×
Ad

ಉಳ್ಳಾಲ: ನರ್ಸಿಂಗ್ ಕೆಲಸದಷ್ಟು ಶ್ರೇಷ್ಟ ಕಾರ್ಯ ಬೇರೊಂದಿಲ್ಲ - ಪ್ರೊ. ಆಲೀಸ್ ಡೇನಿಯಲ್

Update: 2016-03-13 19:46 IST

    ಉಳ್ಳಾಲ: ವೈದ್ಯಕೀಯ ಕ್ಷೇತ್ರದಲ್ಲಿ ಕೊನೆಯ ಆಯ್ಕೆ ನರ್ಸಿಂಗ್ ಪದವಿಯನ್ನು ಆಯ್ಕೆ ಮಾಡಲಾಗುತ್ತಿದೆ. ಆದರೆ ನರ್ಸಿಂಗ್ ಕೆಲಸದಷ್ಟು ಶ್ರೇಷ್ಟ ಕಾರ್ಯ ಬೇರೊಂದಿಲ್ಲ. ಅಸಹಾಯಕರ ಬಾಳಿಗೆ ನೆರವಾಗುವ ವೃತ್ತಿ ನರ್ಸಿಂಗ್ ಮಾತ್ರವಾಗಿದೆ ಎಂದು ಕಾಸರಗೋಡು ಮಾಲೀಕ್ ದೀನಾರ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಆಲೀಸ್ ಡೇನಿಯಲ್ ಅಭಿಪ್ರಾಯಪಟ್ಟರು.

ಅವರು ದೇರಳಕಟ್ಟೆ ನಿಟ್ಟೆ ವಿಶ್ವವಿದ್ಯಾನಿಲಯದ ಕ್ಷೇಮ ಆಡಿಟೋರಿಯಂನಲ್ಲಿ ಶನಿವಾರ ಜರಗಿದ ನಿಟ್ಟೆ ಉಷಾ ನರ್ಸಿಂಗ್ ವಿದ್ಯಾ ಸಂಸ್ಥೆಗಳ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

