಗ್ರಂಥವಾದ ಖುರ್ ಆನ್ ನನ್ನು ಕಂಠ ಪಾಠ ಮಾಡಿದ ಹಾಗೂ ಸಮಸ್ತ ಕೇರಳ ಸುನ್ನಿ ಬಾಲವೇದಿಯ ಜ್ಞಾನವೇದಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಧ್ವಿತೀಯ ಸ್ಥಾನವನ್ನು ಪಡೆದ ವಿದ್ಯಾರ್ಥಿಗಳನ್ನು ಸಮ್ಮಾನಿಸಿ ಅವರಿಗೆ ವಿದ್ಯೆಯಲ್ಲಿ ಇನ್ನಷ್ಟು ಪ್ರೋತ್ಸಾಹವನ್ನು ನೀಡಲು ಉಪ್ಪಳ ಮಣ್ಣಂ ಕುಝಿ ಜಮಾಹತ್ ಅಧಿಕೃತರು ಮುಂದಾಗಿರುವುದಾಗಿ ಸಂಬಂಧಪಟ್ಟವರು ಮಂಜೇಶ್ವರದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮೂರು ವರ್ಷದಲ್ಲಿ ಕುರ್ ಆನ್ ಕಂಠ ಪಾಠ ಮಾಡಿದ ದೃಷ್ಟಿಹೀನನಾದ ವಿದ್ಯಾರ್ಥಿ ಉಪ್ಪಳ ನಿವಾಸಿ ಅಬ್ದುಲ್ ಕಾದರ್ (16) ಹಾಗೂ ಇನ್ನೋರ್ವ ವಿದ್ಯಾರ್ಥಿ ಅಬ್ದುಲ್ ಶುಕೂರು ಹಾಗೂ ರಾಜ್ಯಮಟ್ಟದ ಜ್ಞಾನ ವೇದಿ ಪರೀಕ್ಷೆಯಲ್ಲಿ ಎರಡನೇ ಸ್ಥಾನವನ್ನು ಪಡೆದ ಹಾಫಿಸ್ ಮುಹಮ್ಮದ್ ಎಂಬಿವರನ್ನು ಇಂದು ಬಾನುವಾರ ಸೌದಾಗರ್ ಮಹಮ್ಮದ್ ಹಾಜಿ ನಗರ ಮಣ್ಣಂಕುಝಿ ಯಲ್ಲಿ ಸಮ್ಮಾನಿಸಲಾಗುವುದಾಗಿ ಅಧಿಕೃತರು ತಿಳಿಸಿದರು. ಬಿ ಕೆ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಉಸ್ತಾದ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಕೆ ಎಸ್ ಅಲಿ ತಂಘಲ್ ಕುಂಬೋಲ್ ಉದ್ಘಾಟಿಸಲಿದ್ದಾರೆ. ಕುಮ್ಮನಂ ನಿಝಾಮುದ್ದೀನ್ ಅಲ್ ಅಝ್ಝರಿ ಮುಖ್ಯ ಪ್ರಭಾಷಣ ಗೈಯಲಿದ್ದಾರೆ. ವೇದಿಕೆಯಲ್ಲಿ ಮಂಜೇಶ್ವರ ಶಾಸಕ ಪಿ ಬಿ ಅಬ್ದುಲ್ ರಜಾಕ್, ಮುಸ್ತಫ ಫೈಝಿ, ಹಾಜಿ ಮಹಮ್ಮದ್ ಲಂಡನ್, ಅಬ್ದುಲ್ ಖಾದರ್ ಮೌಲವಿ ಜನಾಬ್ ಅಬೂಬಕ್ಕರ್ ಉಪಸ್ಥರಿರುವರು. ಮಂಜೇಶ್ವರ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿ ಗೋಷ್ಟಿಯಲ್ಲಿ ಅನ್ಸಾರ್ ಅಬ್ಬಾಸ್ ಹಾಜಿ ಪಳ್ಳಿ, ಇಬ್ರಾಹಿಂ ಮುಹ್ಮಿನ್, ಮುಸ್ತಾಕ್ ಆಹ್ಮದ್, ಅಬೂಬಕ್ಕರ್ ವಡಗರ ಹಾಗೂ ಅಬ್ದುಲ್ ರಜಾಕ್ ಮುಸ್ಲಿಯಾರ್ ಉಪಸ್ಥರಿದ್ದರು.