ಉಳ್ಳಾಲ: ಕಟ್ಟತ್ತಿಲ್ಲ ಉರೂಸ್ ಮುಭಾರಕ್ ಸಮಾರೋಪ ಕಾರ್ಯಕ್ರಮ
ಉಳ್ಳಾಲ: ದರ್ಗಾಗಳು ಎಲ್ಲಾ ರಾಜ್ಯಗಳಲ್ಲಿ ಇವೆ. ದರ್ಗಾ ಯಾರದ್ದು ಎನ್ನುವ ಬಗ್ಗೆ ಸಮರ್ಪಕ ಮಾಹಿತಿ ಇಲ್ಲದ ದರ್ಗಾಗಳು ಇವೆ. ಆದರೆ ಮಾಹಿತಿ ತಿಳಿಯದ ಕಾರಣದಿಂದ ದರ್ಗಾವನ್ನು ತಳ್ಳಿ ಹಾಕಲು ಸಾಧ್ಯವಿಲ್ಲ ಎಂದು ಉಜಿರೆ ತಂಙಳ್ ಹೇಳಿದರು.
ಅವರು ಕಟ್ಟತ್ತಿಲ್ಲ ಉರೂಸ್ ಮುಭಾರಕ್ ಕಾರ್ಯಕ್ರಮದ ಪ್ರಯುಕ್ತ ಹಮ್ಮಿಕೊಂಡ ಧಾಮಿಕ ಉಪನ್ಯಾಸದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದರು.
ಔಲಿಯಾಗಳಿಗೆ ಪವಾಢವನ್ನು ಅಲ್ಲಾಹನು ಕರುಣಿಸಿದ್ದಾನೆ. ಪವಾಢದ ಶಕ್ತಿಯಿಂದ ಜನ ಸಾಮಾನ್ಯರ ಕೆಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಆದರೆ ಅಲ್ಲಾಹನಿಗೆ ಪ್ರಾರ್ಥನೆ ಮಾಡುವುದನ್ನು ಮರೆಯಬಾರದು ಸಮಸ್ಯೆಗಳ ಪರಿಹಾರ ಅಲ್ಲಾಹನಲ್ಲಿ ಕೂಡಾ ಕೇಳಬೇಕು. ಆದರೆ ದರ್ಗಾದ ಪವಾಢದಿಂದ ಅಲ್ಲಾಹನು ಸಮಸ್ಯೆಯನ್ನು ಇತ್ಯರ್ಥಪಡಿಸುತ್ತಾನೆ ಎನ್ನುವುದನ್ನು ತಳ್ಳಿ ಹಾಕುವ ಪಂಗಡ ಬೆಳೆದಿದೆ. ಅವರಿಗೆ ಧರ್ಮದ ಬಗ್ಗೆ ತಿಳುವಳಿಕೆಯ ಕೊರತೆ ಇದೆ ಈ ಕಾರಣದಿಂದ ಅವರು ಧರ್ಮವನ್ನು ಭಿನ್ನ ನಿಲುವಿನಲ್ಲಿ ಅರ್ಥೈಸುತ್ತಾರೆ ಎಂದರು.
ಮಲ್ಜಹ್‌ದವತ್ತಿಲ್ ಇಸ್ಲಾಮಿಯ ಉಜಿರೆಯ ಚಯರ್‌ಮ್ಯಾನ್ ಅಸ್ಸಯ್ಯಿದ್ ಅಲ್‌ಹಾದಿ ಜಲಾಲುದ್ದೀನ್ ತಂಙಳ್ ಅಲ್ ಅಲವಿ ಅಲ್ ಮದನಿ ದುವಾ ಆಶೀರ್ವಚನ ನೀಡಿದರು. ಶಿಹಾಬುದ್ದೀನ್ ತಂಙಳ್ ಉದ್ಯಾವರ, ಮಹ್ಮೂದುಲ್ ಫೈಝಿ ವಾಲೆಮಂಡೋವು ಉಸ್ತಾದ್, ರಫೀಕ್ ಸಅದಿ ದೇಲಂಪಾಡಿ, ಕಟ್ಟತ್ತಿಲ್ಲ ಜುಮಾ ಮಸೀದಿ ಖತೀಬ್ ಅಬ್ದುಲ್ ಜಲೀಲ್ ಸಖಾಫಿ,ಅಬ್ದುಲ್ ಖಾದರ್ ಮದನಿ, ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಅಗರಿ, ಉಪಾಧ್ಯಕ್ಷ ಮುಹಮ್ಮದ್ ಕುಂಞಿ, ಪ್ರ. ಕಾರ್ಯದರ್ಶಿ ಪಿ. ಇಬ್ರಾಹಿಂ ನಾಟೆಕಲ್ಲು, ಕೋಶಾಧಿಕಾರಿ ಕೆ.ಪಿ. ಅಬ್ದುಲ್ ಖಾದರ್, ಕಾರ್ಯದರ್ಶಿ ಕೆ.ಎಂ. ಮುಹ್ಯುದ್ದೀನ್ ಮದನಿ
ಮೊದಲಾದವರು ಉಪಸ್ಥಿತರಿದ್ದರು.ಕಟ್ಟತ್ತಿಲ್ಲ ಜುಮಾ ಮಸೀದಿಯ ಗೌರವಾಧ್ಯಕ್ಷ ಕೆ.ಎಂ. ಉಮರ್ ಮದನಿ ಅತಿಥಿಗಳನ್ನು ಸ್ವಾಗತಿಸಿದರು.