ಭಟ್ಕಳ: ಮುಂಡಳಿಯಲ್ಲಿ ಜರಗಿದಯುವಜನ ಮೇಳ, ಯುವ ಸಬಲೀಕರಣಕ್ಕೆಒತ್ತು
ಭಟ್ಕಳ: ಜಿಲ್ಲಾ ಪಂಚಾಯತ್‌ಉತ್ತರಕನ್ನಡ, ಜಿಲ್ಲಾಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ತಾಲೂಕಾ ಪಂಚಾಯತ್, ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ, ತಾಲೂಕಾಯುವಒಕ್ಕೂಟ, ಗ್ರಾಮ ಪಂಚಾಯತ್ ಮುಂಡಳ್ಳಿ ಹಾಗೂ ಶ್ರೀ ಶಾರದಾಂಬಾ ಸೇವಾ ಟ್ರಸ್ಟ್ ಮುಂಡಳ್ಳಿ ರ ಸಂಯುಕ್ತಆಶ್ರಯಲ್ಲಿತಾಲುಕಾ ಮಟ್ಟದಯುವಜನ ಮೇಳ ಕಾರ್ಯಕ್ರಮವು ಭಟ್ಕಳದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಂಡಳ್ಳಿಯಲ್ಲಿ ಭಾನುವಾರದಂದು ನಡೆಯಿತು.
2015-16 ನೇ ಸಾಲಿನ ತಾಲುಕಾ ಮಟ್ಟದಯುವಜನ ಮೇಳವನ್ನು ಉದ್ಘಾಟಿಸಿದ ಶಾಸಕ ಮಂಕಾಳ ಎಸ್.ವೈದ್ಯ ಮಾತನಾಡಿಯಾವುದೇಒಂದುಊರಿನಅಭಿವೃದ್ಧಿಯಾಗಬೇಕಾದರೆ ಮುಖ್ಯವಾಗಿ ಆ ಊರಿನಯುವಜನತೆ ಮುಖ್ಯವಾಹಿನಿಗೆ ಬಂದು ಸಮಾಜದಲ್ಲಿ ನಡೆಯುವ ಸಂಗತಿಗಳ ಬಗ್ಗೆ ಗಮನ ನೀಡಬೇಕು. ಹಾಗು ಊರಿನಲ್ಲಿ ಶಿಕ್ಷಿತರ ಸಂಖ್ಯೆ ಜಾಸ್ತಿಯಾಗಬೇಕು ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಹಾಗು ಊರಿನಲ್ಲಿನಯುವಜನಾಂಗದ ಸಂಘ ಸಂಸ್ಥೆಗಳು ಸಹ ಸಹಾಯ ಹಸ್ತನೀಡುವಕಾರ್ಯ ಮಾಡಬೇಕು. ಹಾಗು ಸಮಾಜದಲ್ಲಿನಏನಾದರೂ ಕಾಮಗಾರಿಗಳಾಗುತ್ತಿದ್ದರೆ ಆ ಭಾಗಕ್ಕೆ ಹೋಗಿ ಕಾಮಗಾರಿಯಗುಣಮಟ್ಟವನ್ನು ಪರಿಶೀಲೀಸುವ ಕೆಲಸದಲ್ಲಿಕಾರ್ಯಪ್ರವೃತ್ತರಾಗಬೇಕು.ಎಂದರು.
ಈ ಸಂದರ್ಭದಲ್ಲಿಯುವ ಸಬಲೀಕರಣ ಮತ್ತುಕ್ರೀಡಾಇಲಾಖೆಯ ಸಹಾಯಕ ನಿರ್ದೇಶಕಿಗಾಯತ್ರಿ ಜಿ. ಮಾತನಾಡಿಮಕ್ಕಳಿಗೆ ಪಾಲಕರು ಸಂಪತ್ತು ಮಾಡಿಇಡುವ ಬದಲು ಮಕ್ಕಳನ್ನು ದೇಶದ ಸಂಪತ್ತನ್ನಾಗಿ ಮಾಡುವ ಕೆಲಸ ಮಾಡಬೇಕು. ಈಗಿನ ಯುವ ಪೀಳಿಗೆ ಯುಂಬಾಉತ್ಸಾಹ ಹೊಮದಿದ್ದುಅವರಿಗೆ ಮಾರ್ಗದರ್ಶನದಕೊರತೆಎದ್ದುಕಾಣುತ್ತಿದೆ.ದೇಶದ ಕಲೆ ಸಾಹಿತ್ಯ, ಸಂಸ್ಕೃತಿ ಹಾಗು ಇನ್ನಿತರಕ್ಷೇತ್ರದಲ್ಲಿಅವರ ಪ್ರತಿಭೆಯನ್ನು ಪ್ರದರ್ಶಿಸಲು ಇಂತಹಯುವಜನ ಮೇಳದ ಅವಶ್ಯಕತೆಇದೆಎಂದರು.
ಸಭಾಕಾರ್ಯಕ್ರಮದ ನಂತರಗ್ರಾಮೀಣ ಸೊಗಡಿನಕಾರ್ಯಕ್ರಮವಾದ ಗೀ ಗೀ ಪದ, ಡೊಳ್ಳು ಕುಣಿತ, ಯಕ್ಷಗಾನ, ಜಾನಪದ ನೃತ್ಯ ಹಾಗು ಇನ್ನಿತರ ಸ್ಫರ್ಧೆಗಳು ತೀರ್ಪುಗಾರರ ಸಮ್ಮುಖದಲ್ಲಿ ನಡೆಯಿತು.