×
Ad

ಪೆರಿಯ: ರಸ್ತೆ ಅಪಘಾತಕ್ಕೆ ವೀಡಿಯೋಗ್ರಾಫರ್ ಬಲಿ

Update: 2016-03-13 13:54 IST

ಕಾಸರಗೋಡು, ಮಾ.13: ಟ್ಯಾಂಕರ್ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ವಿಡಿಯೋಗ್ರಾಫರ್ ಒಬ್ಬರು ಮೃತಪಟ್ಟ ಘಟನೆ ಪೆರಿಯ ಬಳಿ ಇಂದು ಬೆಳಗ್ಗೆ ನಡೆದಿದೆ.
ಮೃತಪಟ್ಟವರನ್ನು ಬಾರ ಮುಲ್ಲಚ್ಚೇರಿ ನಿವಾಸಿ ಅನಿಲ್ರಾಜ್(30) ಎಂದು ಗುರುತಿಸಲಾಗಿದೆ.
ಪೆರಿಯ ಕಾರೋಡ ಎಂಬಲ್ಲಿ ಈ ಅಪಘಾತ ಸಂಭವಿಸಿದೆ.
   ಕಾರ್ಯಕ್ರಮವೊಂದರ ವೀಡಿಯೋಗ್ರಾಫಿಂಗ್ ಮುಗಿಸಿ ಕಾಸರಗೋಡು ಕಡೆಗೆ ಬರುತ್ತಿದ್ದಾಗ ಟ್ಯಾಂಕರ್ ಲಾರಿ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಇದರಿಂದ ಗಂಭೀರ ಗಾಯಗೊಂಡಿದ್ದ ಅನಿಲ್‌ರಾಜ್‌ರನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ತಲುಪಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟರೆನ್ನಲಾಗಿದೆ.
ಈ ಬಗ್ಗೆ ಬೇಕಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News