ಕ್ರಿಕೆಟ್: ನೇತಾಜಿ-ಕೆಆರ್‌ಸಿಎ ಫೈನಲ್‌ಗೆ
Update: 2016-03-12 23:11 IST
ಪರ್ಕಳ, ಮಾ.12: ಸ್ಥಳೀಯ ನೇತಾಜಿ ಸ್ಪೋರ್ಟ್ಸ್ ಕ್ಲಬ್‌ನ ಆಶ್ರಯದಲ್ಲಿ ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆ ಮತ್ತು ಮಣಿಪಾಲ ವಿವಿ ಸಹಯೋಗದಲ್ಲಿ ಮಣಿಪಾಲ ವಿ.ವಿ. ಮೈದಾನದಲ್ಲಿ ನಡೆಯುತ್ತಿರುವ ಮಂಗಳೂರು ವಲಯ ಮಟ್ಟದ ನೇತಾಜಿ ಟ್ರೋಫಿ 20-20 ಹಾರ್ಡ್‌ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಆತಿಥೇಯ ನೇತಾಜಿ ಸ್ಪೋರ್ಟ್ಸ್ ಕ್ಲಬ್ ಹಾಗೂ ಕರ್ನಾಟಕ ರೀಜಿನಲ್ ಕ್ರಿಕೆಟ್ ಅಕಾಡಮಿ ತಂಡಗಳು ಫೈನಲ್ ಹಂತವನ್ನು ಪ್ರವೇಶಿಸಿವೆ.
ಇಂದು ನಡೆದ ಮೊದಲ ಸೆಮಿಫೈನಲ್‌ನಲ್ಲಿ ನೇತಾಜಿ ಸ್ಪೋರ್ಟ್ಸ್ ಕ್ಲಬ್ ತಂಡ, ಉಡುಪಿಯ ಗ್ಯಾಲಕ್ಸಿ ತಂಡವನ್ನು 44 ರನ್‌ಗಳಿಂದ ಸೋಲಿಸಿದರೆ, ಮತ್ತೊಂದು ಪಂದ್ಯದಲ್ಲಿ ಕೆಆರ್‌ಸಿಎ ತಂಡ, ಉಡುಪಿಯ ರಿಯಲ್‌ಟೆಕ್ ತಂಡವನ್ನು 1 ವಿಕೆಟ್ ಅಂತರದಿಂದ ಪರಾಭವಗೊಳಿಸಿತು.
ಟೂರ್ನಿಯ ಅಂತಿಮ ಪಂದ್ಯ ಮಾ.13ರಂದು ಬೆಳಗ್ಗೆ 9ಕ್ಕೆ ಮಣಿಪಾಲದ ಎಂಡ್‌ಪಾಯಿಂಟ್‌ನಲ್ಲಿ ಮಣಿಪಾಲ ವಿವಿ ಮೈದಾನದಲ್ಲಿ ನಡೆಯಲಿದೆ.