ಅಧಿಕಾರ ವಿಕೇಂದ್ರಿಕರಣ ಮಾಡಿರುವ ಸರಕಾರವಿದ್ದರೇ ಅದು ಕಾಂಗ್ರೆಸ್ ಮಾತ್ರ - ಟಿಆರ್ ಸುದರ್ಶನ್
ಉಳ್ಳಾಲ: ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭ ಅಧಿಕಾರ ವಿಕೇಂದ್ರಿಕರಣ ಮಾಡಿರುವ ಸರಕಾರವಿದ್ದರೇ ಅದು ಕಾಂಗ್ರೆಸ್ ಮಾತ್ರ ಆಗಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಉತ್ತಮ ಆಡಳಿತವನ್ನು ಜನಸಾಮಾನ್ಯರಿಗೆ ಪಡೆಯಲು ಸಾಧ್ಯವಾಗಿದೆ.ಇದೇ ವಿಶ್ವಾಸದಿಂದ ಮತದಾರರು ಕಾಂಗ್ರೆಸ್ ಪರ ತೀರ್ಪು ನೀಡಿದ್ದಾರೆ ಎಂದು ವಿಧಾನ ಪರಿಷತ್‌ನ ಮಾಜಿ ಸಭಾಪತಿ ಟಿಆರ್ ಸುದರ್ಶನ್ ಹೇಳಿದರು
ಅವರು ಭಾನುವಾರ ದೇರಳಕಟ್ಟೆ ಮೈದಾನದಲ್ಲಿ ಉಳ್ಳಾಲ ಬ್ಲಾಲ್ ಕಾಂಗ್ರೆಸ್, ಯುವ ಕಾಂಗ್ರೆಸ್ ಮತ್ತು ಮಹಿಳಾ ಕಾಂಗ್ರಸ್ ಉಳ್ಳಾಲ ಘಟಕ ಇದರ ಆಶ್ರಯದಲ್ಲಿ ನಡೆದ ಪಕ್ಷದ ಕಾರ್ಯಕರ್ತರಿಗೆ ಮತ್ತು ಮತದಾರ ಬಾಂಧವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅಭಿವೃದ್ಧಿಗೆ ಹಲವು ಯೋಜನೆಗಳು ಮತ್ತು ಅದರ ವೆಚ್ಛಕ್ಕೆ ಹಣಕಾಸಿನ ವ್ಯವಸ್ಥೆಯನ್ನು ಕೂಡಾ ಕಾಂಗ್ರೆಸ್ ಮಾಡಿಕೊಂಡು ಮಾಡಿದೆ. ಇನ್ನು ಮುಂದೆಯೂ ಮತದಾರರನ್ನು ಕಡೆಗಣನೆ ಮಾಡದೆ ಮತದಾರರ ಪರ ಸೇವೆ ಮಾಡಲಿದೆ ಎಂದರು. ಮತದಾರರನ್ನು ದಿಕ್ಕು ತಪ್ಪಿಸುವಂತಹ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ. ಹೈದರಾಬಾದ್‌ನ ವಿವಿಯಲ್ಲಿ ನಡೆದ ಘಟನೆಯ ಬಗ್ಗೆ ಬಿಜೆಪಿ ಸರಕಾರ ಚರ್ಚೆ ಮಾಡಿಲ್ಲ. ನೆಹರೂರವರನ್ನು ತೇಜೋವಧೆ ಮಾಡುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ವಿಧಾನ ಪರಿಷತ್ ಸದಸ್ಯ ಐವನ್‌ಡಿ ಸೋಜ ಮಾತನಾಡಿ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ಈ ಬಾರಿಯ ಜಿ.ಪಂ. ತಾ.ಪಂ. ಚುನಾವಣೆಯಲ್ಲಿ ಅಂತರ ಬಹಳಷ್ಟು ಕಡಿಮೆ ಇದೆ. ಮಂಗಳೂರು ಕ್ಷೇತ್ರದಲ್ಲಿ ಅತ್ಯಧಿಕ ಸ್ಥಾನ ಗಳಿಸಲು ಕಾಂಗ್ರೆಸ್ ಯಶಸ್ವಿಯಾಗಿದೆ. ಅಭಿವೃದ್ಧಿ ಕಾರ್ಯಕ್ರಮಗಳು ಕಾಂಗ್ರೆಸ್ ಪಕ್ಷದ ಯೊಜನೆಗಳಲ್ಲಿ ಒಂದಾಗಿದೆ.ಇದನ್ನು ಈಡೇರಿಸುವ ಕೆಲಸ ಕಾಂಗ್ರೆಸ್ ಮಾಡಲಿದೆ. ಪಕ್ಷದ ಗೆಲುವಿಗೆ ಕಾರ್ಯಕರ್ತರ ಮತದಾನ ಮಾಡಿ ಕಾಂಗ್ರೆಸ್‌ನ್ನು ಗೆಲ್ಲಿಸಿದ ಮತದಾರರ ಸಹಕಾರ ಅಭಿನಂದನಾರ್ಹ ಎಂದರು. ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ಈಶ್ವರ್ ಉಳ್ಳಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಚಿವ ಯು.ಟಿ.ಖಾದರ್ ಕ್ಷೇತ್ರದ ಸಾಧನೆ ಮತ್ತು ಕ್ಷೇತ್ರದ ಪಕ್ಷದ ಕಾರ್ಯಕರ್ತರ ಮತ್ತು ಮತದಾರರ ಸೇವೆಯನ್ನು ವಿವರಿಸಿದರು.
