ಫಾದರ್ ಮುಲ್ಲರ್ ಸಿಮ್ಯುಲೇಶನ್ ಮತ್ತು ಕೌಶಲ್ಯ ಕೇಂದ್ರ ಉದ್ಘಾಟನೆ
ಮಂಗಳೂರು, ಮಾ. 13: ನಗರದ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ವತಿಯಿಂದ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಸಿಮ್ಯುಲೇಶನ್ ಮತ್ತು ಕೌಶಲ್ಯ ಕೇಂದ್ರವನ್ನು ಯುಜಿಸಿ ಸಹಕಾರ್ಯದರ್ಶಿ ಮಂಜು ಸಿಂಗ್ ರವಿವಾರ ಉದ್ಘಾಟಿಸಿದರು. ಶಿವಮೊಗ್ಗ ಬಿಷಪ್ ಅತಿ.ವಂ.ಡಾ.ಫ್ರಾನ್ಸಿಸ್ ಸೆರಾವೋ ಆಶೀರ್ವಚನ ಮಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಿಮ್ಯುಲೇಟರ್ ಶಿಕ್ಷಣ ತಜ್ಞ ಪ್ರೊ.ದಿನಕರ್ ಆರ್. ಪೈ ಮಾತನಾಡಿ, ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಮಾನವ ದೇಹಕ್ಕೆ ಪರ್ಯಾಯವಾಗಿ ಬಳಸಬಹುದಾದ ಸಿಮ್ಯುಲೇಶನ್ ಪದ್ಧತಿಯನ್ನು ಅಳವಡಿಸುವಂತೆ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಎಲ್ಲ ಮೆಡಿಕಲ್ ಕಾಲೇಜುಗಳಿಗೆ ಸೂಚಿಸಿದೆ. ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ರೋಗಿಗಳ ಬಳಕೆ ಇದರಿಂದ ತಪ್ಪಲಿದ್ದು, ಈ ಕಾರಣಕ್ಕಾಗಿ ಸಿಮ್ಯುಲೇಶನ್ ಕಡ್ಡಾಯಗೊಳಿಸಲಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳು ಪಠ್ಯಕ್ರಮದಲ್ಲಿ ಓದಿರುವುದನ್ನು ಪರಿಣಾಮಕಾರಿಯಾಗಿ ಅಧ್ಯಯನ ಮಾಡಲು ಸಿಮ್ಯುಲೇಶನ್ ಅನುಕೂಲವಾಗಿದೆ ಎಂದರು.
ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಡೀನ್ ಡಾ.ಜಯಪ್ರಕಾಶ್ ಆಳ್ವ, ಫಾದರ್ ಮುಲ್ಲರ್ ಸಿಮ್ಯುಲೇಶನ್ ಮತ್ತು ಕೌಶಲ್ಯ ಕೇಂದ್ರದ ಆಡಳಿತಾತ್ಮಕ ಉಸ್ತುವಾರಿ ಡಾ.ರಿತೇಶ್ ಜೋಸೆಫ್ ಡಿಕುನ್ಹ, ಡಾ.ಲುಲು ಉಪಸ್ಥಿತರಿದ್ದರು.