×
Ad

ಮಂಗಳೂರು: ಟೆರೇಸ್ ಕಟ್ಟಡಗಳಲ್ಲಿ ಜೇನು ಸಾಕಣೆ ಮಾಡಬಹುದು - ಜೆ.ಪಿ.ಶ್ಯಾಮ್ ಭಟ್

Update: 2016-03-13 18:17 IST

ಮಂಗಳೂರು,ಮಾ,13:ಟೆರೇಸ್ ಕಟ್ಟಡದಲ್ಲಿಯೂ ಜೇನು ಸಾಕಣೆ ಮಾಡಬಹುದಾಗಿದೆ.ಆದರೆ ಅದಕ್ಕೆ ಜೇನು ವಾಸಿಸಲು ಅನುಕೂಲವಾಗುವ ವಾತವರಣ ಅಲ್ಲಿರಬೇಕು ಎಂದು ದ.ಕ ಜಿಲ್ಲಾ ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷ ಜಿ.ಪಿ.ಶ್ಯಾಮ್ ಭಟ್ ತಿಳಿಸಿದ್ದಾರೆ.
 ಅವರು ಇಂದು ನಗರದ ಕದ್ರಿ ಉದ್ಯಾನವನದಲ್ಲಿ ದ.ಕ ಜಿಲ್ಲಾ ಪಂಚಾಯತ್,ತೋಟಗಾರಿಕಾ ಇಲಾಖೆ ರಾಷ್ಟ್ರೀಯ ತೋಟಗಾರಿಕಾ ಮಿಶನ್ ಹಾಗೂ ಜೇನು ಸಹಕಾರಿ ಸಂಘಗಳ ಸಹಭಾಗಿತ್ವದಲ್ಲಿ ಹಮ್ಮಿಕೊಂಡ ರಾಜ್ಯಮಟ್ಟದ ಜೇನು ಹಬ್ಬದ ಎರಡನೆ ದಿನ ಕೃಷಿಕರೊಂದಿಗಿನ ಸಾವಯವ ಕೃಷಿ ,ಜೇನು ಕೃಷಿ ಸಂವಾದ ಕಾರ್ಯಕ್ರಮವನ್ನುದ್ದೇಶಿ ಮಾತನಾಡಿದರು.
  ನಗರ ಪ್ರದೇಶಗಳಲ್ಲಿ ಟೆರೇಸ್‌ಗಳಲ್ಲಿ ಜೇನು ಪೆಟ್ಟಿಗೆಗಳನ್ನಿಟ್ಟು ಜೇನು ಸಾಕಬಹುದು ಆದರೆ ಈ ಪಟ್ಟಿಗೆಯ ಪ್ರದೇಶದಲ್ಲಿ ಶೇ 50 ರಷ್ಟು ಭಾಗ ನೆರಳಿರಬೇಕಾಗಿದೆ.ಸುತ್ತ ಮುತ್ತ ಜೇನು ನೊಣಗಳಿಗೆ ಜೇನು ಸಂಗ್ರ4ಹಿಸಲು ಅನುಕೂಲಕರವಾದ ಮರ ಗಿಡಗಳಿರಬೇಕು ಎಂದು ಶ್ಯಾಮ್ ಭಟ್ ತಿಳಿಸಿದರು.ಜೇನು ಉತ್ತಮ ಆರೋಗ್ಯ ವರ್ಧಕ ಪಾನೀಯವಾಗಿದೆ.ಜೇನು ತುಪ್ಪವನ್ನು ವಿವಿಧ ರೀತಿಯಲ್ಲಿ ಸೇವಿಸಬಹುದಾಗಿದೆ.ಮೊಸರಿಗೆ ಹಾಕಿ,ಹಾಲಿನೊಂದಿಗೆ,ಜ್ಯೂಸ್‌ಆಗಿ ಸೇವಿಬಹುದಾಗಿದೆ.ಜೇನು ಪಾಕೃತಿಕವಾಗಿ ನಮಗೆ ದೊರಕುವ ಒಂದು ರೀತಿಯ ಸಂಪತ್ತು ಎಂದು ಶ್ಯಾಮ್ ಭಟ್ ತಿಳಿಸಿದರು.
ಸಾವಯವ ಕೃಷಿಗೆ ಸಂಬಂಧಿಸಿದಂತೆ ಭೂಮಿಯ ಫಲವತ್ತತೆಯನ್ನು ಸಂರಕ್ಷಿಸುವ ಗಿಡಗಳನ್ನು ಹೆಚ್ಚು ಹೆಚ್ಚು ನೆಡಬೇಕು.ಶುಂಠಿ ಬೆಳೆ ನೆಲದ ಸಾರವನ್ನು ಹೇಗೆ ಹೀರಿಕೊಂಡು ಬೆಳೆಯುತ್ತದೆ.ಅದರಿಂದಾಗಿ ನೆಲದ ಸತ್ವ ಕಡಿಮೆಯಾಗುತ್ತದೆ ಎನ್ನುವ ಭಾವನೆ ಇರುತ್ತದೆ.ಆದರೆ ಇಂತಹ ಸಂದರ್ಭದಲ್ಲಿ ಅರಸಿನ ಗಿಡವನ್ನು ನೆಟ್ಟಾಗ ನೆಲದಲ್ಲಿ ಮರುವರ್ಷ ಉತ್ತಮ ಬೆಳೆ ಬೆಳೆಯಹಬುದು.ನಾವು ತಿನ್ನುವ ಆಹಾರದಲ್ಲಿ ಅರಸಿನ ಹೇಗೆ ನಂಜು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆಯೋ ಅದೇ ರೀತಿ ಅರಸಿನ ಮಣ್ಣಿನ ಸಾರ ಸಂರಕ್ಷಣೆಯ ಬಗ್ಗೆ ಕಾರ್ಯನಿರ್ವಹಿಸುವ ಗುಣ ಹೊಂದಿರುವುದು ನನ್ನ ಅನುಭವಕ್ಕೆ ಬಂದಿದೆ ಎಂದು ಶ್ಯಾಮ್ ಭಟ್ ತಿಳಿಸಿದರು.ಸಂವಾದ ಗೋಷ್ಠಿಯನ್ನು ತೋಟಗಾರಿಕಾ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಪ್ರವೀಣ್ ನೆರವೇರಿಸಿದರು.
ಎರಡನೇ ದಿನದ ಜೇನು ಮೇಳದಲ್ಲಿ ಜೇನು ತುಪ್ಪದ ವಿವಿಧ ಉತ್ಪನ್ನಗಳನ್ನು ಕೃಷಿಕರು ಮಾರಾಟಕ್ಕೆ ಇಟ್ಟಿದ್ದರು.ಕದ್ರಿಪಾರ್ಕ್‌ನಲ್ಲಿ ಸಾವಯವವಾಗಿ ಬೆಳೆದ ತರಕಾರಿ ಹಣ್ಣು ಗಳ ಮಾರಾಟಮಳಿಗೆಗಳಿದ್ದವು,ತರಕಾರಿ ಬೀಜಗಳನ್ನು ರೈತರು ಆಸಕ್ತಿಯಿಂದ ಖರೀದಿಸುತ್ತಿರುವುದು ಕಂಡು ಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News