ಹಾರಾಡಿ ಶಾಲೆಯಲ್ಲಿ ವಿಜ್ಞಾನ ಮತ್ತು ಮೆಟ್ರಿಕ್ ಮೇಳ
ಪುತ್ತೂರು, ಮಾ.13: ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿ ಇಲ್ಲಿನ ಪೃಥ್ವಿ ವಿಜ್ಞಾನ ಸಂಘ ಹಾಗೂ ಆರ್ಯಭಟ ಗಣಿತ ಸಂಘಗಳ ವತಿಯಿಂದ ವಿಜ್ಞಾನ ಮೇಳ ಮತ್ತು ಗಣಿತ ಮೇಳ ಕಾರ್ಯಕ್ರಮಗಳು ಇತ್ತೀಚೆಗೆ ಶಾಲೆಯಲ್ಲಿ ಜರಗಿತು.
ವಿಜ್ಞಾನ ಮೇಳವನ್ನು ಬಲೂನ್ ಹಾರಿಸುವ ಮೂಲಕ ಹಿರಿಯ ಶಿಕ್ಷಕಿ ರತ್ನಮ್ಮ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪುತ್ತೂರು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪ್ರದೀಪ್ ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕ ಮುದರ ಎಸ್. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಮಹೇಶ್ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನ ಮತ್ತು ಗಣಿತ ಸಂಘದ ಸದಸ್ಯರಾದ ಶ್ವೇತಾ, ನಿಶಾಂತ್, ಶ್ರಾವ್ಯ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ವಿದ್ಯಾರ್ಥಿಗಳು ತಾವು ತಯಾರಿಸಿದ ವಿಜ್ಞಾನ ಮತ್ತು ಗಣಿತದ ಮಾದರಿಗಳನ್ನು ಪ್ರದರ್ಶಿಸಿದರು.
ಶಾಲಾ ಆವರಣದಲ್ಲಿ ನಡೆಸಲಾಗಿದ್ದ ಮೆಟ್ರಿಕ್ ಮೇಳವನ್ನು ಹಿರಿಯ ಶಿಕ್ಷಕಿ ಹೇಮಲತಾ ಉದ್ಘಾಟಿಸಿದರು.