ಮೀನುಗಾರ ಸಮುದ್ರಪಾಲು
Update: 2016-03-12 23:24 IST
ಮಲ್ಪೆ, ಮಾ.12: ಇಲ್ಲಿಗೆ ಸಮೀಪದ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಮೀನುಗಾರರೊಬ್ಬರು ಆಕಸ್ಮಿಕವಾಗಿ ಬೋಟಿನಿಂದ ನೀರಿಗೆ ಬಿದ್ದು ನಾಪತ್ತೆ ಯಾಗಿರುವ ಬಗ್ಗೆ ವರದಿಯಾಗಿದೆ.
ಸಮುದ್ರಪಾಲಾದವರನ್ನು ಭಟ್ಕಳದ ಪ್ರಕಾಶ್ ನಾಯ್ಕ ಎಂದು ಗುರುತಿಸ ಲಾಗಿದೆ. ಇವರು ಮಾ.8ರಂದು ಮಲ್ಪೆಬಂದರಿನಿಂದ ಗಂಗಾಲಕ್ಷ್ಮೀ ಎಂಬ ಬೋಟಿನಲ್ಲಿ ಇತರರೊಂದಿಗೆ ಮೀನುಗಾರಿಕೆಗೆ ಹೊರಟಿದ್ದು, ಮಾ.9ರಂದು ಬೆಳಗಿನ ಜಾವ ಸುಮಾರು 45 ಮಾರು ಆಳ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದಾಗ ಪ್ರಕಾಶ್ ನಾಯ್ಕಾ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರದ ನೀರಿಗೆ ಬಿದ್ದು ನಾಪತ್ತೆ ಯಾದರು. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.