×
Ad

​​ಕಾಸರಗೋಡು: ಏಕಕಾಲದಲ್ಲಿ 100 ತೆಂಗು ಸಸಿ ನೆಡುವ ಮೂಲಕ ಚಾಲನೆ

Update: 2016-03-12 19:01 IST

​​ಕಾಸರಗೋಡು: ಕಾಸರಗೋಡು ಕೇಂದ್ರ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ( ಸಿ ಪಿ ಸಿ ಆರ್ ಐ ) ನ ಶತಮಾನೋತ್ಸವಕ್ಕೆ  ಶನಿವಾರ  ಏಕಕಾಲದಲ್ಲಿ ೧೦೦ ತೆಂಗು ಸಸಿ ನೆಡುವ ಮೂಲಕ ಚಾಲನೆ ನೀಡಲಾಯಿತು.  ನೂರು ವರ್ಷ ತುಂಬಿದ ಸಂದರ್ಭದಲ್ಲಿ  ೧೦೦ ತೆಂಗು ನೀಡಲಾಗಿದೆ.
ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ದೆಹಲಿ  ತೋಟಗಾರಿಕಾ ಸಯನ್ಸ್ ಕೇಂದ್ರ (ಐಸಿಎರ್) ದ  ಉಪ ನಿರ್ದೇಶಕ ಡಾ . ಎನ್ . ಕೆ  ಕೃಷ್ಣ ಕುಮಾರ್  ಉದ್ಘಾಟಿಸಿದರು.
ಕ್ಯಾ೦ಪ್ಕೋ ಅಧ್ಯಕ್ಷ  ಎಸ್. ಆರ್ ಸತೀಶ್ ಕುಮಾರ್ ಮುಖ್ಯ ಭಾಷಣ ನೀಡಿದರು.
ಸಮಾರಂಭದಲ್ಲಿ ಸಿಪಿಸಿಆರ್ ಐ   ಡಾ . ಪಿ . ಚೌಡಪ್ಪ , 
 ಸಿಪಿಸಿಆರ್ ಐ   ಪೂರ್ವ ನಿರ್ದೇಶಕ ಡಾ . ಕೆ . ವಿ   ಆಹಮ್ಮದ್ ಬಾವಪ್ಪ , ಡಾ. ಕೆ . ಯು. ಕೆ  ನಂಬೂದಿರಿ, ಡಾ . ಜೋರ್ಜ್  ವಿ . ಥಾಮಸ್ , ಡಾ . ಎನ್. ಪಿ ಸಿಂಗ್ , ಡಾ . ಪಿ . ಎಲ್ ಸರೋಜ್,  ಡಾ . ಸಿ . ಎನ್ ರವಿ ಶಂಕರ್ ,  ಡಾ . ಜೇಮ್ಸ್  ಜೇಕಬ್,  ಕೊಂಕೋಡಿ ಪದ್ಮನಾಭ , ಜ್ಯೋತಿಷ್ ಜಗನ್ನಾಥ್ ,  ಡಾ . ಎ೦. ಗೋವಿಂದನ್  ಮೊದಲಾದವರು ಉಪಸ್ಥಿತರಿದ್ದರು .
ಸಿಪಿಸಿಆರ್ ಐ  ನಿರ್ದೇಶಕ  ಡಾ . ಪಿ. ಚೌಡಪ್ಪ .   
 ಡಾ . ಸಿ. ತಂಬಾನ್ ಸ್ವಾಗತಿಸಿದರು . ಡಾ . ಕೆ ಮುರಳೀಧರನ್ ವಂದಿಸಿದರು.
ಸಮಾರಂಭದಲ್ಲಿ ಚಿತ್ರಕಲಾವಿದ ಪಿ. ಎಸ್ ಪುಣಿ೦ಚತ್ತಾಯ 
ರವರನ್ನು  ಸನ್ಮಾನಿಸಲಾಯಿತು.
ಶತಮಾನೋತ್ಸವದಂಗವಾಗಿ  ಡಿಸೆಂಬರ್  ತನಕ  ವಿವಿಧ ಕಾರ್ಯಕ್ರಮಗಳನ್ನು  ಹಮ್ಮಿಕೊಳ್ಳಲಾಗಿದೆ.
ತೆಂಗಿನಕಾಯಿ ಆಧರಿಸಿ ಸಿಪಿಸಿಆರ್‌ಐ ತಯಾರಿಸಿದ ಚಾಕಲೇಟ್, ಕೃಷಿಗೆ ಸಂಬಂಧಿಸಿದ ಪುಸ್ತಕ ಬಿಡುಗಡೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News