×
Ad

ಮೊರಾದಾಬಾದ್‌ನಲ್ಲಿ ವೇದಿಕೆ ಕುಸಿತ,ವರುಣ್ ಗಾಂಧಿ ಪಾರು

Update: 2016-03-13 21:42 IST

ಮೊರಾದಾಬಾದ್,ಮಾ.13: ರವಿವಾರ ಇಲ್ಲಿ ತನ್ನ ಬೆಂಬಲಿಗರಿಂದ ಕಿಕ್ಕಿರಿದು ತುಂಬಿದ್ದ ತಾತ್ಕಾಲಿಕ ವೇದಿಕೆಯು ಕುಸಿದು ಬಿದ್ದು ಸಂಭವಿಸಿದ ಅವಘಡದಲ್ಲಿ ಸಂಸದ ವರುಣ ಗಾಂಧಿ ಅವರು ಗಾಯಗೊಳ್ಳದೆ ಪಾರಾಗಿದ್ದಾರೆ.
ಛಾಜ್ಲೆಟ್‌ನಲ್ಲಿ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ವರುಣ್ ಮೊರಾದಾಬಾದ್-ಹರಿದ್ವಾರ ಹೆದ್ದಾರಿಯಲ್ಲಿನ ಪೀಲಿ ಕೋಠಿ ಚೌಕಿಯಲ್ಲಿ ಸ್ವಲ್ಪ ಕಾಲ ತಂಗಿದ್ದರು. ಸ್ಥಳೀಯ ಸಂಸದ ಸರ್ವೇಶ ಕುಮಾರ ಅವರು ವರುಣ್‌ಗೆ ಸ್ವಾಗತ ಸಮಾರಂಭವನ್ನು ಏರ್ಪಡಿಸಿದ್ದರು.
ವೇದಿಕೆಯು ಕುಸಿದು ಬಿದ್ದಾಗ ವರುಣ್ ಜೊತೆ ಕುಮಾರ ಮತ್ತು ಮೊರಾದಾಬಾದ್ ಮೇಯರ ವೀಣಾ ಅಗರವಾಲ್ ಅವರೂ ಇದ್ದರು.
ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News