ಸುವಿಚಾರ ಲೇಖನ & ಕವನ ಸ್ಪರ್ಧೆ
ಸಾಮಾಜಿಕ ತಾಣಗಳಲ್ಲಿ ತರಂಗವಾಗಿರುವ, ಅಸಂಖ್ಯಾತ ಯುವ ಬರಹಗಾರರ ಒಕ್ಕೂಟವಾಗಿರುವ 'ಸುವಿಚಾರ' ಬಳಗವು ಯುವ ಬರಹಗಾರರನ್ನು ಪ್ರೋತ್ಸಾಹಿಸಲು ಹಾಗೂ ಹೊಸ ಹೊಸ ಸಾಹಿತಿಗಳನ್ನು ಸಮಾಜಕ್ಕೆ ಅರ್ಪಿಸುವ ಸಲುವಾಗಿ ಲೇಖನ ಸ್ಪರ್ಧೆ ಹಾಗೂ ಕವನ ಸ್ಪರ್ಧೆಯನ್ನು ಏರ್ಪಡಿಸುತ್ತಿದೆ. ಪ್ರತೀ ಎರಡು ವಾರಗಳ ಅಂತರದಲ್ಲಿ ಲೇಖನ ಹಾಗೂ ಕವನ ಸ್ಪರ್ಧೆಗಳು ನಡೆಸಲ್ಪಡುತ್ತಿದೆ. ಈಗಾಗಲೇ ತಲಾ ಒಂದರಂತೆ ಲೇಖನ & ಕವನ ಸ್ಪರ್ಧೆ ನಡೆದಿದ್ದು, ಲೇಖನದಲ್ಲಿ ಶಾಕೀರ್ ಅಕ್ಕರಂಗಡಿ ಹಾಗೂ ಕವನದಲ್ಲಿ ಹಕೀಂ ಬಜ್ಪೆ ಎಂಬವರು ವಿಜೇತರಾಗಿರುತ್ತಾರೆ. ಈ ಸ್ಪರ್ಧೆಯನ್ನು ನಿರಂತರವಾಗಿ ನಡೆಸಲಾಗುವುದು ಹಾಗೂ ಆಕರ್ಷಕ ಬಹುಮಾನಗಳನ್ನೂ ನೀಡಲಾಗುತ್ತದೆ.
ಪ್ರತೀ ಸ್ಪರ್ಧೆಗೂ ವಿಷಯವನ್ನು ಬುಧವಾರ ದಿನ ಪ್ರಕಟಿಸುವುದರೊಂದಿಗೆ ಮುಂದಿನ 12 ದಿನಗಳವರೆಗೆ ಅಂದರೆ, ವಿಷಯ ಪ್ರಕಟನೆಯ ಬಳಿಕದ ಎರಡನೇ ಭಾನುವಾರದ ವರೆಗೆ ಬರಹಗಳನ್ನು ಸ್ವೀಕರಿಸಲಾಗುತ್ತದೆ. ಹಾಗೂ ಬರಹಗಳು ಅಪ್ರಕಟಿತವಾಗಿರಬೇಕು ಎಂದು ಸ್ಪರ್ಧಾ ಆಯೋಜಕರೂ, ಸುವಿಚಾರದ ಸಂಸ್ಥಾಪಕನೂ ಆಗಿರುವ ಹಕೀಂ ಪದಡ್ಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಅಲ್ಲದೇ ಸ್ಪರ್ಧೆಯಲ್ಲಿ ವಿಜೇತರಾದವರನ್ನು ಆ ವಾರದ ಕವಿ ಅಥವಾ ವಾರದ ಲೇಖಕನಾಗಿ ಗುರುತಿಸಲಾಗುತ್ತದೆ ಜೊತೆಗೆ ಮುಂದಿನ ದಿನಗಳಲ್ಲಿ ನಡೆಸಲಾಗುವ 'ಸುವಿಚಾರ ಸಾಹಿತ್ಯ ಸಂಗಮ'ದಲ್ಲಿ ಸನ್ಮಾನಿಸಲಾಗುತ್ತದೆ. ಹಾಗಾಗಿ ಪ್ರತಿಯೊಬ್ಬ ಬರಹಗಾರರೂ ಈ ಸ್ಪರ್ಧೆಯಲ್ಲಿ ಭಾಗವಹಿಸಿ, ನಮ್ಮ ಈ ಎಳೆಯ ಪ್ರಯತ್ನದ ಯಶಸ್ವಿಗೆ ಕಾರಣರಾಗಬೇಕೆಂದು ಹಕೀಂ ರವರು ಆಗ್ರಹಿಸಿದ್ದಾರೆ.
ಈ ವಾರದ ಲೇಖನ ಸ್ಪರ್ಧೆಯ ವಿಷಯ;
''ಇತಿಹಾಸದ ತಿರುಚುವಿಕೆಯಿಂದ ಅನಾಥವಾಗುತ್ತಿರುವ ಭಾರತದ ಸಂವಿಧಾನ''
ಲೇಖನ ತಲುಪಲು ಕೊನೆಯ ದಿನಾಂಕ;
20-03-2015 ನೇ ಭಾನುವಾರ.
ಲೇಖನವನ್ನು +918548935768 ಈ ನಂಬರಿಗೆ ವಾಟ್ಸಾಪ್ ಮಾಡಬಹುದು,ಅಥವಾlukku186@gmail.com ಗೆ ಇಮೇಲ್ ಮಾಡಬಹುದು.
ಫಲಿತಾಂಶವನ್ನು 22ನೇ ತಾರೀಕಿನಂದು ಮಂಗಳವಾರ ದಿನ ಸಾಮಾಜಿಕ ತಾಣದಾದ್ಯಂತ ಪ್ರಕಟಿಸಲಾಗುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಲಾಗಿದೆ.