ಮಂಜೇಶ್ವರ : ಎಸ್.ಐ. ಕೊಲೆಗೆ ಯತ್ನ, ಆರೋಪಿಗಳ ಬಂಧನ
Update: 2016-03-12 18:45 IST
ಮಂಜೇಶ್ವರ : ವಾಹನ ತಪಾಸಣೆ ನಿರತರಾಗಿದ್ದ ಪೊಲೀಸರಿಗೆ ಕಾರು ಢಿಕ್ಕಿ ಹೊಡೆಸಿ ಎಸ್.ಐ.ಯ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಅಣಂಗೂರು ಟಿ.ವಿ.ಸ್ಟೇಶನ್ ರೋಡ್‌ನ ಸಲೀಂ ಮಂಜಿಲ್ ನಿವಾಸಿ ಸಲೀಂ ಅವರ ಪುತ್ರ ಮೊಹಮ್ಮದ್ ಹಬೀಬ್ ರಹ್ಮಾನ್(20)ನನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ನವೆಂಬರ್ 29 ರಂದು ರಾತ್ರಿ 9.30 ಕ್ಕೆ ಕಾಸರಗೋಡು ಪ್ರೆಸ್‌ಕ್ಲಬ್ ಜಂಕ್ಷನ್ ಎಸ್.ಐ. ರಾಜನ್ ನೇತೃತ್ವದ ಪೊಲೀಸರು ವಾಹನ ತಪಾಸಣೆ ನಿರತರಾಗಿದ್ದಾಗ ಅವರಿಗೆ ಕಾರು ಢಿಕ್ಕಿ ಹೊಡೆಸಿ ತಂಡ ಪರಾರಿಯಾಗಿರುವುದಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಮಾ.12 ರಂದು ಬೆಳಗ್ಗೆ ರಹ್ಮಾನ್‌ನನ್ನು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಪರಿಸರದಿಂದ ಬಂಧಿಸಲಾಯಿತು. ಈ ಪ್ರಕರಣದಲ್ಲಿ ಸತ್ತಾರ್ ಯಾನೆ ದಾರಾವಿ ಸತ್ತಾರ್‌ನನ್ನು ಈ ಹಿಂದೆಯೇ ಬಂಸಲಾಗಿತ್ತು. ಅಣಂಗೂರಿನ ಸವಾದ್‌ನನ್ನು ಬಂಧಿಸಲು ಬಾಕಿಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.