‘ಮಕ್ಕಳು ತಯಾರಿಸಿದ ಉತ್ಪನ್ನಗಳ ನಿರಾಕರಣೆ ಕೂಡ ಅಸ್ಪಶ್ಯತೆ’

Update: 2016-03-12 18:43 GMT

 ಮಣಿಪಾಲ, ಮಾ.12: ಮಗು ತನ್ನ ಶಿಕ್ಷಣ ಹಾಗೂ ಬದುಕು ರೂಪಿಸಿಕೊಳ್ಳಲು ದುಡಿಮೆಯಲ್ಲಿ ತೊಡಗಿಸಿ, ತಯಾರಿಸಿದ ವಸ್ತುಗಳನ್ನು ನಿರಾಕರಿಸುವ ಪಾಶ್ಚಿಮಾತ್ಯ ಪರಿಕಲ್ಪನೆಯೂ ಅಸ್ಪಶ್ಯತೆಯಾಗಿದೆ. ಈ ದುಡಿಮೆಯಲ್ಲಿ ಅಪಾಯ ಹಾಗೂ ಶೋಷಣೆಗಳಿದ್ದರೆ ಅದನ್ನು ವಿರೋಧಿಸಬೇಕೇ ಹೊರತು ಉತ್ಪನ್ನ ಅಥವಾ ದುಡಿಮೆಯನ್ನಲ್ಲ ಎಂದು ಬೆಂಗಳೂರಿನ ಕನ್ಸರ್ನ್ ಫಾರ್ ವರ್ಕಿಂಗ್ ಚಿಲ್ಡ್ರನ್(ಸಿಡಬ್ಲ್ಯೂಸಿ)ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ದಾಮೋದರ್ ಆಚಾರ್ಯ ಹೇಳಿದ್ದಾರೆ.

ಮಣಿಪಾಲ ವಿವಿಯ ಸ್ಕೂಲ್ ಆ್ ಕಮ್ಯೂನಿಕೇಶನ್(ಎಸ್‌ಒಸಿ) ವತಿಯಿಂದ ಎಸ್‌ಒಸಿಯಲ್ಲಿ ನಡೆದ ‘ನಮ್ಮ ಅಂಗಡಿ’ ಕೈಮಗ್ಗ, ಕರಕುಶಲ ಹಾಗೂ ಪರಿಸರಸ್ನೇಹಿ ಉತ್ಪನ್ನಗಳ ವಾರ್ಷಿಕ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿ ಯಾಗಿ ಅವರು ಮಾತನಾಡುತ್ತಿದ್ದರು.

ಮೇಳವನ್ನು ಮಣಿಪಾಲ ವಿವಿಯ ಪಬ್ಲಿಕ್ ಹೆಲ್ತ್ ವಿಭಾಗದ ಎಂಎಸ್‌ಡಬ್ಲ್ಯೂ ಕಾರ್ಯಕ್ರಮ ಸಂಯೋಜಕಿ ಡಾ.ಲೀನಾ ಅಶೋಕ್ ಉದ್ಘಾಟಿಸಿದರು. ಎಸ್‌ಒಸಿಯ ನಿರ್ದೇಶಕಿ ಡಾ.ನಂದಿನಿ ಲಕ್ಷ್ಮೀಕಾಂತ್, ಕಾರ್ಪೊರೇಟ್ ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥ ಪದ್ಮಕುಮಾರ್, ಸಂಯೋಜಕಿ ಸೌಪರ್ಣಿಕಾ ಅತ್ತಾವರ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಮೇಘನಾ ಮಂಜುನಾಥ್ ಸ್ವಾಗತಿಸಿದರು. ಕ್ಯಾರೆನ್ ಫೆರ್ನಾಂಡಿಸ್ ವಂದಿಸಿದರು. ಕರಣ್ ನೇಗಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News