ಮಹಾಬಲೇಶ್ವರ ಕ್ಲಾಸಿಕ್ ಗೇಟ್‌ವೇ ಹಾಗೂ ಕ್ಲಾಸಿಕ್ ಪರ್ಲ್ ಸಿದ್ಧ
ಮಂಗಳೂರು, ಮಾ.13: ಮಂಗಳೂರಿನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಮಹಾಬಲೇಶ್ವರ ಪ್ರಮೋಟರ್ಸ್ ಆ್ಯಂಡ್ ಬಿಲ್ಡರ್ಸ್‌ನ ಎರಡು ವಸತಿ ಸಮುಚ್ಚಯ ಯೋಜನೆಗಳು ಸಂಪೂರ್ಣ ಸಿದ್ಧಗೊಂಡು ನಿಂತಿವೆ. ಮಂಗಳೂರಿನ ಪಂಪ್‌ವೆಲ್ ಸರ್ಕಲ್‌ನಲ್ಲಿ ಐಶಾರಾಮಿ, ಅತ್ಯುತ್ತಮ ಗುಣಮಟ್ಟದ, ಸರ್ವ ಸೌಲಭ್ಯಗಳುಳ್ಳ ‘ಕ್ಲಾಸಿಕ್ ಗೇಟ್‌ವೇ’ ಪ್ರೀಮಿಯಂ ರೆಸಿಡೆನ್ಸೀಸ್ ಹಾಗೂ ಶಕ್ತಿನಗರದಲ್ಲಿ ಕೈಗೆಟಕುವ ದರದಲ್ಲಿ ಎಲ್ಲ ಸವಲತ್ತುಗಳುಳ್ಳ ‘ಕ್ಲಾಸಿಕ್ ಪರ್ಲ್’ ಲಕ್ಸುರಿ ರೆಸಿಡೆನ್ಸೀಸ್ ಸಿದ್ಧಗೊಂಡಿವೆ. ರಾಜಿಯಿಲ್ಲದ ಗುಣಮಟ್ಟ, ವಿಶಾಲ ಕೊಠಡಿಗಳು, ಅತ್ಯಾಧುನಿಕ ವಿನ್ಯಾಸ ಹಾಗೂ ಸರ್ವ ಸವಲತ್ತುಗಳಿಗೆ ಈಗಾಗಲೇ ಜನಮನ್ನಣೆ ಪಡೆದಿರುವ ಸಂಸ್ಥೆಯಾಗಿದೆ ಮಹಾಬಲೇಶ್ವರ ಪ್ರಮೋಟರ್ಸ್ ಆ್ಯಂಡ್ ಬಿಲ್ಡರ್ಸ್. ಮಂಗಳೂರು ಹಾಗೂ ಬೆಂಗಳೂರು ನಗರಗಳಲ್ಲಿ ಹಲವಾರು ವಸತಿ, ವಾಣಿಜ್ಯ ಸಮುಚ್ಚಯಗಳನ್ನು ನಿರ್ಮಿಸಿರುವ ಈ ಸಂಸ್ಥೆ ಇತ್ತೀಚೆಗೆ ಮಂಗಳೂರಿನ ಶಕ್ತಿನಗರವನ್ನು ಮಾದರಿ ಹೊಸ ನಗರವಾಗಿ ರೂಪಿಸುತ್ತಿದೆ. ಅತ್ಯಾಧುನಿಕ ವಸತಿ ಸಮುಚ್ಚಯಗಳು, ಧಾರ್ಮಿಕ ಕೇಂದ್ರ, ಶಾಲೆ ಇತ್ಯಾದಿಗಳ ಮೂಲಕ ಮಂಗಳೂರು ನಗರದೊಳಗೇ ಹಸಿರು ಹಾಗೂ ಆಹ್ಲಾದಕರ ವಾತಾವರಣದಲ್ಲಿ ಆಕರ್ಷಕ, ಆಧುನಿಕ ವಸತಿ ವ್ಯವಸ್ಥೆಯನ್ನು ಕಲ್ಪಿಸುತ್ತಿದೆ. ಕೆ.ಸಿ.