          ನರ್ಸಿಂಗ್ ಪದವಿ ಪಡೆದವರಲ್ಲಿ ರಕ್ಷಣೆ ಅನ್ನುವುದು ರಕ್ತಗತವಾಗಿರಬೇಕು. ಯಾವುದೇ ರೋಗಿಯನ್ನು ತನ್ನ ಸಂಬಂಧಿ ಅಥವಾ ಹೆತ್ತವರ ಸಮಾನವಾಗಿ ಅರಿತು ಕಾರ್ಯ ನಿರ್ವಹಿಸಿದಾಗ ವೃತ್ತಿಯಲ್ಲಿ ಯಶಸ್ಸು ಕಾಣಬಹುದು. ಅಮೆರಿಕಾದಲ್ಲಿ ದಾದಿಯರೇ ಕ್ಲಿನಿಕ್ ಇಟ್ಟುಕೊಂಡು ರೋಗಿಗಳ ಶುಶ್ರೂಷೆಯಲ್ಲಿ ಸ್ವತಂತ್ರ್ಯವಾಗಿ ತೊಡಗಿಕೊಳ್ಳುತ್ತಾರೆ. ಭಾರತದಲ್ಲಿಯೂ ಅಂತಹ ನೀತಿ ಜಾರಿಯಾದಲ್ಲಿ ವೈದ್ಯರ ಅನುಭವಕ್ಕಿಂತ ಹೆಚ್ಚಿನ ಅನುಭವ ಇರುವ ದಾದಿಯರು ರೋಗಿಗಳಿಗೆ ಉತ್ತಮ ಸೇವೆಯನ್ನು ಒದಗಿಸಬಹುದಾಗಿದೆ. ದಾದಿಯರು ಮಾಡುವ ಸೇವೆಯಲ್ಲಿ ಗುಣಮಟ್ಟ ಕಾಯ್ದಿರಿಸುವಿಕೆ , ಪ್ರಯತ್ನ ಮತ್ತು ಸಮರ್ಪಣಾ ಭಾವ ಹೊಂದಬೇಕಿದೆ. ಸರಕಾರಿ ಆಸ್ಪತ್ರೆಗಳು ಅವ್ಯವಸ್ಥೆಗಳ ಆಗರವಾಗಿದೆ. ಸರಕಾರಿ ಹುದ್ದೆಗಳು ಖಾಲಿಯಿದ್ದರೂ ಅದನ್ನು ಭರ್ತಿ ಮಾಡುವ ಕೆಲಸ ಆಗದೇ ಇರುವುದರಿಂದ ಬಡ ಜನ ಅವ್ಯವಸ್ಥೆಯಿಂದ ಚಿಕಿತ್ಸೆ ಪಡೆಯಬೇಕಾದ ಅನಿವಾರ್ಯತೆ ದೇಶದಲ್ಲಿದೆ ಎಂದ ಅವರು ಸರಕಾರಿ ಇಲ್ಲದಿದ್ದರೂ ಖಾಸಗಿ ಉದ್ಯೋಗ ಹಲವಿದ್ದರೂ ಅದರಲ್ಲಿ ನಾಯಕತ್ವ ಪಡೆದುಕೊಳ್ಳುವವರು ಯಾರೂ ಇಲ್ಲ ಎಂದ ಅವರು ಅಭಿವೃದ್ಧಿ ಹಾದಿಯಲ್ಲಿ ನಿಟ್ಟೆ ವಿಶ್ವವಿದ್ಯಾನಿಲಯ ಬೃಹತ್ ಆಲದ ಮರದಂತೆ ಎದ್ದು ನಿಂತಿದೆ. ಬಡ ರೋಗಿಗಳು, ಅಶಕ್ತರ ಬಾಳಿಗೆ ಸಹಕಾರ ನೀಡುತ್ತಿರುವ ಕಾರ್ಯ ಶ್ಲಾಘನೀಯ. ಕ್ಷೇಮ ಆಸ್ಪತ್ರೆ ಇನ್ನಷ್ಟು ಜನರಿಗೆ ನೆರಳು ಮತ್ತು ಆಶ್ರಯವಾಗಬೇಕಿದೆ ಎಂದರು. ನಿಟ್ಟೆ ವಿ.ವಿ.ಯ ಆಡಳಿತಾಧಿಕಾರಿ ವಿಶಾಲ್ ಹೆಗ್ಡೆ ಮಾತನಾಡಿ ಕಾಲೇಜು ದಿನಗಳಲ್ಲಿ ಸಿಗುವ ಸಂಬಂಧಗಳು ಎಂದಿಗೂ ಶಾಶ್ವತ. ಕಲಿಕೆಯ ಕೊನೆಯ ಘಟ್ಟಗಳನ್ನು ವಿದ್ಯಾರ್ಥಿಗಳು ಸವಿಯಾಗಿ ಅನುಭವಿಸಬೇಕು. ದಾದಿಯರ ಕಾರ್ಯ ಶ್ರೇಷ್ಟವಾದುದು. ವರ್ತನೆ, ಸಾಮರ್ಥ್ಯ ಮತ್ತು ಉತ್ತಮ ಸಂವಹನದಿಂದ ದಾದಿಯರು ರೋಗಿಗಳ ಮನಸ್ಸನ್ನು ಗೆಲ್ಲಬಹುದು ಎಂದರು.

    ಈ ಸಂದರ್ಭ ಜಿಎನ್ ಎಂ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ನೀತಾ ಕಾಮತ್ ಮುಖ್ಯ ಅತಿಥಿಯಾಗಿದ್ದರು. ಉಪಪ್ರಾಂಶುಪಾಲೆ ಸಬಿತಾ ನಾಯಕ್, ಪ್ರಾಧ್ಯಾಪಕರಾದ ಟಿಮಿ ಥಾಮಸ್, ಅನ್ಸಿಲ್ಲಾ ರೋಷ್ ಉಪಸ್ಥಿತರಿದ್ದರು. ಈ ವೇಳೆ ನರ್ಸಿಂಗ್ ವಿದ್ಯಾರ್ಥಿಗಳ ವಾರ್ಷಿಕ ಮ್ಯಾಗಝೀನ್ ದೀಕ್ಷಾ-2016 ಅನ್ನು ಬಿಡುಗಡೆಗೊಳಿಸಲಾಯಿತು.

  ನಿಟ್ಟೆಉಷಾ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ. ಫಾತಿಮಾ ಡಿಸಿಲ್ವಾ ಸ್ವಾಗತಿಸಿದರು. ಮೇಘನಾ ಕಾರ್ಯಕ್ರಮ ನಿರ್ವಹಿಸಿದರು. ಕ್ಲೇರಾ ಪಿಂಟೋ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News