ಮಂಗಳೂರು : ಶಿಕ್ಷಣವು ಮೌಲ್ಯಧಾರಿತವಾಗಿ ನಮ್ಮ ಜೀವನವನ್ನು ರೂಪಿಸುವಂತಿರಬೇಕು - ಎಸ್. ಗಣೇಶ್ ರಾವ್
ಮಂಗಳೂರು,ಮಾ.12: ಶಿಕ್ಷಣವು ಮೌಲ್ಯಧಾರಿತವಾಗಿ ನಮ್ಮ ಜೀವನವನ್ನು ರೂಪಿಸುವಂತಿರಬೇಕು. ಶಿಕ್ಷಣದೊಂದಿಗೆ ಕೌಶಲ್ಯ ಅಭಿವೃದ್ಧಿ ಮತ್ತು ಸಂವಹನ ಕೌಶಲ್ಯವನ್ನು ಬೆಳೆಸುವುದು ಅಗತ್ಯವಾಗಿರುತ್ತದೆ. ಪ್ರಸ್ತುತ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದರೂ ಅನೇಕ ಸಂದರ್ಭಗಳಲ್ಲಿ ಅವರಲ್ಲಿ ಆತ್ಮವಿಶ್ವಾಸ ಮತ್ತು ಮನೋಸ್ಥೈರ್ಯ ಕಡಿಮೆಯಿರುವುದರಿಂದ ಮುಕ್ತವಾಗಿ ಸ್ಪರ್ಧೆ ಹಾಗೂ ಇತರ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಸುವ ಮುಖಾಂತರ ಸವಾಲುಗಳನ್ನು ಸ್ವೀಕರಿಸಿ ಜೀವನವನ್ನು ಧೈರ್ಯದಿಂದ ಎದುರಿಸಿ ಯಶಸ್ವಿಯಾಗಲು ಸಾಧ್ಯವಿದೆ ಎಂದು ಕರಾವಳಿ ಕಾಲೇಜುಗಳ ಸಮೂಹದ ಆಡಳಿತ ಮಂಡಳಿ, ಜಿ.ಆರ್. ಎಜ್ಯುಕೇಶನ್ ಟ್ರಸ್‌ನ ಸ್ಥಾಪಕಾಧ್ಯಕ್ಷ ಎಸ್. ಗಣೇಶ್ ರಾವ್ ಹೇಳಿದರು.
ಅವರು ನಗರದ ಕರಾವಳಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಆಯೋಜಿಸಲಾದ ಅಂತರ್ ಕಾಲೇಜು ಸಾಂಸ್ಕೃತಿಕ ಹಬ್ಬ ಕೈಜನ್-2016ರ ಅಧ್ಯಕ್ಷತೆಯನು್ನ ವಹಿಸಿ ಮಾತನಾಡಿದರು.
ಸಮಾರಂಭವನ್ನು ಕರಾವಳಿ ಕಾಲೇಜುಗಳ ಸಮೂಹದ ನಿರ್ದೇಶಕಿ ಲತಾ. ಜಿ. ರಾವ್. ಉದ್ಫಾಟಿಸಿದರು. ಕರಾವಳಿ ಕಾಲೇಜುಗಳ ಸಮೂಹದ ವಿವಿಧ ಸಂಸ್ಥೆಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕಿ ದೀಪಿಕಾ ನಿರೂಪಿಸಿದರು, ಉಪನ್ಯಾಸಕ ರೋಶನ್ ಫೆರ್ನಾಂಡೀಸ್ ಸ್ವಾಗತಿಸಿದರು ಾಗೂ ವಿದ್ಯಾರ್ಥಿ ಪ್ಲೆವಿನ್ ವಂದಿಸಿದರು.