×
Ad

ಭಟ್ಕಳ: ಭಯೋತ್ಪಾದನಾ ಕುರಿತ ಗುಪ್ತಚರ ಮಾಹಿತಿ, ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್‌ತಂಡ

Update: 2016-03-13 18:56 IST

   ಭಟ್ಕಳ: ದೇಶದ ಒಳಗೆ ಭಯೋತ್ಪಾದಕರು ನುಸುಳಿದ್ದಾರೆ ಎಂಬ ಕೇಂದ್ರಗುಪ್ತಚರ ವಿಭಾಗದ ಮಾಹಿತಿಯಂತೆರಾಜ್ಯ ಸರಕಾರ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸುವ ಹಿನ್ನಲೆಯಲ್ಲಿಕಾರವಾರದ ಬಾಂಬ್ ಸ್ಕಾಡ್ ಹಾಗೂ ಶ್ವಾನದಳದತಂಡಭಾನುವಾರ ಭಟ್ಕಳದ ರೇಲ್ವೇ ನಿಲ್ದಾಣಕ್ಕೆ ಅಗಮಿಸಿ ರೇಲ್ವೆ ಪ್ರಯಾಣಿಕರ ಸರಕು ಸರಂಜಾಮುಗಳನ್ನು ತಪಾಸಣೆ ನಡೆಸಿದರು.

 ಭಟ್ಕಳಕ್ಕೆ ಹೊರರಾಜ್ಯದಿಂದ ಆಗಮಿಸಿದ ಓಕಾ ಎಕ್ಸೆಪ್ರೆಸ್‌ರೈಲು ಹಾಗೂ ಇತರ ರೈಲುಗಳ ಬೋಗಿಗಳ ಒಳಗೆ ತೆರಳಿದ ಈ ತಂಡತಾವುತಂದ ಬೆಳ್ಳಿ ಹೆಸರಿನ ನಾಯಿಯೊಂದಿಗೆ ತೆರಳಿ ಪ್ರಯಾಣಿಕರನ್ನು ಸಮಾನು ಸರಂಜಾಮುಗಳನ್ನು ತಪಾಸಣೆ ನಡೆಸಿತು. ಈ ಸಂದರ್ಭದಲ್ಲಿ ಭಟ್ಕಳ ರೇಲ್ವೆಇನ್ಸಪೆಕ್ಟರ್ ಸಂತೋಶಗಾಂವಕರ, ಕಾರವಾರದಡಾಗ್ ಸ್ಕಾಡ್‌ತಂಡದ ಸಂಜಯ, ರಮೇಶ, ಸಂತೋಸ, ನಿತ್ಯಾನಂತ ಹಾಗೂ ರೆಲ್ವೆ ಸಿಬ್ಬಂದಿಗಳು ತಪಾಸಣೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News