×
Ad

ಭಟ್ಕಳ: ಮಾ.23ಕ್ಕೆ ಪ್ರಾಚೀನಕೋಟೆ ವೀರಾಂಜನೆಯದೇವಸ್ಥಾನದ ಪುನರ್ ಪ್ರತಿಷ್ಠಾಪನ

Update: 2016-03-13 18:59 IST

 ಭಟ್ಕಳ: ತಾಲೂಕಿನ ಹಾಡುವಳ್ಳಿ ಸಮೀಪದ ಹೊಡೆವಡ್ಡಿಯಅತಿ ಪ್ರಾಚೀನದೇವಸ್ಥಾನವಾದ ಶ್ರೀ ಕೊಟೇ ವೀರಾಂಜನೇಯದೇವಸ್ಥಾನದ ಪುನರ್ ಪ್ರತಿಷ್ಠಾಪನಾ ಕಾರ್ಯ ಮಾರ್ಚ 23 ರಿಂದ ಮಾರ್ಚ 26 ರತನಕ ವಿವಿಧಧಾರ್ಮಿಕಕಾರ್ಯಕ್ರಮದೊಂದಿಗೆ ನಡೆಯಲಿದೆ. ಈ ಕುರಿತುದೇವಸ್ಥಾನದ ಅನುವಂಶೀಯ ಮೊಕ್ತೇಸರಅನಂತ ನಾಯ್ಕ ಪತ್ರಿಕಾಗೋಷ್ಟಿಯಲ್ಲಿ ವಿವರ ನೀಡಿ,  16 ನೇ ಶತಮಾನದ ಕೆಳದಿ ಸಂಸ್ಥಾನದ ಪಾಳೇಗಾರ ಹಾಗೂ ವಿಜಯನಗರ ಸಾಮಾಜ್ಯದ ಮಹಾಮಂತ್ರಿಯಾಗಿದ್ದಉಗ್ರಾಣಿಮನೆಯ ಶ್ರೀ ತಿಮ್ಮಣ್ಣ ನಾಯ್ಕಇವರು ಅಂದಿನ ರಾಜರಕಾಲದಲ್ಲಿಕಟ್ಟಿದ್ದ ಈ ದೇವಸ್ಥಾನ ಕಾಲ ಕ್ರಮೇಣ ಶಿಥೀಲಗೊಂಡು ನಶಿಸಿತ್ತು. ನಂತರದನಮ್ಮಕುಟುಂಬದಲ್ಲಿ ಕೆಲವು ಲೋಪ ದೋಷಗಳು ಕಂಡುಬಂದುಅದನ್ನು ಅಷ್ಠಮಂಗಳ ಪ್ರಶ್ನೆಯಲ್ಲಿ ಕೇಳಿದಾಗ ನಮ್ಮ ಪೂರ್ವಜ ಪಾಳೇಗಾರ ತಿಮ್ಮಣ್ಣ ನಾಯ್ಕಕಟ್ಟಿದ್ದ ಹೊಗೆವಡ್ಡಿಯಲ್ಲಿರುವ ಶ್ರೀ ವೀರಾಂಜನೇಯದೇವಸ್ಥಾನದ ವಿಷಯ ಬೆಳಕಿಗೆ ಬಂದು ಈ ದೇವಸ್ಥಾನವನ್ನು ಈಗ ಪುನರ್ ಪ್ರತಿಷ್ಠಾಪನೆ ಕಾರ್ಯವನ್ನು ನಮ್ಮಉಗ್ರಾಣಿಮನೆಕುಟುಂಬಸ್ಥರು , ಊರ ಹತ್ತು ಸಮಸ್ತರು ಹಾಗೂ ಸದ್ಭಕ್ತರ ಸಹಕಾರದೊಂದಿಗೆ ಈ ದೇವಸ್ಥಾನವನ್ನು ಜೀರ್ಣೋದ್ದಾರಗೊಳಿಸಬೇಕೆಂದು ಸಂಕಲ್ಪಿಸಿದ್ದು ಇರುತ್ತದೆ.

ಮಾರ್ಚ 23 ರಂದು ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಲಿದೆ. ಮಾ. 24 ರಂದು ನಡೆಯುವಧಾರ್ಮಿಕ ಸಭೆಯಲ್ಲಿ ಕುಕ್ಕೆ ಸುಬ್ರಮಣ್ಯದ ಸ್ವಾಮೀಜಿ ಮದ್ವಾಚಾರ್ಯರು ಆಶೀರ್ವಚನ ನೀಡಲಿದ್ದಾರೆ. ಕಾರ್ಯಕ್ರಮದಅಧ್ಯಕ್ಷತೆಯನ್ನುಅರಣ್ಯ ಸಚಿವರಮಾನಾಥರೈವಹಿಸಲಿದ್ದು ಮುಖ್ಯ ಅತಿತಿಗಳಾಗಿ ಪ್ರಾಥಮಿಕ ಹಾಗೂ ಪೌಢ ಶಿಕ್ಷಣ ಸಚಿವಕಿಮ್ಮನೆರತ್ನಾಕರ, ಸಂಸದಅನಂತಕುಮಾರ ಹೆಗಡೆ,ಶಿವಮೊಗ್ಗ ಶಾಸಕ ಕೆ.ವಿ. ಪ್ರಸನ್ನಕುಮಾರ, ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆಕಾಗೇರಿ ,ಕಾರವಾರದ ಶಾಸಕ ಸತೀಶ ಸೈಲ್, ಭಟ್ಕಳದ ಮಾಜಿ ಶಾಸಕ ಜೆ.ಡಿ. ನಾಯ್ಕ ಮತ್ತಿತರಗಣ್ಯರು ಉಪಸ್ತಿತರಿರುವರು. ಮಾರ್ಚ 25 ರಂದು ನಡೆಯುವಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಬಂಟ್ವಾಳದ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಸಿರಸಿ ಸೋಂದಾಜೈನ ಮಠದ ಶ್ರೀ ಭಟ್ಟಾಕಳಂಕ ಭಟ್ಟಾಚಾರ್ಯವರಿಯ ಸ್ವಾಮೀಜಿ, ಕನಕಪುರದ ಓಂ ಶಾಂತಿಧಾಮದ ಶ್ರೀ ಬ್ರಹ್ಮದೇವ ಸ್ವಾಮೀಜಿ, ಪತಂಜಲಿ ಯೋಗಪೀಠದ ಶ್ರೀ ಬಾಬಾ ರಾಮದೇವ ,

