×
Ad

‘ಹರ್ಷೋತ್ಸವ’ದ ಬಹುಮಾನ ವಿತರಣೆ

Update: 2016-03-12 23:18 IST

ಮಂಗಳೂರು, ಮಾ.12: ಗೃಹಪಯೋಗಿ ಹಾಗೂ ಇಲೆಕ್ಟ್ರಾನಿಕ್ ಉತ್ಪನ್ನಗಳ ಮಾರಾಟಕ್ಕೆ ಹೆಸರುವಾಸಿಯಾಗಿರುವ ‘ಹರ್ಷ’ದ ಮಳಿಗೆಗಳಲ್ಲಿ ನಡೆಯುತ್ತಿರುವ ವಾರ್ಷಿಕ ಶಾಪಿಂಗ್ ಹಬ್ಬ ‘ಹರ್ಷೋತ್ಸವ’ದ ಪ್ರಯುಕ್ತ ಆಯೋಜಿಸಿರುವ ಲಕ್ಕಿ ಡ್ರಾ ವಿಜೇತರ ವಿವರ ಇಂತಿವೆ.

ಮಂಗಳೂರು: ಇಲ್ಲಿನ ಕೆ.ಎಸ್.ರಾವ್ ರಸ್ತೆಯಲ್ಲಿರುವ ಮಳಿಗೆಯಲ್ಲಿ ಅದೃಷ್ಟಶಾಲಿ ವಿಜೇತ ಗ್ರಾಹಕ ಸಂದೀಪ್ ಅಮೀನ್‌ರಿಗೆ ಬಹುಮಾನವಾಗಿ ಒನಿಡಾ ಎ.ಸಿ.ಯನ್ನು ಸುನೀಲ್ ಫುರ್ಟಾಡೊ ಹಸ್ತಾಂತರಿಸಿದರು. ಉಡುಪಿ: ಇಲ್ಲಿನ ಕೆ.ಎಂ. ರಸ್ತೆ ಯಲ್ಲಿರುವ ಮಳಿಗೆಯಲ್ಲಿ ಲಕ್ಕಿಡ್ರಾ ವಿಜೇತ ಗ್ರಾಹಕ ಪ್ರಶಾಂತ್ ಪೈಯವರಿಗೆ ಬಹುಮಾನವಾಗಿ ಆ್ಯಪಲ್ ಐಫೋನ್‌ನ್ನು ‘ಹರ್ಷ’ದ ಉಡುಪಿ ಸೇಲ್ಸ್ ಎಕ್ಸಿಕ್ಯೂಟಿವ್ ಶರತ್ ಹಸ್ತಾಂತರಿಸಿದರು. ಇನ್ನೋರ್ವ ಅದೃಷ್ಟಶಾಲಿ ಗ್ರಾಹಕ ಮಣಿಪಾಲದ ಮಹೇಶ್‌ಪ್ರಸಾದ್‌ರಿಗೆ ಬಹುಮಾನವಾಗಿ ಟಿಲ್ಟಿಂಗ್ ಗ್ರೈಂಡರ್‌ನ್ನು ಉಡುಪಿಯ ಪ್ರಕಾಶ್ ಇಂಜಿನಿಯರಿಂಗ್‌ನ ಪ್ರಕಾಶ್ ಕೊಡವೂರು ಹಾಗೂ ಮಳಿಗೆಯ ಅಸಿಸ್ಟೆಂಟ್ ಮ್ಯಾನೇಜರ್ ರವೀಂದ್ರ ಕಾಮತ್ ಹಸ್ತಾಂತರಿಸಿದರು.

ಉಡುಪಿ ಕಿತ್ತೂರು ರಾಣಿ ಚೆನ್ನಮ್ಮ ರೋಡ್ ಮಳಿಗೆಯಲ್ಲಿನ ಅದೃಷ್ಟಶಾಲಿ ವಿಜೇತ ಗ್ರಾಹಕರಾದ ಮರ್ಲಿನ್ ಕುಂದರ್‌ರಿಗೆ ಬಹುಮಾನವಾಗಿ ಮೈಕ್ರೋವೇವ್ ಓವನ್‌ನ್ನು ಮಳಿಗೆಯ ಸೇಲ್ಸ್ ಎಕ್ಸಿಕ್ಯೂಟಿವ್ ಚಂದ್ರೇಶ್ ಹಸ್ತಾಂತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News