×
Ad

ಕೇಂದ್ರೀಯ ಪೊಲೀಸ್ ಪಡೆಗಳಲ್ಲಿ ಮಹಿಳೆಯರು ಹೋರಾಟ ಅಧಿಕಾರಿಗಳಾಗಲು ಸರಕಾರದ ಒಪ್ಪಿಗೆ

Update: 2016-03-13 21:47 IST

ಹೊಸದಿಲ್ಲಿ,ಮಾ.13: ಅರೆ ಸೇನಾ ಪಡೆಗಳಲ್ಲಿ ಕಾನ್‌ಸ್ಟೇಬಲ್ ಹುದ್ದೆಗಳಿಗೆ ಮಹಿಳೆಯರಿಗೆ ಮೀಸಲಾತಿಯನ್ನು ಘೋಷಿಸಿದ್ದ ಸರಕಾರವು ಇದೀಗ ಎಲ್ಲ ಐದು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಹೋರಾಟ ಪಾತ್ರಗಳಲ್ಲಿ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಲು ಅವರಿಗೆ ಅವಕಾಶವನ್ನು ಕಲ್ಪಿಸಿದೆ.

ಗೃಹ ಸಚಿವಾಲಯವು ಗಡಿ ಕಾವಲು ಪಡೆ ಐಟಿಬಿಪಿಯಲ್ಲಿ ನೇರ ಪ್ರವೇಶ ಅಧಿಕಾರಿಗಳಾಗಿ ಸೇರ್ಪಡೆಗೊಳ್ಳಲು ಅರ್ಜಿ ಸಲ್ಲಿಸಲು ಮಹಿಳೆಯರಿಗೆ ಅವಕಾಶ ಕಲ್ಪಿಸಿ ಇತ್ತೀಚಿಗೆ ಹೊಸ ನಿಯಮಗಳನ್ನು ಪ್ರಕಟಿಸಿದೆ. ಕಷ್ಟಕರವಾದ ಭಾರತ-ಚೀನಾ ಗಡಿಯನ್ನು ಕಾಯುವ ತನ್ನ ಪ್ರಮುಖ ಕಾರ್ಯದಿಂದಾಗಿ ಐಟಿಬಿಪಿ ಈವರೆಗೂ ಮಹಿಳೆಯರು ಉಸ್ತುವಾರಿ ಹೋರಾಟ ಪಾತ್ರಗಳಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ನೀಡದಿದ್ದ ಏಕೈಕ ಅರೆ ಸೇನಾ ಪಡೆಯಾಗಿತ್ತು.

ಈ ಐದು ಪಡೆಗಳ ಪೈಕಿ ಸಿಎಪಿಎಫ್‌ಗಳು,ಸಿಆರ್‌ಪಿಎಫ್‌ಮತ್ತು ಸಿಐಎಸ್‌ಎಫ್ ಬಹು ಹಿಂದಿನಿಂದಲೇ ಯುಪಿಎಸ್‌ಸಿ ಮೂಲಕ ನೇರ ಪ್ರವೇಶ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಹಿಳೆಯರಿಗೆ ಅವಕಾಶ ನೀಡಿವೆ.

 ಇತರ ಎರಡು ಪಡೆಗಳಾದ ಬಿಎಸ್‌ಎಫ್ ಮತ್ತು ಎಸ್‌ಎಸ್‌ಬಿಗಳು ಮಹಿಳಾ ಅಧಿಕಾರಿಗಳನ್ನು ಸೇರ್ಪಡೆ ಮಾಡಿಕೊಳ್ಳಲು ಅನುಕ್ರಮವಾಗಿ 2013 ಮತ್ತು 2014ರಲ್ಲಿ ಅವಕಾಶ ನೀಡಲಾಗಿತ್ತು. ಇದೀಗ ಐಟಿಬಿಪಿಯಲ್ಲಿಯೂ ಮಹಿಳಾ ಅಧಿಕಾರಿಗಳ ಸೇರ್ಪಡೆಗೆ ಅನುಮತಿ ನೀಡುವ ಮೂಲಕ ಈ ಪಡೆಗಳಲ್ಲಿ ಹೋರಾಟದ ಪಾತ್ರಗಳನ್ನು ನಿರ್ವಹಿಸಲು ಬಯಸುವ ಮಹಿಳೆಯರ ಮೇಲಿನ ಎಲ್ಲ ನಿರ್ಬಂಧಗಳು ತೆರವುಗೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News