×
Ad

ಸುಳ್ಯ: ಲಯನ್ಸ್ ಕ್ಲಬ್‌ನ 9ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ

Update: 2016-03-13 20:59 IST

ಸುಳ್ಯ: ಲಯನ್ಸ್ ಜಿಲ್ಲಾ ಗವರ್ನರ್ ಕವಿತಾ ಶಾಸ್ತ್ರಿ ಸುಳ್ಯ ಲಯನ್ಸ್ ಕ್ಲಬ್‌ಗೆ ಭಾನುವಾರ ಅಧಿಕೃತ ಭೇಟಿ ನೀಡಿದ್ದು, ಈ ಸಂದರ್ಭ ಕ್ಲಬ್ ವತಿಯಿಂದ ಸುಮಾರು 9 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಅನೇಕ ಕೊಡುಗೆಗಳನ್ನು ಲೋಕಾರ್ಪಣೆಗೊಳಿಸಲಾಯಿತು.
 
 ಉಬರಡ್ಕ ಗ್ರಾಮದ ಬಳ್ಳಡ್ಕದಲ್ಲಿ ಸೂಂತೋಡು ಸೂರಯ್ಯ ಗೌಡ ದಂಪತಿ ನಿರ್ಮಿಸಿ ಲಯನ್ಸ್ ಮುಖಾಂತರ ಸಮಾಜಕ್ಕೆ ನೀಡಲಿರುವ ಮಹಿಳಾ ಬಸ್ ತಂಗುದಾಣದ ಉದ್ಘಾಟನೆ, ಪೇರಾಲಿನ ಅಡ್ಡಂತಡ್ಕ-ಆಲಂಕಳ್ಯದಲ್ಲಿ ಅಡ್ಡಂತಡ್ಕ ದೇರಣ್ಣ ಗೌಡ ದಂಪತಿ 60 ಸಾವಿರ ರೂ. ವೆಚ್ಚದಲ್ಲಿ ನಿರ್ಮಿಸಿ ಸಾರ್ವಜನಿಕ ಸೇವೆಗೆ ನೀಡಲಿರುವ ಬಸ್ ತಂಗುದಾಣದ ಉದ್ಘಾಟಿನೆ, ಬೊಳುಬೈಲಿನಲ್ಲಿ ನಿರ್ಮಿಸಿತ ಬಡ ಮಹಿಳೆಗೆ 3ಲಕ್ಷ ರೂ. ವೆಚ್ಚದಲ್ಲಿ ಲಯನ್ಸ್ ಸದಸ್ಯರ ಸಹಕಾರದಿಂದ ನಿರ್ಮಿಸಿದ ಮನೆ ಉದ್ಘಾಟನೆ, ಲಯನ್ಸ್ ವತಿಯಿಂದ 2.10 ಲಕ್ಷ ರೂ. ವೆಚ್ಚದಲ್ಲಿ ನವೀಕರಣಗೊಂಡ ನೇತಾಜಿ ಬಾಲವನ , ಸುಳ್ಯ ಸರಕಾರಿ ಆಸ್ಪತ್ರೆ ಬಳಿ ಇರುವ ಆಟೋ ನಿಲ್ದಾಣಕ್ಕೆ 2.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಮೇಲ್ಛಾವಣಿಯ ಉದ್ಘಾಟನೆಯನ್ನು ಲಯನ್ಸ್ ಜಿಲ್ಲಾ ಗವರ್ನರ್ ಕವಿತಾ ಶಾಸ್ತ್ರಿ ನೆರವೇರಿಸಿದರು. ಲಯನ್ಸ್ ಅಧ್ಯಕ್ಷ ಜಯರಾಮ ದೇರಪ್ಪಜ್ಜನಮನೆ ಸ್ವಾಗತಿಸಿ, ನಗರಕ್ಕೆ ಉಪಯುಕ್ತವಾದ ಕೊಡುಗೆಗಳನ್ನು ನೀಡಬೇಕೆನ್ನುವ ಸದುದ್ದೇಶದಿಂದ ಬೃಹತ್ ಮೊತ್ತದ ಕಾಮಗಾರಿಗಳನ್ನು ಹಮ್ಮಿಕೊಂಡಿದ್ದೇವೆ ಎಂದರು. ಸುಳ್ಯ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಮಾತನಾಡಿ ಸುಳ್ಯದ ಅಭಿವೃದ್ಧಿಗೆ ಕೈಜೋಡಿಸಿದ ಲಯನ್ಸ್ ಕ್ಲಬ್‌ನ್ನು ಶ್ಲಾಘಿಸಿದರು. ಪಂಚಾಯಿತಿ ಸದಸ್ಯರಾದ ಕೆ.ಎಂ.ಮುಸ್ತಾಫ, ಪ್ರೇಮಾ ಟೀಚರ್, ಕ.ಸಾ.ಪ. ಮಾಜಿ ಅಧ್ಯಕ್ಷೆ ಎಂ.ಮೀನಾಕ್ಷಿ ಗೌಡ, ಲಯನ್ಸ್ ಕ್ಯಾಬಿನೆಟ್ ಕಾರ್ಯದರ್ಶಿ ವಾಣಿ ಆಳ್ವ, ಲಯನ್ಸ್ ವಲಯಾಧ್ಯಕ್ಷ ಜಾಕೆ ಮಾಧವ ಗೌಡ, ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಎಂ.ಬಿ.ಸದಾಶಿವ, ಕಾರ್ಯದರ್ಶಿ ಪ್ರಸಾದ್ ಎಂ.ಎಸ್., ಖಜಾಂಜಿ ಡಿ.ಟಿ.ದಯಾನಂದ, ಲಯನೆಸ್ ಅಧ್ಯಕ್ಷೆ ಪುಷ್ಪಾ ವಿಶ್ವನಾಥ್, ಕಾರ್ಯದರ್ಶಿ ರಾಧಾಮಣಿ, ಖಜಾಂಜಿ ರಮಿತಾ ಜಯರಾಮ, ಲಯನ್ಸ್ ಮತ್ತು ಲಯನೆಸ್ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News