×
Ad

ಉಪ್ಪಿನಂಗಡಿ: ಕಂಬಳದೊಂದಿಗೆ ಜೀವನದಿ ನೇತ್ರಾವತಿಯೂ ಉಳಿಯಲಿ- ಸುಂದರ ರೈ ಮಂದಾರ

Update: 2016-03-13 17:15 IST

 ಉಪ್ಪಿನಂಗಡಿ: ತುಳುನಾಡಿನ ಸಂಸ್ಕೃತಿಯಾದ ಕಂಬಳ ಉಳಿಯುವುದರೊಂದಿಗೆ ಇಲ್ಲಿನ ಜೀವನದಿಯಾದ ನೇತ್ರಾವತಿಯೂ ಉಳಿಯಲಿ ಎಂದು ಚಲನಚಿತ್ರ ನಟ ಸುಂದರ ರೈ ಮಂದಾರ ತಿಳಿಸಿದರು.
ಇಲ್ಲಿನ ಹಳೆಗೇಟು ದಡ್ಡುವಿನ ನೇತ್ರಾವತಿ ನದಿ ಕಿನಾರೆಯಲ್ಲಿ ನಡೆದ ವಿಜಯ- ವಿಕ್ರಮ ಜೋಡುಕರೆ ಕಂಬಳದಲ್ಲಿ ಭಾನುವಾರ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.

ನಮ್ಮ ಮಣ್ಣಿನ ಸಂಸ್ಕೃತಿ, ಆಚಾರ- ವಿಚಾರಗಳನ್ನು ಮುಂದಿನವರಿಗೂ ಉಳಿಸುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಹಿರಿಯರ ಆರಾಧನೆ, ಆಚರಣೆಗಳನ್ನು ಉಳಿಸಿ ಬೆಳೆಸುವುದು ಪ್ರತಿಯೋರ್ವರ ಕರ್ತವ್ಯವಾಗಬೇಕು ಎಂದರು. ಬಹುಮಾನ ವಿತರಿಸಿ ಮಾತನಾಡಿದ ವಿಜಯ-ವಿಕ್ರಮ ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಇಪ್ಪತ್ತಮೂರುವರೆ ಗಂಟೆಯಲ್ಲಿ ಮುಗಿಯುವ ಮೂಲಕ ಉಪ್ಪಿನಂಗಡಿಯ ಕಂಬಳ ಯಶಸ್ಸು ಸಾಧಿಸಿದೆ. ಎಲ್ಲರ ಸಹಭಾಗಿತ್ವವೇ ಇದಕ್ಕೆ ಕಾರಣವಾಗಿದ್ದು, ಕಂಬಳಕ್ಕೆ ಅನ್ಯಾಯವಾದಾಗ ಹೀಗೆಯೇ ಒಂದಾಗಿ ಹೋರಾಡೋಣ ಎಂದರು. ವೇದಿಕೆಯಲ್ಲಿ ಉದ್ಯಮಿ ದಾಸಪ್ಪ ಗೌಡ ಕೊಡ್ಯಡ್ಕ, ಕಂಬಳ ಸಮಿತಿಯ ಜಿಲ್ಲಾ ಕಾರ್ಯದರ್ಶಿ ವಿಜಯಕುಮಾರ್ ಕಂಗಿನಮನೆ, ಹಿರಿಯ ತೀರ್ಪುಗಾರ ಮಹಾಬಲ ಆಳ್ವ, ತೀರ್ಪುಗಾರ ಎಡ್ತೂರು ರಾಜೀವ ಶೆಟ್ಟಿ, ಸುಧಾಕರ ಶೆಟ್ಟಿ ಮುಗೆರೋಡಿ, ಅಪ್ಪು, ಸದಾನಂದ ರೈ ಅರ್ಗುಡಿ ಗುತ್ತು, ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಉಮೇಶ್ ಶೆಣೈ ನಂದಾವರ, ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ, ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ದಿಲೀಪ್ ಶೆಟ್ಟಿ ಕರಾಯ, ಆದರ್ಶ ಕಜೆಕ್ಕಾರು, ರಾಮಚಂದ್ರ ಮಣಿಯಾಣಿ, ಚಂದ್ರಶೇಖರ ಮಡಿವಾಳ, ಜಯಂತ ಪೊರೋಳಿ, ವಿಶ್ವನಾಥ ಶೆಟ್ಟಿ ಕಂಗ್ವೆ, ವಿಜೇತ ಕಂಬಳ ಕೋಣಗಳ ಮಾಲಕರು, ಕೋಣ ಓಡಿಸುವವರು ಮತ್ತಿತರರು ಉಪಸ್ಥಿತರಿದ್ದರು. ವಿಜಯ- ವಿಕ್ರಮ ಕಂಬಳ ಸಮಿತಿಯ ಗೌರವ ಸಲಹೆಗಾರ ನಿರಂಜನ್ ರೈ ಮಠಂತಬೆಟ್ಟು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮೋಹನ್ ಪಕಳ ಕುಂಡಾಪು ವಂದಿಸಿರು.