ಸಚಿವ ಯು.ಟಿ ಖಾದರ್ ತಾ.ಪಂ ಜಿ.ಪಂ ವಿಜೇತ ಅಭ್ಯರ್ಥಿಗಳನ್ನು ಅಭಿನಂದಿಸಿದರು.
ಮೂಡಾ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಕಣಚೂರು ಮೋನು, ಶ್ರೀನಿವಾಸ ಶೆಟ್ಟಿ, ಟಿ.ಎಸ್. ಅಬ್ದುಲ್ಲ, ಉಳ್ಳಾಲ ನಗರ ಸಭೆಯ ಅಧ್ಯಕ್ಷ ಹುಸೈನ್ ಕುಂಞಿಮೋನು, ಕಾಂಗ್ರೆಸ್ ಮುಖಂಡ ಸುದರ್ಶನ್ ಶೆಟ್ಟಿ, ಯೂತ್ ಕಾಂಗ್ರೆಸ್‌ನ ನಝರ್ ಶಾ ಪಟ್ಟೋರಿ, ಉಳ್ಳಾಲ ನಗರ ಸಭೆಯ ಸದಸ್ಯ ದಿನೇಶ್ ರೈ ಕುರ್ನಾಡು ಜಿ.ಪಂ ಸದಸ್ಯ ಮಮತಾಗಟ್ಟಿ, ಪಾವೂರು ತಾ.ಪಂ. ಸದಸ್ಯ ಮಹಮ್ಮದ್ ಮೋನು, ಮಾಜಿ ತಾ.ಪಂ. ಸದಸ್ಯ ಮುಸ್ತಪಾ, ಕೊಣಾಜೆ ಜಿ.ಪಂ. ಸದಸ್ಯ ರಶೀದಾ ಬಾನು, ಬೆಳ್ಮ ಗ್ರಾ.ಪಂ. ಉಪಾಧ್ಯಕ್ಷ ಸತ್ತಾರ್, ಸದಸ್ಯ ಅಬ್ದುಲ್ ರಝಾಕ್ ಕನೆಕೆರೆ, ಕಬೀರ್.ಡಿ, ತಾ.ಪಂ. ಸದಸ್ಯರಾದ ಹೈದರ್ ಕೈರಂಗಳ, ಚಂದ್ರಹಾಸ್ ಕರ್ಕೇರ, ಸುರೇಖ, ಡಿ ಆರ್ ಸುದರ್ಶನ್, ಪದ್ಮಾವತಿ ಪೂಜಾರಿ, ಅಬ್ದುಲ್ ಜಬ್ಬಾರ್, ವಿಲ್ಮಾ ಅಲ್ಫ್ರೆಡ್ ಸೋಜ, ಕಿನ್ಯ ಗ್ರಾ.ಪಂ ಸದಸ್ಯ ಹಮೀದ್ ಕಿನ್ಯ, ಅಲ್ಪ ಸಂಖ್ಯಾತ ಘಟಕ ಪ್ರ.ಕಾರ್ಯದರ್ಶಿ ಶರೀಫ್ ದೇರಳಕಟ್ಟೆ ಮುಂತಾದವರು ಈ ಸಂದರ್ಭ ಉಪಸ್ಥಿರಿದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಸದಸ್ಯ ರಹ್‌ಮಾನ್ ಕೊಣಾಜೆ ಅತಿಥಿಗಳನ್ನು ಸ್ವಾಗತಿಸಿದರು. ಇರಾ ಗ್ರಾ.ಪಂ ಅಧ್ಯಕ್ಷ ರಝಾಕ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು. ಬೆಳ್ಮ ಗ್ರಾ.ಪಂ ಮಾಜಿ ಅಧ್ಯಕ್ಷ ಯೂಸುಫ್ ಬಾವ ವಂದಿಸಿದರು.