ಮಂಜೇಶ್ವರ : ನೇಣು ಬಿಗಿದು ವಿದ್ಯಾರ್ಥಿ ಆತ್ಮಹತ್ಯೆ
ಮಂಜೇಶ್ವರ : ಬಿಬಿಎಂ ಅಂತಿಮ ವರ್ಷದ ಪದವಿ ವಿದ್ಯಾರ್ಥಿ ಮನೆಯ ಕೊಠಡಿಯೊಳಗೆ ನೇಣು ಬಿಗಿದು ಮೃತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಉದ್ಯಾವರ ಸಮೀಪದ ಕುಂಜತ್ತೂರು ಯುಪಿ ಶಾಲಾ ಪರಿಸರದಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.
ಉದ್ಯಾವರ ಯುಪಿ ಶಾಲಾ ಪರಿಸರದ ನಿವಾಸಿ ಕೊಲ್ಲಿ ಉದ್ಯೋಗಿ ಬಾಪಕುಂಞಿ ಎಂಬವರ ಪುತ್ರ ಹಾಗೂ ಮಂಗಳೂರು ಮಿಲಾಗ್ರಿಸ್ ಕಾಲೇಜಿನ ಅಂತಿಮ ಬಿಬಿಎಂ ವಿದ್ಯಾರ್ಥಿ ಫಹೀಂ(21)ಮೃತ ದುರ್ದೈವಿ.ಗೆಳೆಯನೊಬ್ಬ ಫಹೀಂ ನ ಮೊಬೈಲ್ ಗೆ ಕರೆಮಾಡಿದಾಗ ಕರೆ ಸ್ವೀಕರಿಸದಿರುವುದನ್ನು ಕಂಡು ಮನೆಗೆ ಬಂದು ವಿಚಾರಿಸಿದಾಗ ಫಹೀಂ ಕೋಣೆಯೊಳಗೆ ಮಲಗಿರುವುದನ್ನು ಮನೆಯವರು ತಿಳಿಸಿದರು.ಗೆಳೆಯನು ಆತನ ಕೊಠಡಿಯ ಬಾಗಿಲನ್ನು ಶಬ್ದ ಮಾಡಿ ಹಲವು ಬಾರಿ ಕರೆದರೂ ಮಾರುತ್ತರ ಬಾರದಿರುವುದರಿಂದ ಸಂಬಂಧಿಕರು ಬಾಗಿಲನ್ನು ಒಡೆದು ನೋಡಿದಾಗ ನೇಣು ಬಿಗಿದಿರುವುದು ಕಂಡುಬಂತು.ಕೂಡಲೇ ಆಸ್ಪತ್ರೆಗೆ ಕರೆದೊಯ್ಯುವ ನಡುವೆ ಫಹೀಂ ಮೃತಪಟ್ಟನು.ಸಾವಿಗೆ ನಿಖರ ಕಾರಣಗಳು ತಿಳಿದುಬಂದಿಲ್ಲ.ಮೃತದೇಹವನ್ನು ಮೊದಲು ಮಂಗಲ್ಪಾಡಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದೆಗ ಅಲ್ಲಿ ವೈದ್ಯರಿಲ್ಲದಿದ್ದರಿಂದ ಮಂಗಳೂರಿಗೆ ಕೊಂಡೊಯ್ಯಲಾಯಿತು.ಮಂಜೇಶ್ವರ ಪೋಲೀಸರು ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.