×
Ad

ಆಳ್ವಾಸ್ ಮೀಡಿಯಾ ಬಝ್ ಸಮಾರೋಪ

Update: 2016-03-12 20:01 IST

ಉಜಿರೆ ಎಸ್‌ಡಿಎಂ ಚಾಂಪಿಯನ್, ಕಾರ್ಕಳದ ಭುವನೇಂದ್ರ ರನ್ನರ್‌ಅಪ್
ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ 2 ದಿನಗಳು ನಡೆದ ‘ಆಳ್ವಾಸ್ ಮೀಡಿಯಾ ಬಝ್ 2016’ ರಾಷ್ಟ್ರೀಯ ಮಾಧ್ಯಮ ಉತ್ಸವದ ಸ್ಪರ್ಧೆಗಳಲ್ಲಿ ಉಜಿರೆ ಎಎಸ್‌ಡಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಸಮಗ್ರ ಪ್ರಶಸ್ತಿಯನ್ನು ಹಾಗೂ ಕಾರ್ಕಳ ಶ್ರೀಭುವನೇಂದ್ರ ಕಾಲೇಜಿನ ಪತ್ರಿಕೋದ್ಯಮ ವಿಭಾಗ ರನ್ನರ್‌ಅಫ್ ಪ್ರಶಸ್ತಿ ಪಡೆದುಕೊಂಡಿದೆ. ಡೆಕ್ಕಾನ್ ಹೆರಾಲ್ಡ್ ಪತ್ರಿಕೆಯ ಮಂಗಳೂರು ಬ್ಯುರೋ ಮುಖ್ಯಸ್ಥ ರೊನಾಲ್ಡ್ ಅನಿಲ್ ಫೆರ್ನಾಂಡಿಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರಶಸ್ತಿ ಪ್ರದಾನ ಮಾಡಿ, ನಾವು ಯಾವ ಕ್ಷೇತ್ರದ ಬಗ್ಗೆ ವರದಿ ಮಾಡುತ್ತೇವೆಯೋ ಆ ಕ್ಷೇತ್ರ ಆಡಳಿತ ವ್ಯವಸ್ಥೆ ಬಗ್ಗೆ ಪರಿಜ್ಞಾನವಿರಬೇಕು. ಉತ್ತಮ ಸಂಪರ್ಕದಿಂದ ವಿಶೇಷ ವರದಿಗಳು ಹೆಚ್ಚು ಲಭ್ಯವಾಗುತ್ತದೆ. ದೊಡ್ಡಮಟ್ಟದ ತನಿಖಾ ವರದಿ ಮಾಡುವುದಕ್ಕಿಂತ ಸರ್ಕಾರದಿಂದ ಫಲಾನುಭವಿಗಳಿಗೆ ಸಿಗುವ ಸವಲತ್ತುಗಳಲ್ಲಿ ಲೋಪದಂತಹ ವರದಿಗಳನ್ನು ಮಾಡುವುದು ಉತ್ತಮ. ಇಂತಹ ವರದಿಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ಹೇಳಿದ ಅವರು ಕಠಿಣಪರಿಶ್ರಮದ ತನಿಖಾ ವರದಿಗಳಿಗೆ ನ್ಯಾಯ ಒದಗಿಸಬಹುದು ಎಂದರು.

 ಮೂಡುಬಿದಿರೆ ಪ್ರೆಸ್‌ಕ್ಲಬ್ ಅಧ್ಯಕ್ಷ ಎಂ.ಗಣೇಶ್ ಕಾಮತ್ ಮುಖ್ಯ ಅತಿಥಿಯಾಗಿ ಮಾತನಾಡಿ, ಪತ್ರಕರ್ತರು ಸಮಾಜದಲ್ಲಿ ತನಿಖೆಗೆ ಮುಂದಾಗುವ ಮೊದಲು, ತಾವು ವೃತ್ತಿಗೆ ವಸ್ತುನಿಷ್ಠತೆಯಿಂದ ಕರ್ತವ್ಯ ನಿರ್ವಹಿಸುವ ಬಗ್ಗೆ ಆಂತರಿಕ ತನಿಖೆ ಮಾಡಿಕೊಳ್ಳಬೇಕಾಗಿದೆ. ಗುಣಮಟ್ಟದ ಸುದ್ದಿಗಳನ್ನು ಪತ್ರಕರ್ತರು ನೀಡಬೇಕು ಎಂದರು.

 ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಆಳ್ವಾಸ್ ಕಾಲೇಜಿನ ಸಹಾಯಕ ಆಡಳಿತಾಧಿಕಾರಿ ಉಷಾರಾಣಿ, ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ.ಮೌಲ್ಯ ಜೀವನ್ ಉಪಸ್ಥಿತರಿದ್ದರು.  ರಕ್ಷಿತಾ, ಸೌಮ್ಯ ಅತಿಥಿಗಳನ್ನು ಪರಿಚಯಿಸಿದರು. ದೇವಿಶ್ರೀ ಶೆಟ್ಟಿ ಆಳ್ವಾಸ್ ಮೀಡಿಯಾ ಬರ್ನ ವರದಿ ವಾಚಿಸಿದರು. ವಿಲ್ಸನ್, ರಾಜೇಶ್, ಸೌಜನ್ಯ ಅನುಭವ ಹಂಚಿಕೊಂಡರು. ಮಾನಸ ಕಾರ್ಯಕ್ರಮ ನಿರೂಪಿಸಿದರು. ವಿಶಾಖ ವಿಜೇತರ ವಿವರ ನೀಡಿದರು. ಶ್ರೀನಿವಾಸ್ ಪೆಜತ್ತಾಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News