ನಾಯ್ಕಿ ಸಂಸ್ಥಾಪಕರಾಗಿ ಮುನ್ನಡೆಸುತ್ತಿರುವ ಮಹಾಬಲೇಶ್ವರ ಪ್ರಮೋಟರ್ಸ್ ಆ್ಯಂಡ್ ಬಿಲ್ಡರ್ಸ್ 1961ರಲ್ಲಿ ಆರಂಭಗೊಂಡಿದ್ದು, ಪ್ರಸ್ತುತ ಅವರ ಪುತ್ರ ಸಂಜಿತ್ ನಾಯ್ಕಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಸಂಸ್ಥೆಯಿಂದ ಮಂಗಳೂರು ಹಾಗೂ ಬೆಂಗಳೂರುಗಳಲ್ಲಿ ಈಗಾಗಲೇ 24ಕ್ಕೂ ಅಧಿಕ ಅತ್ಯಾಧುನಿಕ, ಆಕರ್ಷಕ ವಿನ್ಯಾಸದ ವಸತಿ, ವಾಣಿಜ್ಯ ಸಮುಚ್ಚಯಗಳನ್ನು ನಿರ್ಮಿಸಲಾಗಿದೆ. ಮಂಗಳೂರಿನ ಶಕ್ತಿನಗರದಲ್ಲಿ ಕ್ಲಾಸಿಕ್ ವಿಲೇಜ್, ಕ್ಲಾಸಿಕ್ ರೂಬಿ ಹಾಗೂ ಕ್ಲಾಸಿಕ್ ಪರ್ಲ್ ಯೋಜನೆಗಳು ಸಿದ್ಧಗೊಳ್ಳುತ್ತಿವೆ. ಬೆಂಗಳೂರಿನ ಯಲಹಂಕದಲ್ಲಿ ಕ್ಲಾಸಿಕ್ ಎಬೊನಿ ಹೊಸ ಯೋಜನೆ ಆರಂಭಗೊಂಡಿದೆ.
ಕ್ಲಾಸಿಕ್ ಗೇಟ್‌ವೇ ವಿಶೇಷತೆಗಳು: ಹೆಸರಿಗೆ ತಕ್ಕಂತೆ ಬೆಂಗಳೂರು, ಕೇರಳ, ಮುಂಬೈಗಳಿಂದ ಮಂಗಳೂರಿಗೆ ಬರುವವರು ನಗರ ಪ್ರವೇಶವಾಗುವ ಪಂಪ್‌ವೆಲ್(ಮಹಾವೀರ ವೃತ್ತ)ನಲ್ಲಿ ಈ ಆಕರ್ಷಕ ವಿಲಾಸಿ ವಸತಿ ಸಮುಚ್ಚಯ ಎದ್ದು ನಿಂತಿದೆ. ಮಹಾಬಲೇಶ್ವರ ಸಂಸ್ಥೆಯ ಎಲ್ಲ ಯೋಜನೆಗಳಲ್ಲಿರುವಂತೆ ವಿಶಾಲ ಸ್ಥಳ, ವಿಶಿಷ್ಟ ವಿನ್ಯಾಸ ಹಾಗೂ ವಿಲಾಸಿ ಸೌಲಭ್ಯಗಳು ಮೇಳೈಸಿರುವ ಗೇಟ್‌ವೇಯಲ್ಲಿ ಅತ್ಯಾಧುನಿಕ ಲಿಫ್ಟ್, ಸ್ವಿಮ್ಮಿಂಗ್ ಪೂಲ್, ಜಿಮ್ನೇಶಿಯಂನೊಂದಿಗೆ ಕ್ಲಬ್ ಹೌಸ್, ಪಾರ್ಟಿ ಹಾಲ್, ವಿಶಿಷ್ಟ ಲ್ಯಾಂಡ್ ಸ್ಕೇಪಿಂಗ್, ಐಶಾರಾಮಿ ದ್ವಿಗುಣ ಎತ್ತರದ ಎಂಟ್ರೆನ್ಸ್ ಲಾಬಿ, 8 ಮಂದಿ ಮತ್ತು 13 ಮಂದಿ ಸಾಮರ್ಥ್ಯದ ಪ್ರತ್ಯೇಕ ಲಿಫ್ಟ್/ಬೆಡ್ ಲಿಫ್ಟ್, ಸಾಮಾನ್ಯ ಪ್ರದೇಶದಲ್ಲಿ ಭದ್ರತೆಗಾಗಿ ಸಿಸಿಟಿವಿ ಕ್ಯಾಮರಾ, ಸಂದರ್ಶಕರಿಗಾಗಿ ಕಾರು ಪಾರ್ಕ್, ಮಕ್ಕಳ ಆಟದ ಜಾಗ, ಸಣ್ಣಪುಟ್ಟ ಪಾರ್ಟಿಗಳಿಗಾಗಿ ವಿಶಾಲವಾದ ತಾರಸಿ ಪ್ರದೇಶಗಳು ಲಭ್ಯ.
