ಭಟ್ಕಳ: ಮಾ,13ರಂದು ತಾಲೂಕು ಮಟ್ಟದ ಯುವಜನಮೇಳ
ಭಟ್ಕಳ: ತಾಲೂಕು ಮಟ್ಟದ ಯುವಜನಮೇಳ ಮಾ,13ರಂದು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಂಡಳ್ಳಿಯಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ತಾಲೂಕಾ ಪಂಚಾಯತ್, ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ, ತಾಲೂಕಾ ಯುವ ಒಕ್ಕೂಟ, ಗ್ರಾಮ ಪಂಚಾಯತ್ ಮುಂಡಳ್ಳಿ ಹಾಗೂ ಶ್ರೀ ಶಾರದಾಂಬಾ ಸೇವಾ ಟ್ರಸ್ಟ್ ಮುಂಡಳ್ಳಿ ಇವುಗಳ ಆಶ್ರಯಲ್ಲಿ ಯುವಜನ ಮೇಳ ನಡೆಯಲಿದೆ. ಯುವಜನ ಮೇಳವನ್ನು ಮಆ.‘13ರಂದು ರವಿವಾರ ಬೆಳಿಗ್ಗೆ 9 ಗಂಟೆಗೆ ಶಾಸಕ ಮಂಕಾಳ ಎಸ್. ವೈದ್ಯ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಮುಂಡಳ್ಳಿ ಗ್ರಾ.ಪಂ.ಅಧ್ಯಕ್ಷೆ ನಾಗರತ್ನ ಚಂದಪ್ಪ ಮೊಗೇರ ವಹಿಸುವರು. ಮುಖ್ಯ ಅತಿಥಿಗಳಾಗಿ ಸಾಂಬಾರು ಮಂಡಳಿ ಅಧ್ಯಕ್ಷ ಮುಜಾಮಿಲ್ ಖಾಜಿಯಾ, ಜಿಲ್ಲಾ ಪಂಚಾಯತ್ ಸದಸ್ಯೆ ಜಯಶ್ರೀ ಮೊಗೇರ, ಆಲ್ಬರ್ಟ ಡಿಕೋಸ್ತ, ಸಿಂಧೂ ಭಾಸ್ಕರ ನಾಯ್ಕ, ನಾಗಮ್ಮ ಮಾಸ್ತಿ ಗೊಂಡ, ತಾಲೂಕಾ ಪಂಚಾಯತ್ ಸದಸ್ಯರುಗಳು, ಮುಂಡಳ್ಳಿ ಗ್ರಾ.ಪ0.ಉಪಾಧ್ಯಕ್ಷ ನಾಗಪ್ಪ ನಾರಾಯಣ ನಾಯ್ಕ, ಜಿಲ್ಲಾ ಯುವ ಒಕ್ಕೂಟದ ಉಪಾಧ್ಯಕ್ಷ ರಾಜೇಶ ನಾಗಪ್ಪ ನಾಯ್ಕ ಉಪಸ್ಥಿತರಿರುವರು ಎಂದು ಶ್ರೀ ಶಾರದಾಂಬ ಸೇವಾ ಟ್ರಸ್ಟ್ ಅಧ್ಯಕ್ಷ ಸುಕ್ರಯ್ಯ ಡಿ. ಹಳ್ಳೇರ, ತಾಲೂಕಾ ಯುವ ಒಕ್ಕೂಟದ ಅಧ್ಯಕ್ಷ ಕೃಷ್ಣ ನಾಯ್ಕ, ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕಿ ಗಾಯತ್ರಿ ಜಿ., ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸಿ.ಟಿ. ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತಾಲೂಕಿನ ಯುವಕ-ಯುವತಿ ಮಂಡಳಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆಯೂ ಸಂಘಟಕರು ಕೋರಿದ್ದಾರೆ.