×
Ad

ಉಳ್ಳಾಲ: ಮಕ್ಕಳ ಬೆಳವಣಿಗೆ ಕುರಿತ ಮಾಹಿತಿ ಕಾರ್ಯಕ್ರಮದ ಅಗತ್ಯತೆ ಬಹಳಷ್ಟಿದೆ - ರಾಜೇಶ್ ಉಚ್ಚಿಲ್

Update: 2016-03-12 20:05 IST

   ಉಳ್ಳಾಲ: ಮಕ್ಕಳ ಬೆಳವಣಿಗೆ ಕುರಿತ ಮಾಹಿತಿ ಕಾರ್ಯಕ್ರಮ ಹೆತ್ತವರಿಗೆ, ಶಿಕ್ಷಕರಿಗೆ ಬಹಳಷ್ಟು ಅಗತ್ಯತೆ ಇರುತ್ತದೆ. ಒಳ್ಳೆಯ ವಿಚಾರಗಳನ್ನು ಎಳೆ ವಯಸ್ಸಿನಲ್ಲಿ ತಿಳುವಳಿಕೆ ಮೂಡಿದರೆ ಆತ ಉತ್ತಮ ವಿದ್ಯಾರ್ಥಿಯಾಗಲು ಸಾಧ್ಯ ಎಂದು ಸೋಮೇಶ್ವರ ಪಂಚಾಯಿತಿ ಅಧ್ಯಕ್ಷ ರಾಜೇಶ್ ಉಚ್ಚಿಲ್ ಅಭಿಪ್ರಾಯಪಟ್ಟರು. ಅವರು ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕರಿಗಳ ಕಚೇರಿ, ದಕ್ಷಿಣ ವಲಯ ಶಿಕ್ಷಣ ಸಂಪನ್ಮೂಲ ಕೇಂದ್ರ, ಪಡಿ ಸಂಸ್ಥೆ ಮಂಗಳೂರು ಇವರ ಸಹಯೋಗದಲ್ಲಿ ಬಂಟ್ವಾಳದ ಎಸ್.ಎಂ ಚಾರಿಟೇಲ್ ಟ್ರಸ್ಟ್ ಮತ್ತು ಸೋಮೇಶ್ವರ ಗ್ರಾಮ ಪಂಚಾಯತ್ ಆಶ್ರಯದಲ್ಲಿ ಶನಿವಾರ ಪಿಲಾರಿನ ದಕ್ಷಿಣ ಕನ್ನಡ ಜಿಲ್ಲಾಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಗು ಸ್ನೇಹಿ ಶಾಲೆ ಮತ್ತು ಮಗು ಸ್ನೇಹಿ ಪಂಚಾಯತ್ ಕುರಿತು ಮಾಹಿತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಿಕ್ಷಕರ ಕೆಲಸ ಆಧುನಿಕ ತಂತ್ರಜ್ಞಾನಗಳಿಂದ ಸುಲಭವಾಗಿ ನಡೆಯುತ್ತದೆ. ಈ ಮಧ್ಯೆ ವಿದ್ಯಾರ್ಥಿಗಳನ್ನು ಗುಣಾತ್ಮಕ ಚಿಂತನೆಗಳ ಮೂಲಕ ಬೆಳೆಸುವ ಜವಾಬ್ದಾರಿಯುತ ಕಾರ್ಯ ಶಿಕ್ಷಕರ ಮತ್ತು ಹೆತ್ತವರ ಮೇಲಿದೆ ಎಂದರು. ಕ್ಷೇತ್ರ ಶಿಕ್ಷಣ ಸಂಪನ್ಮೂಲ ಕೇಂದ್ರದ ದಕ್ಷಿಣ ವಲಯದ ಸಮನ್ವಯ ಅಧಿಕಾರಿ ಲಕ್ಷ್ಮೀನಾರಾಯಣ ಮಾತನಾಡಿ ಮಕ್ಕಳಲ್ಲಿ ಇರುವ ಹಿಂಜರಿಕೆಯಿಂದ ಸಮಸ್ಯೆಗಳು ಬಹಿರಂಗಗೊಳ್ಳುತ್ತಿಲ್ಲ. ಶಾಲಾ ಎಸ್‌ಡಿ ಎಂಸಿ ಮತ್ತು ಶಿಕ್ಷಕರೊಂದಿಗೆ ವಿದ್ಯಾರ್ಥಿಗಳು ಚರ್ಚೆಯಲ್ಲಿ ಪಾಲ್ಗೊಂಡರೆ ಶಾಲಾ ಆಡಳಿತ ಮಂಡಳಿ ಮಕ್ಕಳ ಅಭಿಪ್ರಾಯಗಳನ್ನು ಕ್ರೂಢೀಕರಿಸಿ ಕೆಲಸ ಮಾಡಬಹುದು. ಗುಣಾತ್ಮಕ ಶಿಕ್ಷಣ ಮತ್ತು ಕಲಿಕೆ ಕಡೆಗೆ ಸೆಳೆಯುವ ಪ್ರಯತ್ನ ಶಿಕ್ಷಕರಿಂದ ಆಗಬೇಕಿದೆೆ ಎಂದರು. ಎಸ್.ಎಂ ಚಾರಿಟೇಬಲ್ ಟ್ರಸ್ಟಿನ ಸ್ಥಾಪಕಾಧ್ಯಕ್ಷ ದಯಾನಂದ ಕೆ.ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು.

ಸೋಮೇಶ್ವರ ಪಂ. ಸದಸ್ಯರಾದ ದೀಪಕ್ ಪಿಲಾರ್, ಉದಯ ಗಟ್ಟಿ ಪಿಲಾರು, ಪಡಿ ಸಂಸ್ಥೆಯಜಿಲ್ಲಾ ಒಕ್ಕೂಟದ ಸಂಯೋಜಕಿ ಕಸ್ತೂರಿ ಬೊಳುವಾರು, ಪಿಲಾರು ಶಾಲೆಯ ಇಮ್ತಿಯಾರ್, ಉಚ್ಚಿಲ ಗುಡ್ಡೆ ಶಾಲೆಯ ಸೆಕಿನಾ ಭಾನು, ಸಂಪನ್ಮೂಲ ವ್ಯಕ್ತಿಯಾಗಿ ದುರ್ಗಾಪ್ರಸಾದ್, ಶಿಕ್ಷಣ ಸಂಪನ್ಮೂಲ ಕೇಂದ್ರದ ಮಾಜಿ ಅಧ್ಯಕ್ಷ ಹಸನ್ ಸಾಹೇಬ್, ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷೆ ಆಶಾಲತಾ ಸುವರ್ಣ, ಕುಂಪಲ ಶಾಲೆ ಮುಖ್ಯಶಿಕ್ಷಕ ವಿಶ್ವನಾಥ ಕುಂಪಲ, ಪಿಲಾರು ಶಾಲೆ ಮುಖ್ಯೋಪಾಧ್ಯಾಯ ರೋಹಿತಾಶ್ವ ಪಿಲಾರು, ಉಚ್ಚಿಲಗುಡ್ಡೆ ಶಾಲೆ ಮುಖ್ಯೋಪಾಧ್ಯಾಯಿನಿ ವಸಂತಿ ಉಪಸ್ಥಿತರಿದ್ದರು.
ಉಷಾ ನಾಯ್ಕ ಸ್ವಾಗತಿಸಿದರು. ಕಮಲಾ ಗೌಡ ಕಾರ್ಯಕ್ರಮ ನಿರ್ವಹಿಸಿದರು. ಆಶಾಲತಾ ಬೇಕಲ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News