ಕ್ಲಾಸಿಕ್ ಪರ್ಲ್ ವಿಶೇಷತೆಗಳು: ಮಂಗಳೂರಿನಲ್ಲಿ ಬೆಳೆಯುತ್ತಿರುವ ನೂತನ ನಗರ ಶಕ್ತಿನಗರದಲ್ಲಿ ಎಲ್ಲ ಸವಲತ್ತುಗಳುಳ್ಳ ಅತ್ಯಾಧುನಿಕ ವಸತಿ ಸಮುಚ್ಚಯವನ್ನು ಕೈಗೆಟಕುವ ಬೆಲೆಯಲ್ಲಿ ನೀಡುವ ಆಶಯದೊಂದಿಗೆ ಕ್ಲಾಸಿಕ್ ಪರ್ಲ್ ಅನ್ನು ನಿರ್ಮಿಸಲಾಗಿದೆ. 8 ಮಂದಿ ಮತ್ತು 15 ಮಂದಿಯನ್ನು ಸಾಗಿಸಬಲ್ಲ ಪ್ರತ್ಯೇಕ ಲಿಫ್ಟ್‌ಗಳು, ಬೇಬಿ ಪೂಲ್‌ನೊಂದಿಗೆ ಸ್ವಿಮ್ಮಿಂಗ್ ಪೂಲ್, ಯೋಗ/ಧ್ಯಾನ ಮತ್ತು ವಾಚನಾಲಯ (ಒಳಾಂಗಣ ಬಹುಪಯೋಗಿ ಹಾಲ್), ತಾರಸಿಯಲ್ಲಿ ಬಹುಪಯೋಗಿ ಹಾಲ್, ಜಿಮ್ನೇಶಿಯಂ, ಕ್ಲಬ್ ಹೌಸ್, ಟೇಬಲ್ ಟೆನ್ನಿಸ್, ಪೂಲ್ ಟೇಬಲ್, ಚೆಸ್, ಕೇರಂ, ಕಾರ್ಡ್ಸ್ ಮೊದಲಾದವುಗಳು, ವಿಶಾಲವಾದ ಲ್ಯಾಂಡ್‌ಸ್ಕೇಪಿಂಗ್, ಮಕ್ಕಳ ಆಟದ ಜಾಗ, ಪೈಪ್‌ನಿಂದ ಅಡುಗೆ ಅನಿಲ ಸರಬರಾಜು ವ್ಯವಸ್ಥೆ, ಸಂದರ್ಶಕರ ಕಾರು ಪಾರ್ಕ್ ಸೌಲಭ್ಯಗಳು ಇಲ್ಲಿ ಲಭ್ಯ. ಈ ಎರಡೂ ಪ್ರಾಜೆಕ್ಟ್‌ಗಳು ಎಲ್ಲ ಬ್ಯಾಂಕ್‌ಗಳಿಂದಲೂ ಅಂಗೀಕೃತಗೊಂಡಿವೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ.: 9972762552ನ್ನು ಸಂಪರ್ಕಿಸಬಹುದು.