ಒಟ್ಟು 109 ಜೋಡಿ ಕೋಣಗಳು ಈ ಬಾರಿಯ ಉಪ್ಪಿನಂಗಡಿ ಕಂಬಳದಲ್ಲಿ ಭಾಗವಹಿಸಿದ್ದವು.

ಕಂಬಳದ ಫಲಿತಾಂಶ:
ಕನಹಲಗೆ (ಆರೂವರೆ ಕೋಲು ನಿಶಾನಿಗೆ ನೀರು ಹಾಯಿಸಿದೆ)
1. ಬಾರಕೂರು ಶಾಂತರಾಮ ಶೆಟ್ಟಿ - ಪ್ರಥಮ, (ಮಂದಾರ್ತಿ ಶೀರೂರು ಗೋಪಾಲ ನಾಯ್ಕ- ಕೋಣ ಓಡಿಸಿದವರು)
2. ವಾಮಂಜೂರು ತಿರುವೈಲು ಗುತ್ತು ನವೀಣ್ ಚಂದ್ರ ಆಳ್ವ - ಪ್ರಥಮ, (ಮಂದಾರ್ತಿ ಶೀರೂರು ನಾರಾಯಣ ನಾಯ್ಕ- ಕೋಣ ಓಡಿಸಿದವರು)

ಹಗ್ಗ ಹಿರಿಯ
1.ಸುರತ್ಕಲ್ ತಡಂಬೈಲು ನಾಗೇಶ್ ದೇವಾಡಿಗ - ಪ್ರಥಮ, (ಕೊಳಕೆ ಇರ್ವತ್ತೂರು ಆನಂದ- ಕೋಣ ಓಡಿಸಿದವರು)
2.ಮಾಳ ಆನಂದ ನಿಲಯ ಶೇಖರ್ ಎ. ಶೆಟ್ಟಿ- ದ್ವಿತೀಯ, (ಮಾಳ ಕಲ್ಲೇರಿ ಭರತ್ ಶೆಟ್ಟಿ- ಕೋಣ ಓಡಿಸಿದವರು)

ಹಗ್ಗ ಕಿರಿಯ
1.ಕಾಂತಾವರ ಅಂಬೋಡಿಮಾರು ರಘುನಾಥ ದೇವಾಡಿಗ - ಪ್ರಥಮ, (ಪಣಪಾಲು ಪ್ರವೀಣ್ ಕೋಟ್ಯಾನ್- ಕೋಣ ಓಡಿಸಿದವರು)


2. ಕಾಂತಾವರ ಅಂಬೋಡಿಮಾರು ರಘುನಾಥ ದೇವಾಡಿಗ - ದ್ವಿತೀಯ, (ಪಣಪಾಲು ಪ್ರವೀಣ್ ಕೋಟ್ಯಾನ್- ಕೋಣ ಓಡಿಸಿದವರು) ನೇಗಿಲು ಹಿರಿಯ
 1.ಬೋಳದ ಗುತ್ತು ಸತೀಶ್ ಶೆಟ್ಟಿ - ಪ್ರಥಮ, (ಹೊಕ್ಕಾಡಿ ಗೋಳಿಹಕ್ಕೇರಿ ಸುರೇಶ್ ಎಂ. ಶೆಟ್ಟಿ- ಕೋಣ ಓಡಿಸಿದವರು)
2.ಕಾಂತಾವರ ಸೃಷ್ಠಿ ಉದಯ ಅಚ್ಚಣ್ಣ ಶೆಟ್ಟಿ (ದ್ವಿತೀಯ), (ಅಳದಂಗಡಿ ರವಿಕುಮಾರ್- ಕೋಣ ಓಡಿಸಿದವರು)

ನೇಗಿಲು ಕಿರಿಯ
1.ಬೋಳದಗುತ್ತು ಸತೀಶ್ ಶೆಟ್ಟಿ- ಪ್ರಥಮ, (ಹೊಕ್ಯಾಡಿ ಗೋಳಿಹಕ್ಕೇರಿ ಸುರೇಶ್ ಎಂ. ಶೆಟ್ಟಿ- ಕೋಣ ಓಡಿಸಿದವರು)
2.ಮೂಡಬಿದ್ರೆ ನ್ಯೂ ಪಡಿವಾಳ್ಸ್ ಮಿಥುನ್ ಬಿ. ಶೆಟ್ಟಿ- ದ್ವಿತೀಯ, (ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ- ಕೋಣ ಓಡಿಸಿದವರು)

ಅಡ್ಡ ಹಲಗೆ
1.ಬೋಳಾರ ತ್ರಿಶಾಲ್ ಕೆ. ಪೂಜಾರಿ - ಪ್ರಥಮ, (ಬಂಗಾಡಿ ಕುದ್ಮಾಣ್ ಲೋಕಯ್ಯ ಗೌಡ - ಕೋಣ ಓಡಿಸಿದವರು)
2.ಬೇಲಾಡಿ ಬಾವ ಅಶೋಕ್ ಶೆಟ್ಟಿ- ದ್ವಿತೀಯ, (ನಾರಾವಿ ಯುವರಾಜ್ ಜೈನ್ - ಕೋಣ ಓಡಿಸಿದವರು)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News