ಮಂಜೇಶ್ವರ : ಡಿಫಿಯಿಂದ ಉಪ್ಪು ನೀರು ಸೋಸಿ ಪ್ರತಿಭಟನೆ
Update: 2016-03-12 18:54 IST
ಮಂಜೇಶ್ವರ : ಜನರಿಗೆ ಉಪ್ಪು ನೀರು ಕುಡಿಸುವುದರ ವಿರುದ್ಧ ಡಿವೈಎಫ್‌ಐ ನೇತೃತ್ವದಲ್ಲಿ ಉಪ್ಪು ನೀರು ಸೋಸಿ ಪ್ರತಿಭಟಿಸಲಾಯಿತು. ಮಣ್ಣಿನ ಪಾತ್ರೆಯಲ್ಲಿ ಜಲ ಪಾಧಿಕಾರ ವಿತರಿಸುವ ಉಪ್ಪು ನೀರು ಸಹಿತ ಹೊಸ ಬಸ್ ನಿಲ್ದಾಣಕ್ಕೆ ತಲುಪಿದ ಡಿಫಿ ಕಾರ್ಯಕರ್ತರು ಅಲ್ಲಿ ಉಪ್ಪು ನೀರನ್ನು ಸೋಸಿ ಉಪ್ಪು ತಯಾರಿಸಿ ಪ್ರತಿಭಟನೆ ನಡೆಸಿದರು. ಜಿಲ್ಲಾ ಕಾರ್ಯದರ್ಶಿ ಕೆ.ಮಣಿಕಂಠನ್ ಉದ್ಘಾಟಿಸಿದರು. ಅನಿಲ್ ಚೆನ್ನಿಕರೆ ಅ‘್ಯಕ್ಷತೆ ವಹಿಸಿದರು. ಸಿಪಿಎಂ ಏರಿಯಾ ಕಾರ್ಯದರ್ಶಿ ಕೆ.ಎ.ಮುಹಮ್ಮದ್ ಹನೀಫ್, ಏರಿಯಾ ಸಮಿತಿ ಸದಸ್ಯ ಕೆ.ರವೀಂದ್ರನ್, ಡಿಫಿ ಜಿಲ್ಲಾ ಸಮಿತಿ ಸದಸ್ಯ ಎನ್.ಕೆ.ಪ್ರಣಯ, ಸು‘ಾಷ್ ಪಾಡಿ, ಪಿ.ಶಿವಪ್ರಸಾದ್ ಮಾತನಾಡಿದರು
.