   ರಾಮಲಿಂಗೇಶ್ವರ ಮಠದ ಶ್ರೀ ಕೆಂಚವೀರ ಸ್ವಾಮೀಜಿ, ಆಶೀರ್ವಚನ ನೀಡಲಿರುವರು. ಕಾರ್ಯಕ್ರಮದಅಧ್ಯಕ್ಷತೆಯನ್ನುಕೇಂದ್ರ ಕಾನೂನು ಸಚಿವ ಶ್ರೀ ಸದಾನಂದಗೌಡ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪ, ಮಜಿ ಸಚಿವ ಶಿವಾನಂದ ನಾಯ್ಕ, ಶಾಸಕ ಎಚ್.ಡಿ.ರೇವಣ್ಣ, ಭದ್ರಾವತಿ ಶಾಸಕ ಅಪ್ಪಾಜಿಎಂ.ಜೆ. ಬೈಂದೂರು ಶಾಸಕ ಗೋಪಾಲ ಪೂಜಾರಿ, ಸೊರಬ ಶಾಸಕ ಮಧು ಬಂಗಾರಪ್ಪ ಮತ್ತಿತರರು ಉಪಸ್ತಿತರಿರುವರು. ಮಾಚಧ 25 ರಂದು ವಿಧಾನ ಸಭಾಧ್ಯಕ್ಷ ಶ್ರೀ ಕಾಗೋಡುತಿಮ್ಮಪ್ಪ ಕೆಳದಿ ಸಂಸ್ಥಾನದ ಪಾಳೇಗಾರ ತಿಮ್ಮಣ್ಣ ನಾಯ್ಕ ನ ಪ್ರತಿಮೆ ಅನಾವರಣಗೊಳಿಸಲಿದ್ದು ಅಂದು ನಡೆಯುವಧಾರ್ಮಿಕ ಸಭೆಯಲ್ಲಿಉಜಿರೆ ಶ್ರೀರಾಮ ಕ್ಷೇತ್ರದ ಸ್ವಾಮೀಜಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀೀರ್ವಚನ ನೀಡಲಿದ್ದಾರೆ. ಕಾರ್ಯಕ್ರಮದಅಧ್ಯಕ್ಷತೆಯನ್ನು ವಿಧಾನಸಭಾಧ್ಯಕ್ಷಕಾಗೋಡುತಿಮ್ಮಪ್ಪ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಉ.ಕ ಜಿಲ್ಲಾಉಸ್ತುವಾರಿ ಮಂತ್ರಿಆರ್.ವಿ.ದೇಶಪಾಂಡೆ,  ಸಿಗಂದೂರು ಕ್ಷೇತ್ರದ ಧರ್ಮಧರ್ಶಿ ರಾಮಪ್ಪ, ಭಟ್ಕಳ ಶಾಸಕ ಮಂಕಾಳ ವ್ಯದ್ಯ, ಕುಮಟಾ ಶಾಸಕಿ ಶಾರದಾ ಶೆಟ್ಟಿ, , ಶಾಸಕರಾದ ಶ್ರೀನಿವಾಸ ಪೂಜಾರಿ, ಬಿ.ವೈ ರಾಘವೇಂದ್ರ, ವಸಂತ ಬಂಗೇರ, ಶಾರದಾ ನಾಯ್ಕ, ಪ್ರಸನ್ನಕುಮಾರ, ಕಾಸ್ಕಾಡ ಬ್ಯಾಂಕಉಪಾಧ್ಯಕ್ಷಈಶ್ವರ ನಾಯ್ಕಆರತಿಉದಯಕುಮಾರ ಉಪಸ್ಥಿತರಿರುವರು, ಪ್ರತಿನಿತ್ಯಅನ್ನಸಂತರ್ಪಣೆ ನಡೆಯಲಿದ್ದು ಈ ಎಲ್ಲಾಕಾರ್ಯಕ್ರಮದ ಭಕ್ತಾಧಿಗಳು ಆಗಮಿಸಿ ಸಹಕರಿಸಬೇಕೆಂದುಕೋರಿದರು. ಪತ್ರಿಕಾಗೋಷ್ಟಿಯಲ್ಲಿಅರ್ಭನ್ ಬ್ಯಾಂಕ ನಿರ್ದೇಶಕ ಶ್ರೀಧರ ನಾಯ್ಕ, ಭಟ್ಕಳ ಪಿ.ಎಲ್.ಡಿ. ಬ್ಯಾಂಕಅಧ್ಯಕ್ಷ ಸುನೀಲ್ ನಾಯ್ಕ, ಗೋವಿಂದ ನಾಯ್ಕ, ವೆಂಕಟೇಶ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News