ಮೂಡುಬಿದಿರೆ: ಬ್ಯಾನರ್‌ಗಳನ್ನು ಹರಿದು ಅಶಾಂತಿ ಸೃಷ್ಟಿಸಲು ಹುನ್ನಾರ
Update: 2016-03-13 21:30 IST
ಮೂಡುಬಿದಿರೆ: ಪುತ್ತಿಗೆ ಜಿಲ್ಲಾ ಪಂಚಾಯತ್ ಸದಸ್ಯ ಸುಚರಿತ ಶೆಟ್ಟಿ ಅವರನ್ನು ಅಭಿನಂದಿಸಿ ಕೊಡ್ಯಡ್ಕ ರಸ್ತೆ ಬದಿಯಲ್ಲಿ ಹಾಕಲಾದ ಹಲವು ಬ್ಯಾನರ್‌ಗಳನ್ನು ಹರಿದು ಹಾಕಿದ ಬಗ್ಗೆ ವರದಿಯಾಗಿದೆ.
ಜಿಲ್ಲಾ ಪಂಚಾಂಯತ್ ಚುನಾವಣೆಯಲ್ಲಿ ಜಯಗಳಿಸಿದ ಸುಚರಿತ ಶೆಟ್ಟಿಯನ್ನು ಅಭಿನಂದಿಸಿ ಅವರ ಸ್ನೇಹಿತರು ಪುತ್ತಿಗೆ ದೇವಸ್ಥಾನಕ್ಕೆ ಹೋಗುವ ದ್ವಾರದಿಂದ ಸಚ್ಚೇರಿಪೇಟೆವರೆಗೆ ರಸ್ತೆ ಬದಿಯಲ್ಲಿ ಸುಮಾರು 20 ಬ್ಯಾನರ್‌ಗಳನ್ನು ಅಳವಡಿಸಿದ್ದರು. ಶನಿವಾರ ರಾತ್ರಿ ಯಾರೊ ಕಿಡಿಗೇಡಿಗಳು ಈ ಎಲ್ಲ ಬ್ಯಾನರ್‌ಗಳನ್ನು ಹರಿದು ಅಶಾಂತಿ ಸೃಷ್ಟಿಸಲು ಹುನ್ನಾರ ನಡೆಸಿದ್ದಾರೆನ್ನಲಾಗಿದೆ. ಈ ಬಗ್ಗೆ ಮೂಡುಬಿದಿರೆ ಪೊಲೀಸ್‌ಠಾಣೆಗೆ ದೂರು ನೀಡಲಾಗಿದೆ.